ಅರೇಹಳ್ಳಿ ಗ್ರಾಮ
ಅರೇಹಳ್ಳಿ
[ಬದಲಾಯಿಸಿ]ಅರೇಹಳ್ಳಿಯೂ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲಿರುವ ಒಂದು ಗ್ರಾಮವಾಗಿದೆ. ಜಿಲ್ಲೆಯಿಂದ ೪೬ ಕಿ ಮೀ ಹಾಗೂ ರಾಜ್ಯ ರಾಜಧಾನಿಯಿಂದ ೨೨೮ ಕಿ ಮೀ ಅಂತರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ೯೫೩ ಮೀಟರ್ ಎತ್ತರದಲ್ಲಿದ್ದು ಕಾಫಿ ಇಲ್ಲಿನ ಪ್ರಮುಖ ಬೆಳೆಯಾಗಿದೆ
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಹಾಸನ |
ತಾಲ್ಲೂಕು | ಬೇಲೂರು |
ಸಮಯ ವಲಯ | IST (UTC+5:30) |
ನಿರ್ದೇಶಾಂಕಗಳು | 13°03'N 75°50' E |
ಪಿನ್ ಕೋಡ್ | ೫೭೩೧೦೧ |
ಎಸ್.ಟಿ.ಡಿ ಕೋಡ್ | ೦೮೧೭೭ |
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]೨೦೧೧ನೇ ಜನಗಣತಿಯ ಪ್ರಕಾರ ಅರೇಹಳ್ಳಿಯ ಜನಸಂಖ್ಯೆ ೭೪೬೭. ಅದರಲ್ಲಿ ೩೬೩೭ ಪುರುಷರು ಹಾಗೂ ೩೮೩೦ ಮಹಿಳೆಯರು ಇದ್ದಾರೆ.
ಸಾರಿಗೆ
[ಬದಲಾಯಿಸಿ]ಗ್ರಾಮದಲ್ಲಿ ರೈಲು ಮಾರ್ಗವಿಲ್ಲ. ರಸ್ತೆ ಮಾರ್ಗವನೇ ಅವಲಂಬಿಸಿದೆ. ಸಕಲೇಶಪುರದಿಂದ ೧೪ ಕಿ ಮೀ ಹಾಗೂ ಬೇಲೂರುನಿಂದ ೨೨ ಕಿ ಮೀ ಇದ್ದು ಬಸ್ಸಿನ ವ್ಯವಸ್ಥೆ ಇದೆ. ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಹಾಸನಕ್ಕೆ ತೆರಳಲು ರಸ್ತೆ ಮಾರ್ಗವಿದೆ.
ಕೃಷಿ
[ಬದಲಾಯಿಸಿ]ಸ್ಥಳೀಯ ರೈತರು ತಮ್ಮ ತೋಟದಲ್ಲಿ ಕಾಫಿಯನ್ನು ಬೆಳೆಯುತ್ತಾರೆ. ಇದನ್ನು ಅರೇಹಳ್ಳಿ ಕಾಫಿ ಎಂದೇ ಕರೆಯುತ್ತಾರೆ. ಇದರೊಂದಿಗೆ ಕಾಳುಮೆಣಸು, ಶುಂಠಿಯನ್ನು ಬೆಳೆಯುತ್ತಾರೆ.
ಶಿಕ್ಷಣ
[ಬದಲಾಯಿಸಿ]ಅರೇಹಳ್ಳಿ ಹಾಸನ ಜಿಲ್ಲೆ ಬೇಲೂರು ಬ್ಲಾಕ್ ನಲ್ಲಿರುವ ಒಂದು ಶಾಲಾ ಕ್ಲಸ್ಟರ್ ಆಗಿದ್ದು, ಇದರಲ್ಲಿ ಸುಮಾರು 22 ಶಾಲೆ ಗಳಿವೆ. ಅರೇಹಳ್ಳಿ ಯೂ ಅನೇಕ ಶಾಲಾ ಕಾಲೇಜುಗಳಿವೆ.
ಆಸ್ಪತ್ರೆಗಳು
[ಬದಲಾಯಿಸಿ]ಅರೇಹಳ್ಳಿಯಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ ಹಾಗೂ ಪಶು ಆಸ್ಪತ್ರೆ ಇದೆ
ಸಂತೆ ಮತ್ತು ಜಾತ್ರೆ
[ಬದಲಾಯಿಸಿ]ಪ್ರತಿ ಸೋಮವಾರ ಅರೇಹಳ್ಳಿಯಲ್ಲಿ ಸಂತೆ ಇರುತ್ತದೆ. ಇಲ್ಲಿಗೆ ಸುತ್ತಮುತ್ತಲಿನ ಹಳ್ಳಿಯ ಜನರು ಬರುತ್ತಾರೆ ಪ್ರತಿ ವರ್ಷ ಮಾರ್ಚ್ ನಲ್ಲಿ ಶನೇಶ್ವರ ಸ್ವಾಮಿ ಜಾತ್ರೆ ನಡೆಯುತ್ತದೆ. ಕೆಂಡಸೇವೆ, ಅನ್ನಸಂತರ್ಪಣೆಯೂ ಇರುತ್ತದೆ.