ವಿಷಯಕ್ಕೆ ಹೋಗು

ಅರುಣಾ ಜಯಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರುಣಾ ಜಯಂತಿಯವರು ೧೯೬೪ರಲ್ಲಿ ಜನಿಸಿದರು.

ಶಿಕ್ಷಣ

[ಬದಲಾಯಿಸಿ]

ಅವರು ಮುಂಬೈನ ನರ್ಸೀ ಮಾಂಜಿ ಇನ್ಸಿಟ್ಯೂಟ್ ಆಫ಼್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಓರ್ವ ವಿಧ್ಯಾರ್ಥಿಯಾಗಿದ್ದು, ಅಲ್ಲಿ ಅವರು ೧೯೮೪ರಲ್ಲಿ ಫ಼ೈನಾನ್ಸ್ ಇನ್ ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ಪದವಿಧರ ಕೋರ್ಸನ್ನು ಮುಗಿಸಿದರು.

ವೃತ್ತಿ ಜೀವನ

[ಬದಲಾಯಿಸಿ]

ಜನವರಿ ೨೦೧೧ರಿಂದ ಜನವರಿ ೨೦೧೬ರ ವರೆಗೆ ಅವರು ಕ್ಯಾಪ್ಜಮಿನಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.[] ಪ್ರೆಂಚ್ ಮಾಹಿತಿ ತಂತ್ರ‍‍ಜ್ಞಾನ ಸೇವೆಗಳು ಮತ್ತು ಸಲಹಾ ಧೈತ್ಯ ಭಾರತದ ೪೭೦೦೦ ಜನರನ್ನು ಇದು ನೇಮಿಸಿಕೊಂಡಿದೆ. ಇದು ಕ್ಯಾಪ್ಜಮಿನಿ ಗುಂಪಿನ ದೊಡ್ಡ ವ್ಯವಹಾರ ಘಟಕಗಳಲ್ಲಿ ಒಂದಾಗಿದೆ.ಭಾರತದಲ್ಲಿ ಸಲಹಾ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳ ಎಲ್ಲಾ ವ್ಯವಹಾರ ಘಟಕಗಳಾದ್ಯಂತ ಕಾರ್ಯಾಚರಣೆಗಳಿಗೆ ಅವರು ಕಾರಣರಾಗಿದ್ದಾರೆ. ನವೆಂಬರ್ ೨೦೧೪ರಲ್ಲಿ ಕಲ್ಕತ್ತ ಬೋರ್ಡ್ ಆಫ಼್ ಗವರ್ನರ್ ಆಫ಼್ ನ್ಯಾಷನಲ್ ಇನ್ಸಿಟ್ಯೂಟ್ ಆಫ಼್ ಟೆಕ್ನಾಲಾಜಿಯ ಅಧ್ಯಕ್ಷರಾಗಿದ್ದರು.

ಸಾಧನೆ

[ಬದಲಾಯಿಸಿ]

ಜನವರಿ ೨೦೧೧ರಲ್ಲಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ವಿಶ್ವದಾದ್ಯಂತ ಕಂಪೆನಿಯ ಹೊರಗುತ್ತಿಗೆ ಕಾರ್ಯಾಚರಣೆಗಳ ಗುಣಮಟ್ಟ, ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಸುಧಾರಿಸಿದರು. ಅರುಣಾರವರು ಐ.ಟಿ.ಸೇವೆ ಉಧ್ಯದಲ್ಲಿ ಸುಮಾರು ಎರಡು ದಶಕಗಳ ಅನುಭವನ್ನು ಹೊಂದಿದ್ದಾರೆ ಹಾಗೂ ಬಹುರಾಷ್ಟ್ರೀಯ ಕಂಪೆನಿ ಮತ್ತು ಶುದ್ಧ ನಾಟಕ ಕಂಪೆನಿಗಳಲ್ಲಿ ಕಾರ್ಯಾನಿರ್ವಹಿಸಿದ್ದಾರೆ. ಮುಖ್ಯ ಕಾರ್ಯನಿರ್ವಾಣ ಅಧಿಕಾರಿಯಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಅವರು ಭಾರತೀಯ ವ್ಯವಹಾರದ ಪ್ರಪಂಚದಲ್ಲಿ ತನ್ನ ಗುರುತನ್ನು ತೋರ್ಪಡಿಸಿದರು.

ಪ್ರಶಸ್ತಿಗಳು

[ಬದಲಾಯಿಸಿ]

ಫಾರ್ಚೂನ್ ಇಂಡಿಯಾ ಬಿಸಿನೆಸ್ ಟುಡೇ'ಯ ಅತ್ಯಂತ ಪ್ರಭಲ ಉಧ್ಯಮಿ ಮಹಿಳೆಯರಲ್ಲಿ ೨೦೧೨ರ ಪಟ್ಟಿಯಲ್ಲಿ ಸತತವಾಗಿ ಎರಡು ವರ್ಷಗಳಲ್ಲಿ ಅವರು ಪ್ರಮುಖವಾಗಿ ಗುರುತಿಸಿಕೊಂದಡಿದ್ದಾರೆ.[] ೨೦೧೩ರ ಇಂಡಿಯಾ ಟುಡೇ ವಿಮೆನ್ ಶೃಂಗಸಭೆಯ ಕಾರ್ಪೋರೇಟ್ ವಿಶ್ವದಲ್ಲಿ 'ಇಂಡಿಯಾ ಟುಡೇ ವಿಮೆನ್' ಎಂಬುದಾಗಿ ಅರುಣಾ ಜಯಂತಿಯವರನ್ನು ಗುರುತಿಸಲಾಗಿದೆ. ತನ್ನ ದೃಷ್ಟಿಕೋನದಲ್ಲಿ ಪ್ರಾಮಾಣಿಕ ಮತ್ತು ಸಕಾರತ್ಮಕವಾಗಿ ಅವರು ಹಲವಾರು ಪ್ರಕಣೆಗಳ ಮೂಲಕ ಸಂದರ್ಶನಗಳನ್ನು ಮಾಡಿದ್ದಾರೆ. ಹಾಗೂ ಅವರು ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.gadgetsnow.com/tech-news/Capgemini-India-CEO-Aruna-Jayanthi-promoted-to-global-role/articleshow/49512717.cms
  2. https://amritt.com/india-business-guide/aruna-jayanthi/