ವಿಷಯಕ್ಕೆ ಹೋಗು

ಅರ್ಹಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಲ್ಕು ವಿಧವಾದ ಘಾತಿಕರ್ಮಗಳನ್ನೂ ಗೆದ್ದು ಜಿನರೆನ್ನಿಸಿಕೊಂಡವರೇ ಅರ್ಹಂತರು. ಇವರಿಗೆ ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯ, ಅನಂತಸುಖಗಳು ಪ್ರಾಪ್ತವಾಗಿರುತ್ತವೆ. ಇವರಿಗೆ ಹಸಿವು, ನೀರಡಿಕೆ ಮೊದಲಾದ ಹದಿನೆಂಟು ದೋಷಗಳಿರುವುದಿಲ್ಲ. ಅರ್ಹತ್ ಪರಮೇಷ್ಠಿಗಳು ಜೀವ ಮಾತ್ರವನ್ನು ಉದ್ಧರಿಸುವ ಧರ್ಮತೀರ್ಥವನ್ನು ಪ್ರವರ್ತಿಸುವುದರಿಂದ ತೀರ್ಥಂಕರರೆನಿಸುವರು. ಇದರಿಂದಾಗಿ ಪಂಚಪರಮೇಷ್ಟಿಗಳಲ್ಲಿ ಇವರ ಹೆಸರು ಮೊದಲು ಬರುತ್ತದೆ. ಅನಂತಜ್ಞಾನ ದರ್ಶನಾದಿಗಳನ್ನುಳ್ಳವರಾದ್ದರಿಂದ ಇವರು ಉಪದೇಶ ಮಾಡಲು ಅರ್ಹರು, ಆಪ್ತರು. ಇವರ ದೇಹ ಪವಿತ್ರವಿದ್ದು ಸಪ್ತಧಾತು ರಹಿತವಾಗಿದೆ, ಅತ್ಯುಜ್ಜ್ವಲವಾಗಿದೆ. ಇವರು ಶುದ್ಧಾತ್ಮರು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅರ್ಹಂತ&oldid=714463" ಇಂದ ಪಡೆಯಲ್ಪಟ್ಟಿದೆ