ಅಲೆಕ್ಸಾಂಡರ್ ಪೋರ್ಫಿರ್‌ಏವಿಚ್ ಬೋರೋದಿನ್
ಗೋಚರ
ಅಲೆಕ್ಸಾಂಡರ್ ಪೋರ್ಫಿರ್‌ಏವಿಚ್ ಬೋರೋದಿನ್ | |
---|---|
Born | 12 November 1833 |
Died | 27 February 1887 (age 53) Saint Petersburg, Russian Empire |
Occupation(s) | Composer and chemist |
ರಷಿಯಾದ ರಸಾಯನವಿಜ್ಞಾನಿ ಮತ್ತು ಸಂಗೀತ ರಚನಾಕಾರರಾಗಿದ್ದ ಅಲೆಕ್ಸಾಂಡರ್ ಪೋರ್ಫಿರ್‌ಏವಿಚ್ ಬೋರೋದಿನ್‌ರವರು ೧೮೩೩ರ ನವೆಂಬರ್ ೧೨ರಂದು ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ಜನಿಸಿದರು. ಬೋರೋದಿನ್‌ರವರು ಆಲ್ಡಿಹೈಡ್‌ಗಳ (aldehydes) ಮೇಲೆ ಸಂಶೋಧನೆ ನಡೆಸಿ ಅನೇಕ ಉಪಯುಕ್ತ ವಿಷಯಗಳನ್ನು ಪ್ರಕಟಿಸಿದರು. ಅವರು ೧೮೭೨ರಲ್ಲಿ ಮಹಿಳೆಯರಿಗಾಗಿ ವೈದ್ಯಕೀಯ ಶಾಲೆಯನ್ನು ಸ್ಥಾಪಿಸಲು ನೆರವಾದರು. ಅವರು ಕಂಡಹಿಡಿದ ಒಂದು ರಾಸಾಯನಿಕ ಕ್ರಿಯೆಗೆ ’ಬೋರೋದಿನ್ ಪ್ರತಿಕ್ರಿಯೆ’ (Borodin reaction) ಎಂಬುದಾಗಿ ಕರೆಯಲಾಗಿದೆ. ಹಾಗೆಯೇ ಅವರು ಸುಮಾರು ೧೮೭೨ರಲ್ಲಿ ಚಾರ್ಲ್ಸ್-ಅಡಾಲ್ಫೆ ವುರ್ಟ್‌ಝ್‌ರವರ ಜೊತೆ ಸೇರಿ ’ಅಲ್ಡೋಲ್ ಪ್ರತಿಕ್ರಿಯೆ’ಯನ್ನು (Aldol reaction) ಕಂಡುಹಿಡಿದರು. ನಂತರ ಅವರ ಒಲವು ಸಂಗೀತದ ಕಡೆಗೆ ತಿರುಗಿತು. ಅವರು ೧೮೮೭ರ ಫೆಬ್ರವರಿ ೨೭ರಂದು ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಿಧನರಾದರು.[೧][೨][೩]
ಉಲ್ಲೇಖಗಳು
[ಬದಲಾಯಿಸಿ]- ↑ Abraham, Gerald. Borodin: the Composer and his Music. London, 1927
- ↑ Dianin, Sergei Aleksandrovich. Borodin. London, New York, Oxford University Press, 1963
- ↑ Oldani, Robert, William. "Borodin, Aleksandr Porfir′yevich," Grove Music Online Archived 2008-05-16 ವೇಬ್ಯಾಕ್ ಮೆಷಿನ್ ನಲ್ಲಿ. (Accessed 27 January 2006, subscription required)