ಅಳ್ನಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಳ್ನಾವರ Archived 2019-02-06 ವೇಬ್ಯಾಕ್ ಮೆಷಿನ್ ನಲ್ಲಿ. ಇದು ಧಾರವಾಡ ಜಿಲ್ಲೆಯ ಒಂದು ತಾಲೂಕು. ಇದು ಮುಂಚೆ ಪಟ್ಟಣ ಪಂಚಾಯತಿಯಾಗಿತ್ತು, ೨೦೧೭ರಲ್ಲಿ ಹೊಸ ತಾಲೂಕಾಗಿ ಘೋಷಣೆಯಾಯ್ತು. ಅಳ್ನಾವರ ರೈಲು ನಿಲ್ದಾಣ ನೈಋತ್ಯ ರೈಲ್ವೆಯ ಭಾಗವಾಗಿದ್ದು, ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಹೋಗುವ ರೈಲುಗಳು ಅಳ್ನಾವರ ಮಾರ್ಗವಾಗಿ ಸಾಗುತ್ತವೆ. ಅಳ್ನಾವರವು ಜಿಲ್ಲಾ ಕೇಂದ್ರವಾದ ಧಾರವಾಡದಿಂದ ೩೭ ಕಿ.ಮಿ ದೂರದಲ್ಲಿದೆ.

ಅಳ್ನಾವರದಲ್ಲಿ ೨೦೧೧ರ ಜನಗಾಣತಿಯ ಪ್ರಕಾರ ೧೭೨೨೮ ಜನರಿದ್ದು, ಅದರಲ್ಲಿ ೮೬೮೩ ಗಂಡಸರು(೫೧%), ೮೫೪೫ ಹೆಂಗಸರು (೪೯%). ಇಲ್ಲಿ ಸಾಕ್ಷರತಾ ಪ್ರಮಾಣ ೭೧% ಆಗಿದೆ. ಅದರಲ್ಲಿ ೮೧% ಗಂಡಸರು ಸಾಕ್ಷರರಾಗಿದ್ದು, ೬೮% ಹೆಂಗಸರು ಸಾಕ್ಷರರಾಗಿದ್ದಾರೆ.

ಅಳ್ನಾವರಕ್ಕೆ ಸಮೀಪ ದಾಂಡೇಲಿ ಪಟ್ಟಣವಿದ್ದು ಅದು ಸಾಹಸ ಕ್ರೀಡೆಗಳಿಗೆ, ಕಾಳಿ ನದಿ, ಅರಣ್ಯ ಪ್ರದೇಶಕ್ಕೆ ಹೆಸರುವಾಸಿಯಾಗಿದೆ. ದೂಧಸಾಗರ ಫಾಲ್ಸ್ ಕೂಡ ಅಳ್ನಾವರಕ್ಕೆ ಸಮೀಪವಾಗಿದೆ.

ಅಳ್ನಾವರಕ್ಕೆ ಸಂಭಂದಿಸಿದ ಪ್ರವಾಸಿ ಮಾಹಿತಿಗಾಗಿ ಈ ಪುಟವನ್ನು ನೋಡಿ.

ಅಳ್ನಾವರಕ್ಕೆ ಧಾರವಾಡ ಮತ್ತು ಬೆಳಗಾವಿಯಿಂದ ಉತ್ತಮ ಸಾರಿಗೆ ಸಂಪರ್ಕವಿದೆ.

ಅಳ್ನಾವರ
ಅಳ್ನಾವರ
ಪಟ್ಟಣ
Population
 (೨೦೧೧)
 • Total೧೭೨೨೮
Websitewww.alnavartown.mrc.gov.in
"https://kn.wikipedia.org/w/index.php?title=ಅಳ್ನಾವರ&oldid=1053077" ಇಂದ ಪಡೆಯಲ್ಪಟ್ಟಿದೆ