ಅಶೋಕ ನಾಯಕ್

ವಿಕಿಪೀಡಿಯ ಇಂದ
Jump to navigation Jump to search

ಅಶೋಕ ನಾಯಕ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ೧೯೭೩ ರಲ್ಲಿ ಎಚ್ಎಎಲ್ ಕಾರ್ಖಾನೆಗೆ ಮ್ಯಾನೆಜ್‌ಮೆಂಟ್ ಟ್ರೇನಿಯಾಗಿ ಸೇರಿದರು. ತಮ್ಮ ೩೫ ವರ್ಷಗಳ ಸುದೀರ್ಘ ವೃತ್ತಿಪರ ಬದುಕಿನಲ್ಲಿ ಇವರು ನಮ್ಮ ಸಂಸ್ಥೆಯ ಉತ್ಪಾದನೆ, ಗುಣಖಾತರಿ, ಯೋಜ, ಗ್ರಾಹಕಸೇವೆ ಮತ್ತು ನಿರ್ಯಾತ ಕ್ಷೇತ್ರಗಳ ಮುಖ್ಯ ಸ್ಥಾನಗಳನ್ನು ಅಲಂಕರಿಸಿದ್ದಾರೆ. ೧೯೮೯ ರಿಂದ ೧೯೯೮ ರ ವರೆಗಿನ ಅವಧಿಯಲ್ಲಿ ಇವರು ಎಚ್ಎಎಲ್ ಇಂಜಿನ್ ವಿಭಾಗದ ಉತ್ಪಾದನಾ ತಂತ್ರಜ್ಞಾನದ ಉಸ್ತುವಾರಿ ಹಾಗೂ ಆರ್ಟೂಸ್ಟ್, ಗ್ಯಾರೆಟ್ ಮತ್ತು ಅಡೂರ್ ಯಂತ್ರ ಮತ್ತು ಪರಿಕರಗಳ ಜ್ಯೋಡಣೆ, ಕಾಯಕಲ್ಪ, ದುರಸ್ತಿಗಳ ಮೇಲ್ವಿಚಾರಣೆ ನಡೆಸಿದ್ದಾರೆ. ೨೦೦೪ ರಲ್ಲಿ ಇವರು ಎಚ್ಎಎಲ್ ಏರೋಸ್ಪೇಸ್ ವಿಭಾಗದ ಜನರಲ್ ಮ್ಯಾನೇಜರ್ ಸ್ಥಾನಕ್ಕೇರಿ ಜಿ.ಎಸ್.ಎಲ್.ವಿ. ಮಾರ್ಕ ತ್ರೀ, ರಾಕೆಟ್ ಹಂದರ ಮತ್ತು ಇಂಧನ ಕೋಶಗಳ ನಿರ್ಮಾಣದ ಜೊತೆಗೆ ಇಂಜನಿಯರಿಂಗ್ ಸೇವೆ, ಎಚ್ಎಎಲ್ ಜಮೀನು ನಿರ್ವಹಣೆ ಹಾಗೂ ಕಾರ್ಪೋರೇಟ್ ಸಾಮಾಜಿಕ ಬದ್ಧತೆಯ ಕ್ಷೇತ್ರಗಳನ್ನು ನಿಭಾಯಿಸಿದ್ದಾರೆ. ಅನಂತರ ಇವರು ೨೦೦೬ ರಲ್ಲಿ ಬೆಂಗಳೂರಿನ ಎಚ್ಎಎಲ್ ಏರ್‌ಕ್ರಾಫ್ಟ್ ವಿಭಾಗದ ಜನರಲ್ ಮ್ಯಾನೇಜರ್ ಆಗಿ ಪ್ರಸಕ್ತ ದಿನದ ತಂತ್ರಜ್ಞಾನ ಮತ್ತು ಜಾಗ್ವಾರ್ ಉನ್ನತೀಕರಣದ ಬಗ್ಗೆ ಗಮನ ಕೇಂದ್ರೀಕರಿಸಿದರು. ಇದೇ ಸಂದರ್ಭದಲ್ಲಿ ಇವರು ಮಾನವರಹಿತ ವಿಮಾನ ನಿರ್ಮಾಣಕ್ಕೊಂದು ಗಟ್ಟಿ ನೆಲೆ ಒದಗಿಸಿದರು ಹಾಗೂ ಹಾಕ್ ಮತ್ತು ಐ.ಜೆ.ಟಿ. ಯೋಜನೆಗಳ ಸ್ಪೂರ್ತಿಸೆಲೆಯಾದರು. ಹಳೆಯ ಸಂಪ್ರದಾಯವನ್ನು ಬದಿಗೊತ್ತಿ ನಿರ್ಯಾತದ ಬಗ್ಗೆ ಹೆಚ್ಚು ಗಮನ ಹರಿಸಿದ ಫಲವಾಗಿ ವಿಮಾನ ಪರಿಕರಗಳ ಮೂಲ ತಯಾರಕರು ಇತ್ತ ಮುಖ ಮಾಡುವಂತಾಯಿತು. ಲೀನ್ ನಿರ್ವಹಣೆಗೆ ಚಾಲನೆ ದೊರೆತು ಬೋಯಿಂಗ್ ಉತ್ಪಾದನಾ ವ್ಯವಸ್ಥೆಗೆ ನಾಂದಿ ಹಾಡಿತು. ಇಂದಿಗೂ ಎಚ್ಎಎಲ್ ವಿಮಾನ ವಿಭಾಗವು ಬೋಯಿಂಗ್ ಉತ್ಪಾದನಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ವೈವಿಧ್ಯಮಯ ತಂತ್ರಜ್ಞಾನ ಮತ್ತು ನಾನಾ ರೀತಿಯ ಉತ್ಪನ್ನ ಶ್ರೇಣಿಯ ಕುರಿತಾದ ಅನನ್ಯ ಜ್ಞಾನ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ಕುರಿತಾದ ಹೆಚ್ಚಿನ ತಿಳುವಳಿಕೆಗಳು ಇವರನ್ನು ಎಚ್ಎಎಲ್ ಬೆಂಗಳೂರು ಸಮುಚ್ಚಯದ ಎಂ. ಡಿ. ಹುದ್ದೆಗೇರಿಸಿದವು. ಆ ಮೂಲಕ ಏಳು ಪ್ರಮುಖ ವಿಭಾಗಗಳ ಮೇಲು ಉಸ್ತುವಾರಿ, ವಿಮಾನಗಳ ಸಿದ್ಧತೆ ಹಾಗೂ ಗ್ರಾಹಕಸೇವೆಗಳೊಂದಿಗೆ ಹಾಕ್‌ನಂತಹ ಹಲವಾರು ಹೊಸ ಯೋಜನೆಗಳ ಜವಾಬ್ದಾರಿ ಇವರ ಹೆಗಲೇರಿತು. ಐ.ಜೆ.ಟಿ ಮತ್ತು ಎಲ್.ಸಿ.ಎ.ಗಳ ತಯಾರಿಕಾ ಹಂತಗಳು ಉತ್ಕರ್ಷ ಕಂಡವು. ಉತ್ಪಾದನೆ, ನಿರ್ಯಾತ ಮತ್ತು ವಹಿವಾಟುಗಳು ಗಣನೀಯ ಸೂಚ್ಯಂಕ ದಾಖಲಿಸಿದವು. ದಿನಾಂಕ ೧ ಏಪ್ರಿಲ್ ೨೦೦೯ ಇವರ ಜೀವನದ ಪರ್ವದಿನ. ಅಂದು ಶ್ರೀಯುತರು ಎಚ್ಎಎಲ್ ಎಂಬ ಬೃಹತ್ ಸಂಸ್ಥೆಯ ಚೇರ್ಮನ್ ಆಗಿ ಅಧಿಕಾರ ಸ್ವೀಕರಿಸಿದರು. ಇವರ ನೇತೃತ್ವದಲ್ಲಿ ಎಚ್ಎಎಲ್ ಸಂಸ್ಥೆಯು ಉತ್ಪಾದನೆ, ನಿರ್ಯಾತ ಮತ್ತು ಮಾರಾಟ ವಹಿವಾಟುಗಳಲ್ಲಿ ಗಣನೀಯ ಸಾಧನೆ ಮಾಡುತ್ತಿದೆ.