ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್
ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್
Born
ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್

೧೦ ಆಗಸ್ಟ್ ೧೯೦೨
ಸ್ವೀಡನ್ನ್
Nationalityಸ್ವೀಡನ್ನ್

ಸ್ವೀಡನ್ನಿನ ಭೌತ-ಜೀವರಸಾಯನವಿಜ್ಞಾನಿಯಾಗಿದ್ದ (physical biochemist) ಅರ್ನೆ ವಿಲ್ಹೆಲ್ಮ್ ಕೌರಿನ್ ಟಿಸೆಲಿಯಸ್ರವರು ೧೯೦೨ರ ಆಗಸ್ಟ್ ೧೦ರಂದು ಸ್ಟಾಕ್ಹೋಮ್ನಲ್ಲಿ ಜನಿಸಿದರು. 1925ರಲ್ಲಿ ಟಿಸೆಲಿಯಸ್ರವರು ಇನ್ನೊಬ್ಬ ವಿಜ್ಞಾನಿ ಸ್ವೆಡ್ಬರ್ಗ್ರವರ (1884-1971) ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಉನ್ನತ ವೇಗದ ಕೇಂದ್ರಮಾಪಕವನ್ನು (ultracentrifuge) ಅಭಿವೃದ್ಧಿಪಡಿಸುತ್ತಿದ್ದರು. ಟಿಸೆಲಿಯಸ್ರವರು ಪ್ರೋಟೀನ್ ಅಣುಗಳ ಗಾತ್ರ ಮತ್ತು ಆಕಾರಗಳ ಅಧ್ಯಯನ ನಡೆಸಲು ಆ ಹೊಸ ಸಾಧನವನ್ನು ಉಪಯೋಗಿಸಿದರು. ಆ ಸಾಧನದಲ್ಲಿ ಸಜಾತೀಯ ಎಂಬುದಾಗಿ ಕಂಡುಬಂದ ಅನೇಕ ಪದಾರ್ಥಗಳನ್ನು ವಿದ್ಯುತ್ಸರಣ ಕ್ರಿಯೆಯಿಂದ (electrophoresis) ಬೇರ್ಪಡಿಸಬಹುದು ಎಂಬುದಾಗಿ ಅವರು ಕಂಡುಹಿಡಿದರು. (ವಿವರಣೆ: ವಿದ್ಯುಚ್ಚಾಲಕ ಬಲದ ಪರಿಣಾಮವಾಗಿ ಕಲಿಲ ದ್ರಾವಣದಲ್ಲಿ ಇರುವ ಕಣಗಳು ಎರಡರಲ್ಲೊಂದು ವಿದ್ಯುದ್ವಾರದ ದಿಕ್ಕಿನಲ್ಲಿ ಚಲಿಸುವುದು. ಧನಾವಿಷ್ಟ ಕಣಗಳು ಕ್ಯಾಥೋಡ್ಗೂ, ಋಣಾವಿಷ್ಟ ಕಣಗಳು ಆನೋಡ್ಗೂ ಹರಿಯುವುವು. ಇವನ್ನು ಕ್ರಮವಾಗಿ ಕಕೆಟಫಾರೆಸಿಸ್ಕಿ ಮತ್ತು ಕಅನಫಾರೆಸಿಸ್ಕಿ ಎಂದು ಕರೆಯುವುದುಂಟು. ಎಲೆಕ್ಟ್ರೋಫೊರೆಸಿಸ್ ಕ್ರಿಯೆಯನ್ನು ಪ್ರೋಟೀನ್, ನ್ಯೂಕ್ಲಿಯಕ್ ಆಮ್ಲ, ಎನ್ಜೈಮ್ ಇತ್ಯಾದಿಗಳ ಮಿಶ್ರಣಗಳ ಅಧ್ಯಯನದಲ್ಲಿ ವಿಸೃತವಾಗಿ ಬಳಸಲಾಗುತ್ತದೆ. ವೈದ್ಯಕೀಯದಲ್ಲಿ ಇದನ್ನು ಶರೀರದ ತರಲಗಳಲ್ಲಿ ಇರುವ ಪ್ರೋಟೀನ್ ಅಂಶವನ್ನು ನಿರ್ಧರಿಸಲು ಬಳಸಲಾಗುತ್ತದೆ.) ಅವರು ಝಿಯೋಲೈಟ್ ಖನಿಜಗಳಲ್ಲಿರುವ ವಿಶೇಷಗುಣಗಳನ್ನು ಕಂಡುಹಿಡಿದರು.[೧] ಉದಾಹರಣೆಗೆ ನಿರ್ವಾತದಲ್ಲಿ ಆ ಖನಿಜದಲ್ಲಿರುವ ನೀರಿನ ಅಂಶವನ್ನು ಹೊರತೆಗೆದರೂ ಸಹ ಅದರ ಹರಳುಗಳಂತಹ ರಚನೆಗೆ ಯಾವ ಕೆಡಕುಂಟಾಗುವುದಿಲ್ಲ ಎಂಬುದಾಗಿ ಅವರು ಕಂಡುಹಿಡಿದರು. ನಂತರ ಅವರು ವಿದ್ಯುತ್ಸರಣ ಉಪಕರಣವನ್ನು ಮತ್ತೆ ನಿರ್ಮಿಸಿ, ಕುದುರೆಯ ರಕ್ತಸಾರದಲ್ಲಿರುವ ಪ್ರೋಟೀನ್ಗಳನ್ನು ಬೇರ್ಪಡಿಸಲು ಆ ಉಪಕರಣವನ್ನು ಉಪಯೋಗಿಸಿದರು. ಟಿಸೆಲಿಯಸ್ರವರ ವಿದ್ಯುತ್ಸರಣ ಕ್ರಿಯೆಯ ಸಂಶೋಧನೆಗೆ 1948ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಟಿಸೆಲಿಯಸ್ರವರು 1971ರ ಅಕ್ಟೋಬರ್ 29ರಂದು ಸ್ಟಾಕ್ಹೋಮ್ನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]