ಅವಿರತ ಪ್ರತಿಷ್ಠಾನ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಅವಿರತ ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ. ಅವಿರತ ಸಂಸ್ಥೆಯು ಏಪ್ರಿಲ್ 15 2007 ರಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಂದ ಉದ್ಘಾಟನೆಯಾಯಿತು.
ಆವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್‌ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು , ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ. ನಾವು ಮಾಡುವ ಎಲ್ಲಾ ಕೆಲಸಗಳಲ್ಲಿ ಕನ್ನಡತನವನ್ನು ಬಿಂಬಿಸುತ್ತ, ಮೂಲಭೂತ ಸಮಸ್ಯೆಗಳತ್ತ ಗಮನಹರಿಸಲಾಗುವುದು. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪರಿಸರ ಹಾಗು ಸಾಮಾಜಿಕ ಸಮಸ್ಯೆಗಳತ್ತ ವಿಭಿನ್ನ ರೀತಿಯಲ್ಲಿ ಗಮನಹರಿಸಲಾಗುವುದು. ಅವಿರತದಲ್ಲಿ ಎಲ್ಲಾ ಕ್ಷೇತ್ರದ ಪರಿಣತರ ಸದಸ್ಯರು ಇದ್ದು, ನಿರಂತರವಾಗಿ ತಮ್ಮನ್ನು ನಾಡಿನ ಏಳಿಗೆಗೆ ತೊಡಗಿಸಿಕೊಳ್ಳಲು ಸಿದ್ಧರಿದ್ದಾರೆ.
ಸೇವೆ
[ಬದಲಾಯಿಸಿ]ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆ, ವೃತ್ತಿ ಮಾರ್ಗದರ್ಶನ ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ವಿವಿಧ ಶಾಖೆಗಳು ನಿರ್ವಹಿಸುತ್ತವೆ.
ವೃತ್ತಿ ದಾರಿದೀಪ
[ಬದಲಾಯಿಸಿ]ಹಳ್ಳಿ ಆರೋಗ್ಯ
[ಬದಲಾಯಿಸಿ]ಕಂಪ್ಯೂಟರ್ ಕಲಿಕೆ
[ಬದಲಾಯಿಸಿ]ಸ್ಪರ್ಧೆಗಳು
[ಬದಲಾಯಿಸಿ]ಮಾತು ಮಂಥನ
[ಬದಲಾಯಿಸಿ]ದೇಸಿ ಸೊಗಡು
[ಬದಲಾಯಿಸಿ]ಚಲನಚಿತ್ರ ಚರ್ಚೆ
[ಬದಲಾಯಿಸಿ]ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ
[ಬದಲಾಯಿಸಿ]ಉತ್ತರ ಕರ್ನಾಟಕದ ಅತಿವೃಷ್ಟಿಯ ಮೊದಲ ದಿನಗಳಲ್ಲಿ ಪ್ರವಾಹ ಪೀಡಿತ ಹಳ್ಳಿಗಳಿಗೆ ಭೇಟಿ ನೀಡಿ ಅತ್ಯಗತ್ಯ ಆಹಾರ ಪದಾರ್ಥ, ಹಾಸು, ಹೊದಿಕೆ ಮತ್ತು ಪಾತ್ರೆಗಳನ್ನು ಒದಗಿಸಿ ಸಾಂತ್ವನ ನೀಡಲಾಗಿದೆ. ಈ ಪ್ರಯತ್ನದ ಮುಂದುವರಿಕೆಯಾಗಿ, ಒಂದು ಶಾಶ್ವತ ಹಾಗು ಸಾರ್ಥಕ ಸೇವೆಯ ಸಲುವಾಗಿ ನೆರೆ ಪೀಡಿತ ಪುನರ್ವಸಿತ ಶಾಲಿಗನೂರು ಗ್ರಾಮದಲ್ಲಿ (ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು) ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಪಂಚಾಯತಿಯಿಂದ ಜಾಗ ನಿಗದಿಯಾಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯೊಡನೆ ಶಾಲಾ ನಿರ್ಮಾಣಕ್ಕೆ 'ಒಡಂಬಡಿಕೆ' ಮಾಡಿಕೊಳ್ಳಲಾಗಿದೆ. ಶಾಲೆಯ ವಿನ್ಯಾಸ, ಯೋಜನೆ, ಅಂದಾಜು ವೆಚ್ಚ, ಟೆಂಡರ್ ಪ್ರಕ್ರಿಯೆಗಳ ನಂತರ ಸಾರ್ವಜನಿಕರ ದೇಣಿಗೆ ನೆರವಿನಿಂದ ಅವಿರತ ಪ್ರತಿಷ್ಠಾನ 2011 ರ ನವೆಂಬರ್ ನಲ್ಲಿ ಶಾಲೆಯ ಉದ್ಘಾಟನೆ ಮಾಡಿದೆ.
ಅವಿರತ ಸಮಿತಿ
[ಬದಲಾಯಿಸಿ]- ಅಧ್ಯಕ್ಷರು: ಕೆಟಿ ಸತೀಶ್ ಗೌಡ
ವಿಳಾಸ: ಅವಿರತ ಪ್ರತಿಷ್ಠಾನ, ಸಂ:73, 3ನೇ ಹಂತ, 2ನೇ ಮುಖ್ಯ ರಸ್ತೆ, ವಿನಾಯಕ ಬಡಾವಣೆ, ವಿಜಯನಗರ, ಬೆಂಗಳೂರು - 560040