ಅರ್ಜುನ್ ಭಿಕಾ ಜಾಧವ್

ವಿಕಿಪೀಡಿಯ ಇಂದ
Jump to navigation Jump to search

ಈಗಾಗಲೇ ಸೇವಾನಿವೃತ್ತರಾಗಿ, ವಿಶ್ರಾಂತಿ ಜೀವನ ನಡೆಸುತ್ತಿರುವ 'ಅರ್ಜುನ್ ಭಿಕಾ ಜಾಧವ್', ಮಹಾರಾಷ್ಟ್ರದ ’ಉಸ್ಮಾನಾಬಾದ್’ ಜಿಲ್ಲೆಯ, ’ತುಳ್ಜಾಪುರ’ದಲ್ಲಿ ವಾಸಿಸುತ್ತಿದ್ದಾರೆ. ೧೯೯೬ ರಲ್ಲಿ ಜಾಧವ್, ’ಪುಣೆಯ ಯರವಾಡ ಜೈಲ್’ ನಲ್ಲಿ, ’ಹ್ಯಾಂಗ್ ಮನ್’ ಆಗಿ ಕೆಲಸಮಾಡಿ ಸೇವಾನಿವೃತ್ತರಾದರು. ೨ ವರ್ಷಗಳ ಹಿಂದೆ ಜಾಧವ್ ಪಾರ್ಷ್ವ-ವಾಯು ಪೀಡಿತರಾಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

'ಅರ್ಜುನ್ ಭಿಕಾ ಜಾಧವ್ ರವರ, ವೃತ್ತಿಜೀವನದ ಆರಂಭ[ಬದಲಾಯಿಸಿ]

ಮಹಾರಾಷ್ಟ್ರ ರಾಜ್ಯದ 'ಸೋಲಾಪುರ್' ಜಿಲ್ಲೆಯ', ಯಾವ್ಲಿ ಗ್ರಾಮದ ಕೃಷಿ ಕಾರ್ಮಿಕರೊಬ್ಬರ ಮಗನಾಗಿ ಜನಿಸಿದ ಜಾಧವ್, ೭ ನೇ ತರಗತಿಯವರೆಗೆ ಓದಿದ್ದರು. ಮಾರ್ಚ್, ೧೯೬೩ ರಲ್ಲಿ ಶಾಲೆಯನ್ನು ಬಿಟ್ಟು, ಪುಃಣೆಯ ಯರವಾಡ ಜೈಲಿನ ’ಹ್ಯಾಂಗ್ ಮನ್’ ಕೆಲಸಕ್ಕೆ ಭರ್ತಿಯಾದರು. ೩ ಮಕ್ಕಳಿರುವ ’ಜಾಧವ್' ರವರಿಗೆ, ೨ ವರ್ಷಗಳ ಹಿಂದೆ ಪತ್ನಿಯ ವಿಯೋಗವಾಯಿತು. ತಿಂಗಳಿಗೆ ೪,೦೦೦ ಪಿಂಚಿಣಿಗಳಿಸುತ್ತಿರುವ 'ಜಾಧವ್', ತಮ್ಮ ಕೈಲಿ ಗಲ್ಲಿಗೇರಿಸಲ್ಪಟ್ಟ ಅಪರಾಧಿಗಳ ಬಗ್ಗೆ ಇಂದಿಗೂ ನೆನೆಸಿಕೊಳ್ಳುತ್ತಾರೆ. ೧೯೬೩ ರಲ್ಲಿ, ಅಪರಾಧಿಯೊಬ್ಬರು, ಜಾಧವ್ ನೇಣುಗಂಬಕ್ಕೆ ಏರಿಸಿದ ಮೊಟ್ಟಮೊದಲ ವ್ಯಕ್ತಿಯಾಗಿದ್ದರು. ೧೯೯೫ ರಲ್ಲಿ ಮಹಾರಾಷ್ಟ್ರದ, ಸುಧಾಕರ್ ಜೋಶಿ ಯೆಂಬ ತಪ್ಪಿತಸ್ಥನನ್ನು ಗಲ್ಲಿಗೇರಿಸಿದ ಕೆಲಸ, ಅವರ ಸೇವಾವಧಿಯಲ್ಲಿ ಕೊನೆಯ ಪ್ರಕರಣವಾಗಿತ್ತು.

ಆಪರೇಶನ್ ಬ್ಲ್ಯೂ ಸ್ಟಾರ‍್’ ಕಾರ್ಯಾಚರಣೆ[ಬದಲಾಯಿಸಿ]

ಹರ್ಬಿಂದರ್ ಸಿಂಗ್ ಜಿಂದಾ’ ಮತ್ತು ಸುಖದೇವ್ ಸಿಂಗ್ ಸುಖಾ ೯೯ ಮತ್ತು ೧೦೦ ನೇ ಅಪರಾಧಿಗಳಾಗಿದ್ದರು. ’ಅಮೃತ್ ಸರದ ಸ್ವರ್ಣಮಂದಿರ್’ ನಲ್ಲಿ ಅಡಗಿ ಕುಳಿತಿದ್ದ ’ಖಾಲಿಸ್ಥಾನ್ ಭಯೋತ್ಪಾದಕಿಗಳನ್ನು ಮಂದಿರದಿಂದ ಹೊರಗೆ ಹಾಕಲು, ನಡೆಸಿದ ’ಆಪರೇಶನ್ ಬ್ಲ್ಯೂ ಸ್ಟಾರ‍್’ ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿಕೊಂಡಿದ್ದ ಜನರಲ್ ಅರುಣ್ ವೈದ್ಯ ರವರನ್ನು ಹತ್ಯೆಮಾಡಿದ್ದಕ್ಕಾಗಿ, ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ತಪ್ಪಿತಸ್ತರು, ಗಲ್ಲುಶಿಕ್ಷೆಯ ಸಮಯದಲ್ಲೂ ಕೂಗಿ ನುಡಿದ ’ಖಾಲಿಸ್ಥಾನ್ ಜಿಂದಾಬಾದ್ ಘೋಷಣೆ’ ಯನ್ನು ಜಾಧವ್ ಸ್ಮರಿಸಿಕೊಳ್ಳುತ್ತಾರೆ.

ದೇಶದಲ್ಲಿ 'ಹ್ಯಾಂಗ್ ಮನ್' ಗಳಿಲ್ಲದಿದ್ದಾಗ, ತಾವೇ ಕಾರ್ಯನಿರ್ವಹಿಸುವುದು[ಬದಲಾಯಿಸಿ]

ತಮ್ಮ ಸೇವಾವಧಿಯಲ್ಲಿ ೧೦೧ ನೇ ತಪ್ಪಿತಸ್ಥರನ್ನು ನೇಣುಹಾಕುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದರು. ಸುದ್ದಿ ಚಾನೆಲ್ ಗಳಲ್ಲಿ ಪಾಕೀಸ್ತಾನಿ 'ಉಗ್ರಗಾಮಿ ಕಸಬ್' ನನ್ನು ಶಿಕ್ಷೆಯನು ಜಾರಿಗೊಳಿಸಲು 'ಹ್ಯಾಂಗ್ ಮನ್' ಗಳಿಲ್ಲವೆಂಬ ಮಾಹಿತಿ ದೊರೆತಮೇಲೆ ತಾವೇ ಕಸಬ್ ನನ್ನು ಗಲ್ಲಿಗೇರಿಸಲು ಸಿದ್ಧರಾಗುವುದು ದೇಶಸೇವೆಯನ್ನು ಸಲ್ಲಿಸಿದಂತೆ ಎನ್ನುವುದು ಅವರ ಅಭಿಮತವಾಗಿದೆ. ವಯಸ್ಸು ಮತ್ತು ದೇಹದೌರ್ಬಲ್ಯಗಳಿಂದ ಅವರು ದಣಿದಿದ್ದಾರೆ. ಆದರೆ, ಅಪರಾಧಿಯನ್ನು ನೇಣು ಹಾಕುವ ಸಾಮರ್ಥ್ಯ ಇನ್ನೂ ಉಳಿದಿದೆಯೆನ್ನುವುದು ಅವರ ಅಭಿಪ್ರಾಯ. ಗಲ್ಲಿಗೇರಿಸಲು ಬಳಸುವ 'ಹಗ್ಗ'ವನ್ನು ತಯಾರುಮಾಡಲು, ಕನಿಷ್ಟ ೮ ದಿನಗಳ ಅವಧಿ ಬೇಕಾಗುತ್ತದೆ. ವರಿಷ್ಠ-ನಾಗರಿಕರಾಗಿರುವ 'ಜಾಧವ್' ತಮ್ಮ ಇಳಿವಯಸ್ಸಿನಲ್ಲಿ ಸೇವಾನಿವೃತ್ತರಾದಮೇಲೂ ಕೈಗೊಳ್ಳಲು ತಮ್ಮ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಅವರಿಗೆ ಈ ಕಾರ್ಯ, 'ದೇಶಸೇವೆ'ಯ ಒಂದು ಕುರುಹಾಗಿ, ಸಮಾಧಾನ ತರುತ್ತಿದೆ.