ಅವಿಧಾ
ಗೋಚರ
ಅವಿಧಾ ಒಂದು ಸರ್ಕಾರೇತರ ಸಂಸ್ಥೆಯಾಗಿದೆ.ಬಡತನ ನಿರ್ಮೂಲನೆ,ಲಿಂಗ ಅಸಮಾನತೆ ಆರೋಗ್ಯ, ಹಸಿವು ನಿವಾರಣೆ, ಶಿಕ್ಷ ಣ, ನೈಸರ್ಗಿಕ ವಿಕೋಪ ಮತ್ತಿತರೆ ಸಂದರ್ಭಗಳಲ್ಲಿ ಅವಿಧಾ ನೆರವಿನ ಹಸ್ತಚಾಚುತ್ತಿದೆ ಅಲ್ಲದೇ ಸಮಾಜದ ಜನರ ನೋವು-ನಲಿವುಗಳಿಗೆ ಸ್ಪಂದಿಸಿ ಅವರ ಬದುಕಿನ ಕಷ್ಟ-ಪರಿಹರಿಸಿ ಅವರ ಬದುಕಿಗೆ ಭದ್ರತೆ ಒದಗಿಸುವಲ್ಲಿ ಅವಿರತ ಶ್ರಮಿಸುತ್ತ ಬಂದಿದೆ ಗ್ರಾಮೀಣ ಮಹಿಳೆಯರಿಗೆ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಅವಿಧಾ ಹಮ್ಮಿಕೊಳ್ಳುತ್ತಿದೆ..
![]() | |
ಮಾದರಿ | ಸರ್ಕಾರೇತರ ಸಂಸ್ಥೆ |
---|---|
ಪ್ರಧಾನ ಕಚೇರಿ | ಕಲಬುರ್ಗಿ |
Founder(s) | ವಿಠ್ಠಲ ರಾವ್ |
President | ಪವನ್ |
ಜಾಲತಾಣ | https://www.avidhafoundation.com/ |
ಇತಿಹಾಸ
[ಬದಲಾಯಿಸಿ]ಅವಿಧಾ ೨೪ ನೆ ಜನೆವರಿ ೨೦೧೮ ರಲ್ಲಿ ಅಸ್ತಿತ್ವಕ್ಕೆ ಬಂದಿತು ಸಂಸ್ಥೆಯು ವಿಠ್ಠಲ ರಾವ್ ಅವರ ಮಾರ್ಗದರ್ಶನದಲ್ಲಿ ತನ್ನ ಅಭಿಯಾನವನ್ನು ಮುಂದುವರೆಸುತ್ತಾ ಬಂದಿದೆ.
ಸದಸ್ಯರು
[ಬದಲಾಯಿಸಿ]- ಪ್ರಿಯಾಂಕಾ (ವೈದ್ಯಕೀಯ ವಿಭಾಗ)
- ಅವಿನಾಶ (ಕಾರ್ಯದರ್ಶಿ)
- ಆನಂದ್ (ಕಾರ್ಯದರ್ಶಿ)
- ಉಮರ್ ಫಾರೂಕ್ (ಕಾರ್ಯದರ್ಶಿ)
- ಪವನ್ (ಸಂಸ್ಥಾಪಕ)
ಹಮ್ಮಿಕೊಂಡ ಇತರ ಕಾರ್ಯಕ್ರಮಗಳು
[ಬದಲಾಯಿಸಿ]- ವನ್ಯಜೀವಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ವಿಶ್ವದಾದ್ಯಂತ ಜನರಿಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ.
- ಎಲ್ಲ ರೀತಿಯ ಶೋಷಣೆ ಮತ್ತು ತಾರತಮ್ಯ ಮುಕ್ತವಾದ ಜಗತ್ತನ್ನು ನಿರ್ಮಿಸುವುದು ನಮ್ಮ ಗುರಿ.
- ಬಡತನ, ಅನಕ್ಷರತೆ, ರೋಗ ಮತ್ತು ಸಾಮಾಜಿಕ ಅನ್ಯಾಯದ ಸಂದರ್ಭಗಳಲ್ಲಿ ಜನರು ಮತ್ತು ಸಮುದಾಯಗಳಿಗೆ ಸಹಕಾರ ನೀಡುವುದು ನಮ್ಮ ಉದ್ದೇಶ.
- ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಮತ್ತು ಪುರುಷರಿಗೆ ತಮ್ಮ ಅಸ್ತಿತ್ವ ಹಾಗು ಸಮಾಜದ ಭದ್ರತೆ ಬಗ್ಗೆ ಅರಿವು ಮೂಡಿಸುವುದು.ಪ್ರತಿಯೊಂದು ಮಕ್ಕಳಿಗೆ ಪೌಷ್ಠಿಕ ಆಹಾರ
- ಬಾಲ್ಯ ವಿವಾಹ ತಡೆಗಟ್ಟುವುದು
- ವಿಧವಾ ಪುನರ್ವಿವಾಹ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದು
- ದೇವದಾಸಿ ಪದ್ಧತಿಯನ್ನು ತಡೆಯುವುದು
- ಪರಿಸರ ರಕ್ಷಣೆ
- ಬೀದಿ ನಾಟಕಗಳ ಮೂಲಕ ಪ್ರಚಲಿತ ಘಟನೆಗಳ ಬಗ್ಗೆ ಅರಿವು ಮೂಡಿಸುವುದು
- ಬಾಲಕಾರ್ಮಿಕರನ್ನು ವಿದ್ಯಾವಂತರನ್ನಾನಿಸುವುದು
- ಅಂಗವಿಕಲ ಮತ್ತು ಅಸಹಾಯಕರಿಗೆ ಆರ್ಥಿಕ ಭದ್ರತೆ ನೀಡುವುದು
- ಬುದ್ಧಿಮಾಂದ್ಯ ಹಾಗೂ ಅಸಹಾಯಕರಿಗೆ ಉತ್ತಮ ಚಿಕಿತ್ಸೆ ನೀಡುವುದು
- ಹಿಂದುಳಿದ ಪ್ರದೇಶ ಹಾಗೂ ಹಳ್ಳಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಶಿಬಿರ ಹಾಗೂ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವುದು
- ಯುವಕರಲ್ಲಿ ದೇಶ ಭಕ್ತಿಯ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರಿಗೆ ಉತ್ತಮ ಉದ್ಯೋಗ ಅವಕಾಶಗಳಿಗೆ ಅನುವು ಮಾಡಿಕೊಡುವುದು
- ಮಾದಕ ವ್ಯಸನಗಳಿಂದ ಮುಕ್ತಗೊಳಿಸುವುದು
- ಯುವಕರಿಗೆ ದೌರ್ಜನ್ಯ ವಿರುದ್ಧ ಹೋರಾಡಲು ಸಹಕರಿಸುವುದು
- ನಿರ್ಗತಿಕರಿಗೆ ಪುನರ್ವಸತಿ ನಿರ್ಮಿಸುವುದು.
- ಹಸಿವು ಮುಕ್ತ ದೇಶಕ್ಕಾಗಿ ಹೋರಾಡುವುದು
- ಮಹಿಳೆ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ತಡೆಗಟ್ಟುವುದು.
- ವಯಸ್ಕ ಶಿಕ್ಷಣ ಬಗ್ಗೆ ಅರಿವು ಮೂಡಿಸುವುದು