ವಿಷಯಕ್ಕೆ ಹೋಗು

ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್
ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್
ಜನನ
ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್

೨ ಅಕ್ಟೋಬರ್ ೧೯೦೭
ಬ್ರಿಟನ್ನ್
ರಾಷ್ಟ್ರೀಯತೆಬ್ರಿಟನ್ನ್

ಬ್ರಿಟನ್ನಿನ ರಸಾಯನವಿಜ್ಞಾನಿಯಾಗಿದ್ದ ಅಲೆಕ್ಸಾಂಡರ್ ರಾಬರ್ಟಸ್ ಲಾರ್ಡ್ ಟೋಡ್ರವರು 1907ರ ಅಕ್ಟೋಬರ್ 2ರಂದು ಗ್ಲಾಸ್ಗೋವಿನಲ್ಲಿ ಜನಿಸಿದರು. ಟೋಡ್ರವರು 1936ರಲ್ಲಿ ಜೀವಸತ್ವಗಳ (vitamins) ಮೇಲೆ ತಮ್ಮ ಪ್ರಯೋಗಗಳನ್ನು ಕೇಂದ್ರೀಕರಿಸಿ, ಯಾವ ಜೀವಸತ್ವದ ಕೊರತೆಯಿದ್ದರೆ ಬೆರಿಬೆರಿ ವ್ಯಾಧಿಗೆ ಕಾರಣವಾಗುವಾಗುತ್ತದೆಯೋ ಆ ಜೀವಸತ್ವವಾದ ಕಜೀವಸತ್ವ B1ಕಿನನ್ನು (vitamin B1 or aneurin or thiamin) ಸಂಶ್ಲೇಷಿಸಿದರು. ಯಾವ ಜೀವಸತ್ವದ ಕೊರತೆಯಿದ್ದರೆ ಹಾನಿಕರ ಅನಿಮಿಯಾಕ್ಕೆ ಕಾರಣವಾಗುತ್ತದೆಯೋ ಆ ಜೀವಸತ್ವವಾದ ಕಜೀವಸತ್ವ B12ಕಿನನ್ನು (vitamin B12 or cyanocobalamin) ಅವರು ಸಂಶ್ಲೇಷಿಸಿದರು.[] ನಂತರ ಸುಮಾರು 1950ರಲ್ಲಿ ಟೋಡ್ರವರು ತಮ್ಮ ಪ್ರಯೋಗಗಳನ್ನು ಕನ್ಯೂಕ್ಲಿಯೋಟೈಡ್ಕಿಗಳ ಬಗ್ಗೆ ಕೇಂದ್ರೀಕರಿಸಿದರು. (ನ್ಯೂಕ್ಲಿಯೋಟೈಡ್ ಅಂದರೆ ಜೈವಿಕ ಪದಾರ್ಥಗಳಲ್ಲೆಲ್ಲಾ ಕಂಡುಬರುವ ಒಂದು ಮಾದರಿಯ ಅತ್ಯಂತ ಮುಖ್ಯ ಸಂಯುಕ್ತವಾಗಿದೆ.) ಟೋಡ್ರವರು ನಮ್ಮ ದೇಹದಲ್ಲಿ ಜೀವರಸಾಯನಿಕ ಪ್ರಕ್ರಿಯೆಗಳಿಂದ ಶಕ್ತಿ ಉತ್ಪಾದನೆಗೆ ಕಾರಣವಾದ ಮುಖ್ಯ ಪದಾರ್ಥಗಳಾದ ಅಡೆನೋಸಿನ್ ಟ್ರೈಫಾಸ್ಫೇಟ್ (ATP) ಮತ್ತು ಅಡೆನೋಸಿನ್ ಡೈಫಾಸ್ಫೇಟ್ಗಳನ್ನು (ADP) ಸಂಶ್ಲೇಷಿಸಿದರು.[] ಎಲ್ಲ ಪ್ರಮುಖವಾದ ನ್ಯೂಕ್ಲಿಯೋಟೈಡ್ಗಳು ಮತ್ತು ಸಹಕಿಣ್ವಗಳ ಸಂಶ್ಲೇಷಣೆಗೆ ಹೊಸ ವಿಧಾನಗಳನ್ನು ಅವರು ಅಭಿವೃದ್ಧಿ ಪಡಿಸಿದರು. ಅಲ್ಲದೆ ಡಿ.ಎನ್.ಎ.ನಂತಹ (DNA or deoxyribonucleic acid) ನ್ಯೂಕ್ಲಿಯಿಕ್ ಆಮ್ಲಗಳ ರಾಸಾಯನಿಕ ರಚನೆಗಳ ವಿವರಗಳನ್ನು ಅವರು ದೃಢೀಕರಿಸಿದರು. ಟೋಡ್ರವರು 1997ರ ಜನವರಿ 10ರಂದು ನಿಧನರಾದರು

ಉಲ್ಲೇಖಗಳು

[ಬದಲಾಯಿಸಿ]