ಅಲಮಾರು
ಗೋಚರ
ಅಲಮಾರು (ಬೀರು, ಕಪಾಟು) ಪೆಟ್ಟಿಗೆ ಆಕಾರದ ಪೀಠೋಪಕರಣ ವಸ್ತು. ಇದು ಬಾಗಿಲುಗಳು ಮತ್ತು/ಅಥವಾ ಇತರೆ ವಸ್ತುಗಳನ್ನು ಶೇಖರಿಸಿಡಲು ಸೆಳೆಖಾನೆಗಳನ್ನು ಹೊಂದಿರುತ್ತದೆ. ಕೆಲವು ಅಲಮಾರುಗಳು ಪ್ರತ್ಯೇಕವಾಗಿ ನಿಂತಿರುತ್ತವೆ ಮತ್ತು ಇತರ ಅಲಮಾರುಗಳನ್ನು ಗೋಡೆಯಲ್ಲಿ ನಿರ್ಮಿಸಲಾಗಿರುತ್ತದೆ ಅಥವಾ ಔಷಧಿ ಅಲಮಾರುವಿನಂತೆ ಅದಕ್ಕೆ ಲಗತ್ತುಗೊಂಡಿರುತ್ತವೆ. ಅಲಮಾರುಗಳನ್ನು ಸಾಮಾನ್ಯವಾಗಿ ಕಟ್ಟಿಗೆ (ಘನ ಅಥವಾ ಕಟ್ಟಿಗೆಯ ಹೊರಹೊದಿಕೆ ಅಥವಾ ಕೃತಕ ಮೇಲ್ಮೈಗಳೊಂದಿಗೆ), ಲೇಪಿತ ಉಕ್ಕು (ಔಷಧಿ ಅಲಮಾರುಗಳಿಗೆ ಸಾಮಾನ್ಯವಾಗಿದೆ) ಅಥವಾ ಕೃತಕ ವಸ್ತುಗಳಿಂದ ನಿರ್ಮಿಸಲಾಗುತ್ತದೆ.
ಅಲಮಾರುಗಳು ಸಾಮಾನ್ಯವಾಗಿ ಮುಂದಿನ ಭಾಗದಲ್ಲಿ ಒಂದು ಅಥವಾ ಹೆಚ್ಚು ಬಾಗಿಲುಗಳನ್ನು ಹೊಂದಿರುತ್ತವೆ. ಇವುಗಳಿಗೆ ಬಾಗಿಲಿನ ಸಾಧನಗಳನ್ನು, ಮತ್ತು ಕೆಲವೊಮ್ಮೆ ಬೀಗವನ್ನು ಜೋಡಿಸಲಾಗಿರುತ್ತದೆ. ಅಲಮಾರುಗಳು ಗೂಡುಗಳನ್ನು ಹೊಂದಿರಬಹುದು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Kenny, Peter M.; Safford, Frances Gruber; Vincent, Gilbert T. "American kasten : the Dutch-style cupboards of New York and New Jersey, 1650-1800" (PDF). Metropolitan Museum of Art Libraries.; Register of Cabinetmakers, PDF: https://www.museenkoeln.de/Kunst-und-Museumsbibliothek/download/kittel[ಶಾಶ್ವತವಾಗಿ ಮಡಿದ ಕೊಂಡಿ] (Kunst- und Museumsbibliothek der Stadt Köln, Kunstdokumentation Werner Kittel, Department of Furniture)