ಅಷ್ಟಮಹಾಸಿದ್ಧಿಗಳು
ಗೋಚರ
ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ. ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. ಇವನ್ನು ಎಂಟೆಂದು ಪರಿಗಣಿಸಿದ್ದಾರೆ
ಇವು ಯಾವುವೆಂದರೆ
- ಅಣಿಮಾ (ಅತಿ ಸಣ್ಣ ಆಕಾರವನ್ನು ಪಡೆಯುವುದು)
- ಮಹಿಮಾ (ಅತಿ ದೊಡ್ಡ ಆಕಾರವನ್ನು ಪಡೆಯುವುದು)
- ಗರಿಮಾ (ತುಂಬ ಭಾರವಾಗುವುದು)
- ಲಘಿಮಾ (ತುಂಬ ಹಗುರವಾಗಿ ಗಾಳಿಯಲ್ಲಿ ಹಾರಾಡುವುದು)
- ಪ್ರಾಪ್ತಿ (ಸಾಮಾನ್ಯವಾಗಿ ಪಡೆಯಲಾರದುದನ್ನು ಪಡೆಯುವುದು)
- ಪ್ರಾಕಾಮ್ಯ (ಸ್ವಲ್ಪವಾಗಿರುವ ಪದಾರ್ಥವನ್ನು ಹೆಚ್ಚಿಸುವ ಶಕ್ತಿ)
- ಈಶಿತ್ವ (ಎಲ್ಲ ಸಂದರ್ಭ ಗಳಲ್ಲಿಯೂ ಒಡೆತನವನ್ನು ಮಾಡಿ ತನ್ನ ಪ್ರಭಾವವನ್ನು ಬೀರುವುದು)
- ವಶಿತ್ವ (ಇಂದ್ರಿಯಗಳನ್ನು ನಿಯಮನ ಮಾಡಿಕೊಳ್ಳುವುದು)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: