ಅಲೆಕ್ಸಿಸ್ ಕರೆಲ್
ಅಲೆಕ್ಸಿಸ್ ಕರೆಲ್ | |
---|---|
ಜನನ | ಅಲೆಕ್ಸಿಸ್ ಕರೆಲ್ ೨೮ ಜೂನ್ ೧೮೭೩ ಫ್ರಾನ್ಸ್ |
ರಾಷ್ಟ್ರೀಯತೆ | ಫ್ರಾನ್ಸ್ |
ಫ್ರಾನ್ಸಿನ ಶಸ್ತ್ರಚಿಕಿತ್ಸಾತಜ್ಞ ಮತ್ತು ಜೀವವಿಜ್ಞಾನಿಯಾಗಿದ್ದ ಅಲೆಕ್ಸಿಸ್ ಕರೆಲ್‌ರವರು ೧೮೭೩ಯ ಜೂನ್ ೨೮ರಂದು ಫ್ರಾನ್ಸಿನ ರ‍್ಹೋನ್‌ನಲ್ಲಿ ಜನಿಸಿದರು. ಕರೆಲ್‌ರವರು ೧೯೦೫ರಲ್ಲಿ ಅಮೇರಿಕಕ್ಕೆ ಹೋದರು ಮತ್ತು ೧೯೩೯ರವರೆವಿಗೂ ಅಲ್ಲೇ ನೆಲೆಸಿದ್ದರು. ಆ ಅವಧಿಯಲ್ಲಿ ಅವರು ನ್ಯೂಯಾರ್ಕಿನಲ್ಲಿರುವ ರಾಕ್‌ಫೆಲ್ಲರ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ (ಈಗ ಅದು ರಾಕ್‌ಫೆಲ್ಲರ್ ವಿಶ್ವವಿದ್ಯಾಲಯವಾಗಿದೆ) ಕೆಲಸ ಮಾಡಿದರು. ಆ ಅವಧಿಯಲ್ಲಿ ಅವರು ರಕ್ತನಾಳಗಳನ್ನು ಹೊಲೆಯುವ ವಿಧಾನವನ್ನು (೧೯೦೨ರಲ್ಲಿ) ಕಂಡುಹಿಡಿದರು. ಅದಕ್ಕೆ ಈಗ ’ನಾಳೀಯ ಶಸ್ತ್ರಚಿಕಿತ್ಸೆ’ (vascular surgery) ಎಂಬುದಾಗಿ ಕರೆಯಲಾಗಿದೆ. ಆ ವಿಧಾನದ ಸಂಶೋಧನೆಗೆ ಅವರಿಗೆ ೧೯೧೨ರ ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೧] ೧೯೩೦ರಲ್ಲಿ ಕರೆಲ್‌ರವರು ಅಮೇರಿಕದ ವಾಯುಯಾನತಜ್ಞರಾಗಿದ್ದ ಚಾರ್ಲ್ಸ್ ಲಿಂಡ್‌ಬರ್ಗ್‌ರವರ ಜೊತೆ ಸೇರಿ ದೇಹದ ಅವಯವಗಳಿಗೆ ಪ್ರಮುಖವಾದ ದ್ರವಗಳನ್ನು ಹರಿಸಲು ಅನುಕೂಲವಾದ ’ಯಾಂತ್ರಿಕ ಹೃದಯ’ವನ್ನು (mechanical heart) ಸಂಶೋಧಿಸಿದರು. ಅನೇಕ ಪ್ರಾಣಿಗಳ ಊತಕಗಳನ್ನು ಮತ್ತು ಅವಯವಗಳನ್ನು ಅನೇಕ ವರುಷಗಳ ಕಾಲ ಸುಸ್ಥಿತಿಯಲ್ಲಿಡಲು ಇಂತಹ ಸಂಶೋಧನೆಯಿಂದ ಸಾಧ್ಯವಾಯಿತು. ೧೯೩೯ರಲ್ಲಿ ಕರೆಲ್‌ರವರು ಫ್ರಾನ್ಸಿಗೆ ವಾಪಸ್ಸಾದರು. ಕರೆಲ್‌ರವರು ೧೯೪೪ರ ನವೆಂಬರ್ ೫ರಂದು ನಿಧನರಾದರು.