ಅರ್ಚಶಿಷ್ಟ ಘೋಷಣೆ

ವಿಕಿಪೀಡಿಯ ಇಂದ
Jump to navigation Jump to search
ಅರ್ಚಶಿಷ್ಟ ಘೋಷಣೆ

ಅರ್ಚಶಿಷ್ಟ ಘೋಷಣೆ((ಕ್ಯಾನೊನ್ಯೆಸೆಷನ್). : ಯೋಸು ಬೋಧಿಸಿದ ಕ್ರೈಸ್ತಧರ್ಮದಂತೆ ನಡೆದು, ಆಧ್ಯಾತ್ಮಿಕ ಜೀವನದಲ್ಲಿ ಹೆಚ್ಚಿನ ಸಾಧುತ್ವಗಿಳಿಸಿ, ದೈವಾಧೀನನಾದ ತಿರುಸಭಾಸದಸ್ಯ, ತನ್ನ ಅಂತ್ಯ ಗುರಿಯಾದ ಸ್ವರ್ಗೀಯ ಆನಂದವನ್ನು ಅನುಭವಿಸುವನೆಂಬ ಧೃಡವಾಕ್ಯವನ್ನು ಪೋಪ್ ಜಗದ್ಗುರು ಬಹಿರಂಗವಾಗಿಯೂ ಅಧಿಕಾರದಿಂದಲೂ ಸಾರುವ ವಿಶಿಷ್ತ ಕಾರ್ಯ (ಕ್ಯಾನೊನ್ಯೆಸೆಷನ್). ಅರ್ಚಶಿಷ್ಟನೆಂಬ ಗೌರವ ದೊರಕಬೇಕಾದರೆ ಅಂಥ ವ್ಯಕ್ತಿಯಿಂದ ಕೊನೆಯಪಕ್ಶ ಎರಡಾದರೂ ಲೋಕೊತ್ತರ ಪವಾಡ ಕೃತ್ಯಗಳು ನಡೆದು ಸಾಧಾರಣಾವಾಗಿ ಅವು ರುಜುವಾತಾಗಬೇಕು. ಈ ಗೌರವಕ್ಕೆ ಭಾಜನನಾದ ಕಾರ್ಯದ ಅನಂತರ ಆ ವ್ಯಕ್ತಿ ತಿರುಸಭೆಯಲ್ಲಿ ಅರ್ಚಶಿಷ್ಟ ಅಥವಾ ಸಂತ ಎಂದು ಪರಿಗಣಿಸಲ್ಪಟ್ಟೂ ವಿಶೇಷ ಗೌರವಕ್ಕೆ ಪಾತ್ರನಾಗುತ್ತಾನೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Catholic

  1. REDIRECT Template:Cite Catholic Encyclopedia

Orthodox