ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿ
ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿ
Born
ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿ

೩೦ ನವೆಂಬರ್ ೧೭೫೬
ಜರ್ಮನಿ
Nationalityಜರ್ಮನಿ

ಅರ್ನ್‌ಸ್ಟ್ ಫ್ಲೋರೆನ್ಸ್ ಫ್ರೈಡ್‌ರಿಚ್ ಕ್ಲಾದ್ನಿಯವರು ಜರ್ಮನಿಯ ಭೌತವಿಜ್ಞಾನಿ. ಅವರು ವಿಟ್ಟನ್‌ಬರ್ಗ್‌ನ ಸೆಕ್ಸೋನಿ ಎಂಬ ಪ್ರದೇಶದಲ್ಲಿ ೧೭೫೬ರ ನವೆಂಬರ್ ೩೦ರಂದು ಹುಟ್ಟಿದರು. ಕ್ಲಾದ್ನಿಯವರು ೧೭೮೬ರಲ್ಲಿ ಒಂದು ಪ್ರಯೋಗ ನಡೆಸಿದರು. ಮೇಲಿನ ಭಾಗದಲ್ಲಿ ಮರಳು ತುಂಬಿದ ಒಂದು ತೆಳುವಾದ ಲೋಹದ ಹಾಳೆ ಇಲ್ಲವೇ ಗಾಜಿನ ಫಲಕ ಕಂಪಿಸುವಂತೆ ಮಾಡಿ, ಆ ಕ್ರಿಯೆಯಿಂದ ಶಬ್ದ ಉತ್ಪತ್ತಿಯಾಗುವ ಹಾಗೆ ಮಾಡಿದರು. ಆ ಕಂಪನಗಳಿಗೆ ಅನುಗುಣವಾಗಿ ಮರಳಿನಲ್ಲಿ ಅನೇಕ ನಮೂನೆಯ ಚಿತ್ರಗಳು ಮೂಡಿದವು. ಆ ಚಿತ್ತಾರಗಳನ್ನು ‘ಕ್ಲಾದ್ನಿಯ ರೇಖೆಗಳು’ ಎಂಬುದಾಗಿ ಕರೆಯಲಾಯಿತು.[೧] ಈ ತಮ್ಮ ತಂತ್ರವನ್ನು ಪ್ಯಾರಿಸ್ಸಿನಲ್ಲಿ ವಿಜ್ಞಾನಿಗಳ ಒಂದು ಗುಂಪಿನೆದುರಿಗೆ ಕ್ಲಾದ್ನಿಯವರು ೧೮೦೯ರಲ್ಲಿ ಪ್ರದರ್ಶಿಸಿದರು. ಹಾಗೆಯೇ ಆರ್ಗಾನ್ ಕೊಳವೆ ವಾದ್ಯದಲ್ಲಿ ಗಾಳಿಯ ಬದಲು ವಿಭಿನ್ನವಾದ ಅನಿಲಗಳನ್ನು ತುಂಬಿ, ವಾದ್ಯದ ಶೃತಿಯನ್ನು ಬದಲಾಯಿಸುವುದರ ಮೂಲಕ ಆ ಅನಿಲಗಳಲ್ಲಿ ಶಬ್ದದ ವೇಗವನ್ನು ಕ್ಲಾದ್ನಿಯವರು ಅಳೆದರು. ಅಲ್ಲದೆ ಕ್ಲಾದ್ನಿಯವರು ಕ್ಲಾವಿಸಿಲಿಂಡರ್, ಯುಫೋನಿಯಂ ಸೇರಿದಂತೆ ಅನೇಕ ವಾದ್ಯಗಳನ್ನು ಸಂಶೋಧಿಸಿದರು.[೨] ಸ್ವಾರಸ್ಯ ಸಂಗತಿಯೆಂದರೆ ಕ್ಲಾದ್ನಿಯವರು ೧೭೯೪ರಲ್ಲಿ ಉಲ್ಕೆಗಳ ಮೇಲೆ ಒಂದು ಪುಸ್ತಕ ಬರೆದು, ಅವು ನಮ್ಮ ಭೂಮಿಯಿಂದ ದೂರವಿರುವ ಯಾವುದೋ ಸ್ಪೋಟವಾದ ಗ್ರಹದ ಭಗ್ನಾವಶೇಷವಾಗಿದೆ. ಆ ಭಗ್ನಾವಶೇಷಗಳು ಭೂಮಿಯನ್ನು ಪ್ರವೇಶಿಸಿವೆ ಎಂಬ ಸಿದ್ಧಾಂತವನ್ನು ಅವರು ಮಂಡಿಸಿದರು. ಆದರೆ ೧೮೦೩ರಲ್ಲಿ ಫ್ರಾನ್ಸಿನ ಭೌತವಿಜ್ಞಾನಿ ಜೀನ್ ಬಯಟ್‌ರವರು (೧೭೭೪-೧೮೬೨) ಆ ಉಲ್ಕೆಗಳು ನಮ್ಮ ಭೂಮಿಯ ಆಕಾಶದಿಂದ ಕೆಳಗೆ ಬೀಳುತ್ತವೆ ಎಂಬುದಾಗಿ ಆ ವಿಷಯವನ್ನು ದೃಢಪಡಿಸಿದರು. ಕ್ಲಾದ್ನಿಯವರು ಪೋಲೆಂಡಿನಲ್ಲಿ ೧೮೨೭ರ ಏಪ್ರಿಲ್ ೩ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]