ಎ. ಡಿ. ಶ್ರಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅರ್ದೇಶಿರ್ ಡರಾಬ್ ಶ್ರಾಫ್ ಇಂದ ಪುನರ್ನಿರ್ದೇಶಿತ)
ಚಿತ್ರ:12 adshroff -big.jpg
ಅರ್ದೇಶಿರ್ ಡರಾಬ್ ಶಾ ಶ್ರಾಫ್

ಅರ್ದೇಶಿರ್ ಡರಾಬ್ ಶಾ ಶ್ರಾಫ್[ಬದಲಾಯಿಸಿ]

(೧೮೯೯-೧೯೬೫)

ಜನನ ಹಾಗೂ ಬಾಲ್ಯ[ಬದಲಾಯಿಸಿ]

ಅರ್ದೇಶಿರ್ ಡರಾಬ್ ಶಾ ಶ್ರಾಫ್ ಒಂದು ಪಾರ್ಸಿ ಪರಿವಾರದ ಮನೆಯಲ್ಲಿ ಜನಿಸಿದ್ದರು. ಪಾರ್ಸಿ ಗೆಳೆಯರ, ಹಾಗೂ ಸಾರ್ವಜನಿಕ ವಲಯದಲ್ಲಿ ಎ.ಡಿ.ಶ್ರಾಫ್ ಎಂದೇ ಪ್ರಖ್ಯಾತರಾಗಿರುವ, ಅರ್ದೇಶಿರ್ ಡರಾಬ್ ಶಾ ಶ್ರಾಫ್, ಭಾರತದ ಒಬ್ಬ ಹೆಸರಾಂತ, ಸಮರ್ಥ ಉದ್ಯೋಗಪತಿ, ಬ್ಯಾಂಕರ್, ಹಾಗೂ ವಿಚಾರವಂತ, ಅರ್ಥಶಾಸ್ತ್ರಜ್ಞರು. ೧೯೪೪ ರಲ್ಲಿ ಅರ್ದೇಶಿರ್ ಡರಾಬ್ ಶ್ರಾಫ್ ರವರು ಯಾವ ಅಧಿಕಾರದ ಉಪಯೋಗವನ್ನೂ ಪಡೆಯದೆ, ಸ್ವತಂತ್ರವಾಗಿ, ವಿಶ್ವಸಂಸ್ಥೆ ಆಯೋಜಿಸಿದ್ದ ಡೆಲಿಗೇಟ್ ಆಗಿ ಭಾರತವನ್ನು ಪ್ರತಿನಿಧಿಸಿದ್ದರು. ಆಗ, ಭಾರತ ಇನ್ನೂ ಸ್ವಾತಂತ್ರ್ಯ ಪಡೆದಿರಲಿಲ್ಲ.

ವಿಶ್ವಸಂಸ್ಥೆಯಲ್ಲಿ[ಬದಲಾಯಿಸಿ]

("Bretton Woods Conference") ನಲ್ಲಿ ಚರ್ಚಿಸಿದ ವಿಚಾರಗಳು, ಭಾರತದ ಭವಿಷ್ಯದ ವಿತ್ತೀಯ ಸಮಸ್ಯೆಗಳನ್ನು ಕುರಿತದ್ದಾಗಿತ್ತು. ಸ್ವಾತಂತ್ರ್ಯೋತ್ತರ ಹೋರಾಟದನಂತರ, ಹಣಕಾಸಿನ ಮತ್ತು ವಾಣಿಜ್ಯ ಪದ್ಧತಿಗಳು ಎಂಬ ವಿಷಯವನ್ನು ಕುರಿತದ್ದು. ಅದೇ ವರ್ಷದಲ್ಲಿ ಇತರ ೭ ಜನ ಹೆಸರಾಂತ ಉದ್ಯಮಿಗಳ ಜೊತೆಗೆ, ಜಂಟಿಯಾಗಿ, ಬಾಂಬೆ ಪ್ಲಾನ್ ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದರು. ಇಲ್ಲಿ ನಮೂದಿಸಿದ ಹಲವಾರು ಅಂಕಿ-ಅಂಶಗಳು ಸ್ವಾತಂತ್ರ್ಯ ಚಳುವಳಿಯ ಬಳಿಕ ಭಾರತದ ಅರ್ಥವ್ಯವಸ್ಥ್ಯೆಯನ್ನು ಸುಸ್ಥಿರಪಡಿಸಿ ಬೆಳೆಸುವ ಉದ್ದೇಶದಿಂದ ತಯಾರಿಸಿದ ಯೋಜನೆಯಾಗಿತ್ತು.

[Investment Corporation of India] , ದ ಸ್ಥಾಪಕ ಡೈರೆಕ್ಟರ್ ಆಗಿ, ಶ್ರಾಫ್[ಬದಲಾಯಿಸಿ]

೧೯೫೦ ರಲ್ಲಿ ಅರ್ದೇಶಿರ್ ಡರಾಬ್ ಶ್ರಾಫ್ ರವರು, Investment Corporation of India ದ ಸ್ಥಾಪಕ-ಡೈರೆಕ್ಟರ್ ಆದರು. ಬ್ಯಾಂಕ್ ಆಫ್ ಇಂಡಿಯದ ಚೇರ್ಮನ್ ಮತ್ತು ನ್ಯೂ ಇಂಡಿಯ ಅಶ್ಯೂರೆನ್ಸ್ ಕಂ ಲಿಮಿಟೆಡ್ ೧೯೫೬, ರಲ್ಲಿ ಜಂಟಿಯಾಗಿ, ದ ಫೋರಮ್ ಆಫ್ ಫ್ರೀ ಎಂಟರ್ ಪ್ರೈಸ್ ಎಂಬ ವೈಚಾರಿಕ ಮನೋಭಾವವನ್ನು ಬೆಳೆಸುವ ಸಂಸ್ಥೆಯನ್ನು ಸ್ಥಾಪಿಸಿದರು. ಇದು, ಅಂದಿನ ನೆಹ್ರೂ ಸರ್ಕಾರದ ನೀತಿಯ ಸಮಾಜವಾದದ ಮನೋಭಾವಗಳನ್ನು ಪೋಶಿಸುವ ವಿಚಾರಗಳಿಗೆ ವಿರುದ್ಧವಾಗಿತ್ತು. ಅರ್ದೇಶಿರ್ ಡರಾಬ್ ಶ್ರಾಫ್, ಟಾಟ ಗ್ರೂಪ್ ಕಂ ಗಳಿಗೆ ಡೈರೆಕ್ಟರ್ ಆಗಿ, ಮತ್ತು ಇತರ ಕೆಲವು ಪ್ರಮುಖ ಮುಂದುವರೆದ ಖಾಸಗಿ ಉದ್ಯಮ ಸಂಸ್ಥೆಗಳ ಡೈರೆಕ್ಟರ್ ಆಗಿ ದುಡಿದರು.

ಅರ್ದೇಶಿರ್ ಡರಾಬ್ ಶ್ರಾಫ್' ರವರ ಬಗ್ಗೆ ಬರೆದ ಪುಸ್ತಕ[ಬದಲಾಯಿಸಿ]

ಅರ್ದೇಶಿರ್ ಡರಾಬ್ ಶ್ರಾಫ್ ರವರ ವ್ಯಕ್ತಿತ್ವದ ದರ್ಶನ ಮಾಡಿಸಲು, ೨೦೦೦ ದಲ್ಲಿ, ಶ್ರೀಮತಿ ಸುಚೇತಾ ದಲಾಲ್ ಬರೆದ ಪುಸ್ತಕ, ದ ಫೋರಮ್ ಆಫ್ ಫ್ರೀ ಎಂಟರ್ ಪ್ರೈಸ್ ನ ವತಿಯಿಂದ ಮುದ್ರಿತವಾಗಿ ಪ್ರಕಟಿಸಲಾಯಿತು.