ಅಲ್ ಅಹ್ರಾಂ
ಈಜಿಪ್ಟ್ ದೇಶದ ರಾಷ್ಟ್ರೀಯ ಹಾಗೂ ಪ್ರಭಾವಿ ದಿನಪತ್ರಿಕೆ. ಈ ಹೆಸರಿಗೆ ಪಿರಮಿಡ್ ಎಂಬ ಅರ್ಥವಿದೆ. ಸ್ಥಾಪನೆ 1875. ಭಾಷೆ ಅರಬ್ಬಿ. ಅಲೆಕ್ಸಾಂಡ್ರಿಯದಲ್ಲಿ ಇದನ್ನು ಪ್ರಾರಂಭಿಸಿದವರು ಲೆಬನಾನಿನ ಸಲೀಂ ಮತ್ತು ಬಿಷ್ರಾ. ಅನಂತರ ಇದನ್ನು ಕೈರೊಗೆ ವರ್ಗಾವಣೆ ಮಾಡಲಾಯಿತು. ಬ್ರಿಟಿಷರ ಕಾಲದಲ್ಲಿ ಇದರ ಪ್ರಕಟಣೆ ಮೇಲೆ ನಿರ್ಬಂಧ ವಿಧಿಸಿತು. ಆದರೂ ಈ ಪತ್ರಿಕೆ ಧೈರ್ಯವಾಗಿ ಸ್ವತಂತ್ರ ನೀತಿ ಅನುಸರಿಸಿತು. ಸೈನ್ಯಕ್ರಾಂತಿಯಾದ ಮೇಲೆ ಇದರ ಪ್ರಭಾವ ಹೆಚ್ಚಿತು. ಅಬುಲ್ ನಾಸರ್ ಅಧಿಕಾರಕ್ಕೆ ಬಂದ ಮೇಲೆ ತಮ್ಮ ಮಿತ್ರ ಮಹಮದ್ ಹುಸೇನ್ ಅವರನ್ನು ಸಂಪಾದಕರಾಗಿ ನೇಮಿಸಿದರು. ಹಕೀಲ್ ಒಬ್ಬ ಉತ್ತಮ ಪತ್ರಕರ್ತರು. ಪತ್ರಿಕೆಯನ್ನು ಉತ್ತಮ ರೀತಿಯಲ್ಲಿ ರೂಪಿಸಿದರು. ನಾಸರ್ ಅನಂತರ ಅಧಿಕಾರಕ್ಕೆ ಬಂದ ಅನ್ವರ್ ಸಾರತ್ ಅವರಿಂದ ಹಕೀಲ್ ಪದಚ್ಯುತಿ. ಆದರೆ ಅಲ್ ಅಹ್ರಾಂ ಹಕೀಲ್ ರೂಪಿಸಿದಂತೆಯೇ ಮುಂದುವರೆಯಿತು. ಸಾರ್ವಜನಿಕ ಹಾಗೂ ಸರ್ಕಾರಿ ಮನೋಧರ್ಮಗಳನ್ನು ರೂಪಿಸುವುದರ ಮೂಲಕ ಜನಪ್ರಿಯವಾಗಿದೆ. ಅರಬ್ಬೀ ವೃತ್ತಪತ್ರಿಕಾ ಪ್ರಪಂಚದಲ್ಲಲ್ಲದೆ ಅಂತಾರಾಷ್ಟ್ರೀಯವಾಗಿ ಹೆಸರುಗಳಿಸಿದೆ.