ವಿಷಯಕ್ಕೆ ಹೋಗು

ಅರ್ವಿಂಗ್ ವಾಷಿಂಗ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ವಿಂಗ್ ವಾಷಿಂಗ್‍ಟನ್

1783-1859. ಅಮೆರಿಕದ ವಿಶ್ವವಿಖ್ಯಾತರಾದ ಮೊದಲ ಸಾಹಿತಿಗಳಲ್ಲೊಬ್ಬ, ಕಾದಂಬರಿಕಾರ.

ಬದುಕು

[ಬದಲಾಯಿಸಿ]

ಜನನ ನ್ಯೂಯಾರ್ಕ್‌ನಲ್ಲಿ. ವಕೀಲವೃತ್ತಿ ಬಿಟ್ಟು ಸಾಹಿತ್ಯರಚನಗೆ ತೊಡಗಿದ. ಲಿವರ್‌ಪೂಲ್‌ನಲ್ಲಿದ್ದ ತಮ್ಮ ಕುಟುಂಬದ ವ್ಯಾಪಾರಶಾಖೆಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋದರೂ ವ್ಯಾಪಾರದಲ್ಲಿ ನಷ್ಟವಾದ್ದರಿಂದ ಜೀವನಕ್ಕಾಗಿ ಬರೆಹವನ್ನೇ ಅವಲಂಬಿಸಿದ. 1826ರಿಂದ ಮೂರು ವರ್ಷ ಸ್ಪೇನಿನ ರಾಯಭಾರಿ ವರ್ಗದಲ್ಲಿದ್ದ.

ಅಣ್ಣ ಪೀಟರ್ ಸಂಪಾದಕನಾಗಿದ್ದ ಕ್ರಾನಿಕಲ್ ಪತ್ರಿಕೆಗೆ ನ್ಯೂಯಾರ್ಕ್ ಜನಜೀವನವನ್ನು ಕುರಿತು ವಿಡಂಬನೆ ಗಳನ್ನು ಬರೆದ (1802-03). ವಿಲಿಯಂ ಅರ್ವಿಂಗ್, ಜೇಮ್ಸ್‌ ಕೆ. ಪಾಡ್ಲಿಂಗರೊಡನೆ ಸೇರಿ ಸಲ್ಮಗುಂಡಿ (1807-08) ಲೇಖನಮಾಲೆಯನ್ನೂ ನಿಕರ್ ಬಾಕರ್ ಎಂಬ ಸಾಹಿತ್ಯನಾಮದಿಂದ ಹಿಸ್ಟರಿ ಆಫ್ ನ್ಯೂಯಾರ್ಕ್(1809) ಎಂಬ ಹಾಸ್ಯಗ್ರಂಥವನ್ನೂ ರಚಿಸಿದ. ದಿ ಸ್ಕೆಚ್ ಬುಕ್ ಆಫ್ ಜೊಫ್ರೆ ಕ್ರಯಾನ್ (1819-20) ಎಂಬ ಪ್ರಬಂಧ ಮತ್ತು ಸಣ್ಣಕಥೆಗಳ ಸಂಗ್ರಹವೂ, ಬೇಸ್ ಬ್ರಿಜ್ ಹಾಲ್ (1822) ಎಂಬ ಕೃತಿಯೂ ಇವನಿಗೆ ಪ್ರಸಿದ್ಧಿ ತಂದುವು. ಟೇಲ್ಸ್‌ ಆಫ್ ಎ ಟ್ರ್ಯಾವಲರ್ (1824) ವಿಪರೀತ ಟೀಕೆಗೊಳಗಾಯಿತು. ಕೊಲಂಬಸ್ಸನ ಜೀವನಚರಿತ್ರೆ (1828), ದಿ ಕಾಂಕ್ಟೆಸ್ಟ್‌ ಆಫ್ ಗ್ರಾನಡಾ (1829) ಮತ್ತು ದಿ ಅಲ್‌ಹಾಂಬ್ರ (1832) ಗ್ರಂಥಗಳನ್ನು ಬರೆದ. ಐದು ಸಂಪುಟಗಳ ಲೈಫ್ ಆಫ್ ವಾಷಿಂಗ್ಟನ್ (1855-59) ಎಂಬುದು ಈತನ ಉತ್ತಮ ಜೀವನಚರಿತ್ರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: