ವಿಷಯಕ್ಕೆ ಹೋಗು

ಅವಧೂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರ್ಣಾಶ್ರಮ ಧರ್ಮಗಳನ್ನು ತ್ಯಜಿಸಿ, ಪರಮಾತ್ಮ ಧ್ಯಾನಾಸಕ್ತನಾದ ಯೋಗಿ. ಇವರಲ್ಲಿ ನಾಲ್ಕು ಬಗೆ. ಗೃಹಸ್ಥಾಶ್ರಮಿಯಾಗಿದ್ದುಕೊಂಡೇ ಬ್ರಹ್ಮಮಂತ್ರವನ್ನು ಉಪಾಸನೆ ಮಾಡುವವ ಗಾರ್ಹಸ್ಥ್ಯಾವಧೂತ, ಅಭಿಷೇಕವಿಧಿಯಿಂದ ಸಂಸ್ಕೃತನಾದ ಶೈವಸನ್ಯಾಸಿ ಶೈವಾವಧೂತ, ಬ್ರಹ್ಮೋಪಾಸಕನಾದವ ಬ್ರಹ್ಮಾವಧೂತ. ಶೈವಾವಧೂತರಿಗೆ ಪೈತೃಕಾದಿ ಸರ್ವಕರ್ಮಗಳಲ್ಲಿ ಅಧಿಕಾರವಿಲ್ಲ. ನಾಲ್ಕನೆಯವ ಹಂಸಾವಧೂತ. ಯಾವ ವಿಧವಾದ ಜಾತಿ ಲಾಂಛನವೂ ಇಲ್ಲದೆ ಶೋಕ ಮೋಹ ವರ್ಜಿತನಾಗಿ, ಯಾವ ವಿಧಿ ನಿಷೇಧಗಳಿಗೂ ಬದ್ಧನಾಗದೆ, ಯಾವ ಉದ್ಯಮವೂ ಇಲ್ಲದೆ, ಸಂಕಲ್ಪರಹಿತನಾಗಿ ಪ್ರಾರಬ್ಧಗಳನ್ನು ಅನುಭವಿಸುತ್ತ ಸಂತುಷ್ಟಚಿತ್ತನಾಗಿ ದೇಶಾಟನೆ ಮಾಡುವುದೇ ಈತನ ಕಾರ್ಯ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅವಧೂತ&oldid=1230020" ಇಂದ ಪಡೆಯಲ್ಪಟ್ಟಿದೆ