ಅಲಘನಿ ಪರ್ವತಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಈ ಪರ್ವತಗಳ ಅತ್ಯಂತ ಎತ್ತರದ ಬಿಂದುವಿನಿಂದ ನೋಟ

ಈ ಪರ್ವತವು ಉತ್ತರ ಅಮೇರಿಕ ಖಂಡದ 'ಉನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ' ದೇಶದಲ್ಲಿದೆ. ಪೆನ್ಸಿಲ್ವೇನಿಯ, ವರ್ಜಿನಿಯ ಸಂಸ್ಥಾನಗಳಲ್ಲಿ ಮತ್ತು ನ್ಯೂಯಾರ್ಕ್ ಸಂಸ್ಥಾನದ ಕೆಲವು ಭಾಗಗಳಲ್ಲಿ ಹಬ್ಬಿವೆ. ಹಡ್ಸನ್ ನದಿಯ ದಕ್ಷಿಣ ಮತ್ತು ಪಶ್ಚಿಮಕ್ಕೆ ಬರುತ್ತವೆ. ಸರಾಸರಿ ಎತ್ತರ 1460 ಮೀ. ಪ್ರಮುಖವಾಗಿ ಅಪಲೇಷಿಯನ್ ಪರ್ವತಗಳ ಭಾಗ. ಹಿಮಯುಗದಲ್ಲಿ ಹಿಮಭರಿತವಾಗಿದ್ದುವು. ಹಿಮನದಿಗಳ ಪ್ರವಾಹ ತಂದ ಮೆಕ್ಕಲು ಮಣ್ಣಿನಿಂದಾಗಿ ಅನೇಕ ಆಳವಾದ ಕಣಿವೆಗಳು ಫಲವತ್ತಾಗಿವೆ. ಪ್ರಸ್ಥಭೂಮಿ ಪ್ರದೇಶ ಬಹು ಒರಟಾಗಿದೆ. ಆದ್ದರಿಂದ ಈ ಭಾಗದಲ್ಲಿನ ಅಲಘನಿ ಮುಂತಾದ ಅನೇಕ ನದೀಪಾತ್ರಗಳಲ್ಲಿ ಹಲವು ಜಲಪಾತಗಳಿವೆ. ಪ್ರಸ್ಥಭೂಮಿಯ ಅನೇಕ ಕಡೆಗಳಲ್ಲಿ ವ್ಯವಸಾಯಕ್ಕೆ ಅನುಕೂಲವಾಗಿದೆ. ತರಕಾರಿಗಳನ್ನು ಬೆಳೆಯುವುದು ಇಲ್ಲಿನ ಅತಿ ಮುಖ್ಯ, ಲಾಭದಾಯಕ ಉದ್ಯಮ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: