ಅಷ್ಟಾಹ್ನಿಕ ಪರ್ವ
ಗೋಚರ
ಜೈನ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಆಷಾಢ, ಕಾರ್ತಿಕ ಮತ್ತು ಫಾಲ್ಗುಣ ಮಾಸಗಳ ಶುಕ್ಲಪಕ್ಷ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಆಚರಿಸಲಾಗುವುದು. ಇದಕ್ಕೊಂದು ಸಾಂಪ್ರದಾಯಿಕ ನಂಬುಗೆಯ ಹಿನ್ನೆಲೆಯಿದೆ. ಈ ಭೂಮಿಯಲ್ಲಿರುವ ದ್ವೀಪಗಳಲ್ಲಿ ಎಂಟನೆಯ ನಂದೀಶ್ವರ ದ್ವೀಪದಲ್ಲಿಯ 52 ಜಿನಾಲಯಗಳ ಪೂಜೆಯನ್ನು ಸ್ವರ್ಗವಾಸಿ ದೇವತೆಗಳು ಮಾತ್ರ ಮಾಡಲು ಸಾಧ್ಯ. ಇದು ಮಾನವರು ಆ ಸಮಯದಲ್ಲಿ ಆಚರಿಸುವ ಹಬ್ಬವಾಗಿದೆ. ಜೈನರಲ್ಲಿ ಹಬ್ಬಗಳ ಆಚರಣೆ ಎರಡು ಮಹಾನ್ ಉದ್ದೇಶಗಳನ್ನು ಹೊಂದಿರುತ್ತದೆ, ಹಬ್ಬಗಳು ದೈನಂದಿನ ಜೀವನದ ಬೇಸರ ಹೋಗಲಾಡಿಸಲು ಮತ್ತು ಮುಂದಿನ ದಿನಗಳಿಗೆ ಚೇತನ ತುಂಬುವುದು, ಎರಡೆನಯ ಉದ್ದೇಶ ಆತ್ಮನ ಸಮೀಪ ಸರಿಯುವುದು . ಪ್ರತಿವರ್ಷ ಆಷಾಡ,ಕಾರ್ತಿಕ,ಪಾಲ್ಗುಣ ಮಾಸಗಳ ಶುಕ್ಲ ಅಸ್ಟಮಿಯಿಂದ ಪೌರ್ಣಮಿಯವರೆಗೆ 8 ದಿನಗಳ ಕಾಲ ಇಲ್ಲಿ ಅರ್ಹತ್ಪರಮೇಶ್ಟಿಗಳಿಗೆ ಪೂಜಾಅಭಿಷೇಕ ಗಳು ನಡೆಯುವುದು.