ಅಲುವ
ಅಲುವ ആലുവ Alwaye | |
---|---|
ಉಪನಗರ | |
ದೇಶ | ಭಾರತ |
ರಾಜ್ಯ | ಕೇರಳ |
ಜಿಲ್ಲೆ | ಎರ್ನಾಕುಳಮ್ |
City UA | ಕೊಚ್ಚಿ |
ಸ್ಥಾಪನೆ | ೧೯೨೧ |
ಸರ್ಕಾರ | |
• Mayor | M. T. Jacob |
ಕ್ಷೇತ್ರಫಲ | |
• ಒಟ್ಟು | ೭.೧೮ km೨ (೨.೭೭ sq mi) |
Elevation | ೮ m (೨೬ ft) |
ಜನಸಂಖ್ಯೆ (2001) | |
• ಒಟ್ಟು | ೨೪,೧೧೦ |
• ಸಾಂದ್ರತೆ | ೩,೩೫೮/km೨ (೮,೭೦೦/sq mi) |
Languages | |
• Official | Malayalam, English |
ಸಮಯ ವಲಯ | ಯುಟಿಸಿ+5:30 (IST) |
PIN | 6831xx |
Telephone code | 91.484 |
ವಾಹನ ನೋಂದಣಿ | KL 41 |
Sex ratio | 1000:1050 ♂/♀ |
ಜಾಲತಾಣ | www |
ಅಲುವ ಅಥವಾ ಅಲ್ವೇ ( ಆಲ್ವಾಯಿ) ಕೇರಳ ರಾಜ್ಯದ ಎರ್ನಾಕುಳಂ ಜಿಲ್ಲೆಯಲ್ಲಿರುವ ಒಂದು ತಾಲೂಕು ಹಾಗೂ ಅದರ ಕೇಂದ್ರ ಪಟ್ಟಣ. ಇದು ಕೊಚ್ಚಿ ನಗರಕ್ಕೆ ಸಮೀಪದಲ್ಲಿರುವುದರಿಂದ ಅದರ ಉಪನಗರವಾಗಿ ಬೆಳೆದಿದೆ.ಪೆರಿಯಾರ್ ನದಿ ದಡದಲ್ಲಿರುವ ಈ ಪಟ್ಟಣವು ಕೈಗಾರಿಕಾ ಕೇಂದ್ರವಾಗಿದೆ.
ಕೊಚ್ಚಿ-ಷೋರನೊರುಗಳ ನಡುವಿನ ರೈಲುಮಾರ್ಗದ ಒಂದು ನಿಲ್ದಾಣ. ಆಲ್ವಾಯಿನದಿ ಹಿಂದೆ ಸ್ನಾನಧಾಮವಾಗಿದ್ದು ಈಗ ಬೇಸಗೆಯ ಕಾಲದ ಪ್ರವಾಸಿಗರ ತಂಗುದಾಣವಾಗಿದೆ. ನದಿಯ ದಂಡೆಯಲ್ಲಿರುವ ಈಶ್ವರ ದೇವಾಲಯ ಅನೇಕ ಭಕ್ತರನ್ನು ಆಕರ್ಷಿಸಿದೆ. ಧಾನ್ಯ, ಮೀನು ಮತ್ತು ದನಕರುಗಳ ವ್ಯಾಪಾರಸ್ಥಳ. ನ್ಯಾಯಾಧೀಶರ ಕಚೇರಿ, ಸಬ್ ರಿಜಿಸ್ಟ್ರಾರ್ರವರ ಕಚೇರಿ, ಆಸ್ಪತ್ರೆ, ಅಂಚೆಕಚೇರಿ ಮತ್ತು ಸುಂಕದ ಮನೆಯನ್ನುಳ್ಳ ಆಡಳಿತಕೇಂದ್ರವಾಗಿದೆ. ಅಲ್ಯೂಮಿನಿಯಂ ಕಾರ್ಖಾನೆ ಮತ್ತು ಗೊಬ್ಬರ ಮತ್ತು ಸಲ್ಫೂರಿಕ್ ಆಮ್ಲದ ತಯಾರಿಕೆಗೆ ಬೇಕಾದ ಸಲ್ಫೇಟ್ ತಯಾರಿಸುವ ಕಾರ್ಖಾನೆಯ ಕೈಗಾರಿಕಾ ಕೇಂದ್ರಸ್ಥಳವೂ ಹೌದು.