ಅವ್ವಾಕುಮ್ ಪೆಟ್ರೊವಿಚ್
ಗೋಚರ
1621-1682. ರಷ್ಯನ್ ಬರೆಹಗಾರ. ನಿಕನ್ ಎನ್ನುವ ಮತಾಧಿಕಾರಿ ಆಚರಣೆಗೆ ತಂದ ಮಾರ್ಪಾಡುಗಳನ್ನು ವಿರೋಧಿಸಿದುದರಿಂದ ಇವನನ್ನು ಸೈಬೀರಿಯಕ್ಕೆ ಗಡಿಪಾರು ಮಾಡಿದ್ದಲ್ಲದೆ 1682ರಲ್ಲಿ ಸುಡಲಾಯಿತು. ಇವನ ಪತ್ರಗಳೂ ಆತ್ಮವೃತ್ತವೂ (1670-82) ಸತ್ತ್ವಯುತವಾದ, ತನ್ನ ನಂಬಿಕೆಗಾಗಿ ಯಾವ ತ್ಯಾಗಕ್ಕಾದರೂ ಸಿದ್ಧವಾದ, ಚೇತನವನ್ನು ಪ್ರತಿಬಿಂಬಿಸುತ್ತವೆ. ಶಕ್ತಯುತವಾದ ಸುಸ್ಪಷ್ಟ ಶೈಲಿ ಇವನದು. ಸಾಹಿತ್ಯದ ಸ್ಲವಾನಿಕ್ ಭಾಷೆಯನ್ನು ತಿರಸ್ಕರಿಸಿ ಬಳಕೆಯಲ್ಲಿದ್ದ ರಷ್ಯನ್ ಭಾಷೆಯನ್ನು ಉಪಯೋಗಿಸಿದವರಲ್ಲಿ ಈತ ಮೊದಲಿಗ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Life of Avvakum, academic edition with commentary (in Russian)
- Avvakum's letters to the Tzar and Old Believers (pub. Paris, 1951, in Russian)
- Parallel text version of Life of Avvakum Archived 2004-11-09 ವೇಬ್ಯಾಕ್ ಮೆಷಿನ್ ನಲ್ಲಿ.
- English and Russian Articles on Avvakum by P. Hunt
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: