ಅಲ್ಟಾಝಿಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಕಾಶಕಾಯಗಳ ಉನ್ನತಿ (ಅಲ್ಟಿಟ್ಯೂಡ್) ಮತ್ತು ಅಝಿಮತ್ ಅಳತೆ ಮಾಡಲು ಬಳಸುವ ಸಾಧನ. ಇದರಲ್ಲಿ ಊರ್ಧ್ವಾಕ್ಷ ಮತ್ತು ಕ್ಷಿತಿಜಾಕ್ಷಗಳ ಮೇಲೆ ಅಳವಡಿಸಿದ ಒಂದು ಟೆಲಿಸ್ಕೋಪ್ ಇದೆ. ಅಕ್ಷಗಳಿಗೆ ಅಂಶಾಂಕಿತ (ಗ್ರ್ಯಾಜುಯೇಟೆಡ್) ವೃತ್ತಗಳನ್ನು ಜೋಡಿಸಿದೆ. ಬೇಕಾದ ಆಕಾಶಕಾಯದೆಡೆಗೆ ಟೆಲಿಸ್ಕೋಪನ್ನು ಗುರಿಹಿಡಿದಾಗ ಈ ವೃತ್ತಗಳ ಮೇಲಿನ ಅನುರೂಪ ಸಂಖ್ಯೆಗಳು ಆ ಕಾಯದ ಉನ್ನತಿ ಮತ್ತು ಅಝಿಮತ್‍ಗಳನ್ನು ನೀಡುತ್ತವೆ. ಇದನ್ನು ಭೂಮಿಯ ಮೇಲಿನ ವೀಕ್ಷಣೆಗಳಲ್ಲಿ ವಿಶೇಷವಾಗಿ ಬಳಸುತ್ತಾರೆ.[೧][೨]

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Vogel, Reiner (2007). "Equatorial Platform".
  2. "Telescope Structure". Gemini Observatory.
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: