ಅರುಣ್ ಜೋಷಿ
Jump to navigation
Jump to search
Arun Joshi | |
---|---|
![]() | |
ಜನನ | 1939 ವಾರಣಾಸಿ, ಉತ್ತರ ಪ್ರದೇಶ |
ಮರಣ | 1993 |
ಪೌರತ್ವ | ಭಾರತೀಯ |
ಅರುಣ್ ಜೋಷಿ(೧೯೩೯-೧೯೯೩) ಒಬ್ಬ ಭಾರತೀಯ ಬರಹಗಾರ. ಅವರು ದಿ ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್ ಮತ್ತು ದಿ ಅಪ್ರೆಂಟಿಸ್ ಎಂಬ ಕಾದಂಬರಿಗಳಿಗೆ ಹೆಸರುವಾಸಿಯಾಗಿದ್ದರು. ಅವರಿಗೆ ೧೯೮೨ರಲ್ಲಿ ದಿ ಲಾಸ್ಟ್ ಲ್ಯಾಬಿರಿಂತ್ ಎಂಬ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು.
ಜೀವನ[ಬದಲಾಯಿಸಿ]
ಅರುಣ್ ಜೋಷಿಯವರು ಉತ್ತರ ಪ್ರದೇಶದ ವಾರಣಾಸಿಯಲ್ಲಿನ ವಿದ್ವಾಂಸರ ಕುಟುಂಬಕ್ಕೆ ಸೇರಿದವರು. ಭಾರತಕ್ಕೆ ಹಿಂದಿರುಗಿದ ನಂತರ, ಅವರು ದೆಹಲಿ ಜವಳಿ ಮಳಿಗೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅವರು ಶೇರು ಹೂಡಿಕೆದಾರನ ಮಗಳಾದ ರುಕ್ಮಿಣಿ ಲಾಲ್ ಅವರನ್ನು ವಿವಾಹವಾದರು. ಜೋಷಿಯವರು ಒಂದು ಏಕಾಂಗಿ ಜೀವನವನ್ನು ಉಳಿಸಿಕೊಂಡರು ಮತ್ತು ಸಾಮಾನ್ಯವಾಗಿ ಪ್ರಚಾರವನ್ನು ಬಯಸುತ್ತಿರಲಿಲ್ಲ.[೧]
ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್[ಬದಲಾಯಿಸಿ]
ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್ ಅನ್ನು ೧೯೭೧ ರಲ್ಲಿ ಬರೆದರು. ಈ ಕಾದಂಬರಿಯ ನಿರೂಪಕ ರೋಮಿ ಮತ್ತು ಪ್ರಮುಖ ಪಾತ್ರದಲ್ಲಿ ಬಿಲ್ಲಿ ಕಾಣಿಸಿಕೊಂಡಿದ್ದಾನೆ.
ಕಾದಂಬರಿಗಳು[ಬದಲಾಯಿಸಿ]
- ದಿ ಫಾರಿನರ್, ೧೯೬೮
- ದಿ ಸ್ಟ್ರೇಂಜ್ ಕೇಸ್ ಆಫ್ ಬಿಲ್ಲಿ ಬಿಸ್ವಾಸ್, ೧೯೭೧
- ದಿ ಅಪ್ರೆಂಟಿಸ್, ೧೯೭೪
- ದಿ ಲಾಸ್ಟ್ ಲ್ಯಾಬಿರಿಂತ್, ೧೯೮೧
- ದಿ ಸಿಟಿ ಆಂಡ್ ದಿ ರಿವರ್, ೧೯೯೦
ಸಣ್ಣ ಕಥೆಗಳು[ಬದಲಾಯಿಸಿ]
- ದಿ ಸರ್ವೈವರ್ ಆಂಡ್ ಅದರ್ ಸ್ಟೋರೀಸ್, ೧೯೭೫
- ದಿ ಓನ್ಲಿ ಅಮೇರಿಕನ್ ಫ಼್ರೊಮ್ ಅವರ್ ವಿಲ್ಲೇಜ್
- ದಿ ಹೋಮ್ಕಮಿಂಗ್
ಇತರೆ[ಬದಲಾಯಿಸಿ]
- ಶ್ರೀ ರಾಮ್: ೧೯೮೬ ರಲ್ಲಿ ಖುಶ್ವಂತ್ ಸಿಂಗ್ ಅವರೊಂದಿಗೆ ಜೀವನ ಚರಿತ್ರೆ
- ಲಯಾ ಶ್ರೀ ರಾಮ್: ಎ ಸ್ಟಡಿ ಇನ್ ಎಂಟರ್ಪ್ರೆನರ್ಷಿಪ್ ಅಂಡ್ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್, ೧೯೭೫