ವಿಷಯಕ್ಕೆ ಹೋಗು

ಅರ (ಉಪಕರಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಕ್ಕಡೆ ಕೊಯ್ತದ ಸಪಾಟ ಅರ

ಅರ ತಯಾರಿಕಾ ವಸ್ತುವಿನಿಂದ ನಾಜೂಕು ಪ್ರಮಾಣದ ವಸ್ತುವನ್ನು ತೆಗೆಯಲು ಬಳಸಲಾಗುವ ಒಂದು ಉಪಕರಣ. ಇದು ಮರಗೆಲಸ, ಲೋಹಗೆಲಸ, ಮತ್ತು ಇತರ ಹೋಲುವ ವ್ಯಾಪಾರ ಹಾಗೂ ಹವ್ಯಾಸ ಕಾರ್ಯಗಳಲ್ಲಿ ಸಾಮಾನ್ಯವಾಗಿದೆ. ಬಹುತೇಕ ಅರಗಳು ಆಯತಾಕಾರದ, ಚೌಕಾಕಾರದ, ತ್ರಿಕೋನ, ಅಥವಾ ದುಂಡು ಅಡ್ಡಛೇದದ ಗಟ್ಟಿಗೊಳಿಸಲಾದ ಉಕ್ಕಿನ ಸರಳಿನಿಂದ ತಯಾರಿಸಲಾದ ಕೈ ಉಪಕರಣಗಳಾಗಿರುತ್ತವೆ, ಮತ್ತು ಒಂದು ಅಥವಾ ಹೆಚ್ಚು ಮೇಲ್ಮೈಗಳನ್ನು ಚೂಪಾದ, ಸಾಮಾನ್ಯವಾಗಿ ಸಮಾನಾಂತರ ಹಲ್ಲುಗಳಿಂದ ಕತ್ತರಿಸಲಾಗಿರುತ್ತದೆ. ಒಂದು ತುದಿಯಲ್ಲಿ ಕಿರಿದಾದ, ಚೂಪು ಬಉಡ ಸಾಮಾನ್ಯವಾಗಿರುತ್ತದೆ, ಇದಕ್ಕೆ ಒಂದು ಹಿಡಿಕೆಯನ್ನು ಅಳವಡಿಸಬಹುದು.[೧]

ಒರಟು ಅರವು ವಿಶಿಷ್ಟ, ಪ್ರತ್ಯೇಕವಾಗಿ ಕತ್ತರಿಸಲಾದ ಹಲ್ಲುಗಳಿರುವ ಅರದ ಒಂದು ರೂಪ ಮತ್ತು ಇದನ್ನು ದೊಡ್ಡ ಪ್ರಮಾಣದ ವಸ್ತುವನ್ನು ಒರಟಾಗಿ ತೆಗೆಯಲು ಬಳಸಲಾಗುತ್ತದೆ.[೨]

ಒರಟಾದ ಮೇಲ್ಮೈಗಳಿರುವ ಅರಗಳನ್ನೂ ಅಭಿವೃದ್ಧಿಪಡಿಸಲಾಗಿದೆ, ಉದಾ. ನೈಸರ್ಗಿಕ ಅಥವಾ ಕೃತಕ ವಜ್ರ ಹರಳುಗಳು ಅಥವಾ ಸಿಲಿಕಾನ್ ಕಾರ್ಬೈಡ್. ಇವುಗಳಿಂದ ಲೋಹವನ್ನು ಮೊಂಡುಮಾಡುವ ಅಥವಾ ಪ್ರತಿರೋಧಿಸುವ ಪಿಂಗಾಣಿಯಂತಹ ವಸ್ತುವನ್ನು ತೆಗೆಯಲು ಸಾಧ್ಯವಾಗುತ್ತದೆ.

ಅರಗಳು ವಿವಿಧ ರೀತಿಯ ಸಾಮಗ್ರಿಗಳು, ಗಾತ್ರಗಳು, ಆಕಾರಗಳು, ಕೊಯ್ತಗಳು, ಮತ್ತು ಹಲ್ಲು ಸಂರಚನೆಗಳಲ್ಲಿ ಬರುತ್ತವೆ. ಅರದ ಅಡ್ಡಛೇದ ಸಪಾಟ, ದುಂಡಗೆ, ಅರೆದುಂಡಗೆ, ತ್ರಿಕೋನ, ಚೌಕ, ಚಾಕು ಅಂಚು ಅಥವಾ ಹೆಚ್ಚು ವಿಶೇಷ ಆಕಾರದಲ್ಲಿರಬಹುದು. ಉಕ್ಕಿನ ಅರಗಳನ್ನು ಹೆಚ್ಚು ಇಂಗಾಲಯುಕ್ತ ಉಕ್ಕಿನಿಂದ ತಯಾರಿಸಲಾಗುತ್ತದೆ (ಶೇಕಡ ೧ ರಿಂದ ೧.೨೫ ಇಂಗಾಲ) ಮತ್ತು ಮೇಲ್ಮೈ ಗಟ್ಟಿಗೊಳಿಸಲಾದ ಅಥವಾ ಏಕಸಮಾನ ಗಟ್ಟಿಗೊಳಿಸಲಾದ ಪ್ರಕಾರದ್ದಾಗಿರಬಹುದು.

ಅರದ ನಾಮಕರಣಕ್ಕೆ ಯಾವುದೇ ಏಕೀಕೃತ ಅಂತರರಾಷ್ಟ್ರೀಯ ಮಾನದಂಡವಿಲ್ಲ; ಆದರೆ, ನಿರ್ದಿಷ್ಟ ಬಗೆಯ ಅರಗಳಿಗೆ ಅನೇಕ ಸಾಮಾನ್ಯವಾಗಿ ಒಪ್ಪಲಾದ ಹೆಸರುಗಳಿವೆ. ಮೊಂಡಾದ ಅರವು ಅದರ ಉದ್ದಕ್ಕೂ ಸಮಾನಾಂತರ ಮಗ್ಗಲುಗಳು ಮತ್ತು ಅಗಲ ಹೊಂದಿರುತ್ತದೆ. ಮೊನಚಾದ ಅರವು ಹಿಂಭಾಗದಿಂದ ಮೊನೆಯ ಕಡೆಗೆ ಅದರ ಆಯಾಮಗಳಲ್ಲಿ ಕಡಿತ ಹೊಂದಿರುತ್ತದೆ. ಒಂದು ಅರವು ಅಗಲದಲ್ಲಿ, ದಪ್ಪದಲ್ಲಿ, ಅಥವಾ ಎರಡರಲ್ಲೂ ಕ್ರಮೇಣ ಕಡಿಮೆಯಾಗಬಹುದು. ಬಉಡವು ಹಿಂಭಾಗದಲ್ಲಿನ ಒಂದು ಹೊರಚಾಚುವಿಕೆ ಮತ್ತು ಮೊನಚಾಗಿರುವ, ಸಮಾನಾಂತರ ಮಗ್ಗುಲಿನ, ಅಥವಾ ಶಂಕುವಿನಾಕಾರದ್ದಾಗಿರುತ್ತದೆ ಮತ್ತು ಇದನ್ನು ಹಿಡಿಯಲು, ಹಿಡಿಯಲ್ಲಿ ಒಳಸೇರಿಸಲು, ಅಥವಾ ಹಿಡಿಕೆಯಲ್ಲಿ ಕೂರಿಸಲು ಬಳಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Lye 1993, pp. 12–13.
  2. "Facts about Files" (PDF). Archived from the original (PDF) on 2017-07-13. Retrieved 2017-09-26.