ಅಲ್ ಉತ್ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರಾಂತ ಚರಿತ್ರಕಾರ. ಘಜ್ನಿ ಮಹಮ್ಮದನ (998-1030) ಆಸ್ಥಾನದಲ್ಲಿದ್ದ ಅನೇಕ ಮೇಧಾವಿಗಳಲ್ಲೊಬ್ಬ. ಕಿತಾಬುಲ್ ಯಾಮಿನೀ ಎಂಬ ಚಾರಿತ್ರಿಕ ಗ್ರಂಥವೊಂದನ್ನು ರಚಿಸಿದ್ದಾನೆ. ಇದು ಅರಬ್ಬೀ ಭಾಷೆಯಲ್ಲಿದ್ದು ಅನಂತರ ಪಾರಸೀ ಭಾಷೆಗೆ ಅನುವಾದವಾಗಿದೆ. ಇದು ಸಬಕ್ತಗೀನ್ ಹಾಗೂ ಘಜ್ನಿ ಮಹಮ್ಮದರ ವಿಚಾರವನ್ನು ತಿಳಿಸುತ್ತದೆ. ಗ್ರಂಥವನ್ನು ಮಹಮ್ಮದನ ಆಡಳಿತದ ಮಧ್ಯಾವಧಿಯಲ್ಲಿ ಬರೆದಿರುವಂತೆ ಕಂಡುಬರುವುದು. ಚರಿತ್ರಕಾರ, ಘಜ್ನಿ ಮಹಮ್ಮದ್ ತನ್ನ ರಾಜಧಾನಿಯಾದ ಘಜ್ನಿಯಲ್ಲಿ ಕಟ್ಟಿಸಿದ್ದ ಜುಮ್ಮಾಮಸೀದಿಯನ್ನೂ ಇತರ ಭವ್ಯ ಭವನಗಳನ್ನೂ, ತನ್ನ ಗ್ರಂಥದಲ್ಲಿ ಮನಸಾರೆ ಹೊಗಳಿದ್ದಾನೆ. ಘಜ್ನಿಯ ಧನಿಕರು ತಮ್ಮ ಗೃಹಗಳನ್ನು ನಯ ನಾಜೂಕುಗಳಿಂದ ನಿರ್ಮಿಸಿಕೊಳ್ಳಲು ಇವನ ವಿವರಣೆಗಳು ಸ್ಫೂರ್ತಿ ನೀಡಿದುವೆಂದು ತಿಳಿದುಬರುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: