ಅಲೆಕ್ಸಾಂದ್ರಿ ವ್ಯಸಿಲಿ
ಅಲೆಕ್ಸಾಂದ್ರಿ ವ್ಯಸಿಲಿ | |
---|---|
ಜನನ | 21 July 1821 |
ಮರಣ | 22 August 1890 (aged 69) Mircești, Romania |
ವೃತ್ತಿ(ಗಳು) | Poet, playwright, politician, and diplomat |
Signature | |
ಅಲೆಕ್ಸಾಂದ್ರಿ ವ್ಯಸಿಲಿ 1821-90 ರೊಮೇನಿಯದ ಕವಿ ಮತ್ತು ನಾಟಕಕಾರ. ಪ್ಯಾರಿಸ್‌ನಲ್ಲಿ ವೈದ್ಯಶಾಸ್ತ್ರ ಮತ್ತು ನ್ಯಾಯಶಾಸ್ತ್ರಗಳನ್ನು ಅಭ್ಯಾಸಮಾಡಿದ. ಎರಡನ್ನೂ ತ್ಯಜಿಸಿ ಸಾಹಿತ್ಯಕ್ಕೆ ಮುಡಿಪಾದ. ಇಟಲಿ ಎಂದರೆ ಪ್ರಾಣ. ಆಧುನಿಕ ರೊಮೇನಿಯದ ಸಾಹಿತ್ಯದಲ್ಲಿ ಇವನದು ಹಿರಿಯ ಸ್ಥಾನ. ಇವನು ಯವನ ಪಂಥಕ್ಕೆ ಸೇರಿದವ. 1844-71ರವರೆಗೆ ಲಘು ದುರಂತನಾಟಕಗಳು, ಹಾಸ್ಯನಾಟಕಗಳು, ಪ್ರಹಸನಗಳು, ಏಕಾಂಕನಾಟಕಗಳು ಮತ್ತು ಗೀತನಾಟಕಗಳನ್ನು ಬರೆದ. ಅನಂತರ ಬರೆದ ನಾಟಕಗಳು ಹೆಚ್ಚು ಕಲಾತ್ಮಕವಾಗಿವೆ. ಇವುಗಳಲ್ಲಿ ಡೆಸ್ಪಾಟ್ ವೋಡಾ (1879), ಫಾಂತಾನಾ ಬ್ಲಾಂಡಿಸಿ (1883), ಒವೀಡಿಯಾ (1885)-ಇವು ಪ್ರಸಿದ್ಧ ಕೃತಿಗಳು. ಫ್ರಾನ್ಸ್‌ನ ಸಾಹಿತ್ಯದ ಪ್ರಭಾವವನ್ನು ಇವುಗಳಲ್ಲಿ ಕಾಣಬಹುದು. ಒಟ್ಟು ಮುನ್ನೂರಕ್ಕೂ ಹೆಚ್ಚು ಕವನಗಳನ್ನೂ ಜಾನಪದ ಗೀತೆಗಳನ್ನೂ ಸಂಪಾದಿಸಿದ. ಇವನ ಕೃತಿಗಳಲ್ಲಿ ಗಹನತೆ ಇಲ್ಲದಿದ್ದರೂ ಉಜ್ಜ್ವಲತೆ ಉಂಟು. ಕವನಗಳಲ್ಲಿ ಲಾಲಿತ್ಯ, ಮಾಧುರ್ಯಗಳುಂಟು. ಇವನ ಗ್ರಾಮಜೀವನ ಕವನಗಳೂ ರಾಷ್ಟ್ರೀಯ ಐಕಮತ್ಯದ ಮಹತ್ತ್ವವನ್ನು ಮತ್ತೆ ಘೋಷಿಸಿದ ಕೃತಿಗಳೂ ರೊಮೇನಿಯದ ಆಧುನಿಕ ಸಾಹಿತ್ಯದ ಚರಿತ್ರೆಯಲ್ಲಿ ಇವನಿಗೆ ಹಿರಿಯ ಸ್ಥಾನ ಗಳಿಸಿಕೊಟ್ಟಿವೆ.