ಐ.ಎನ್.ಎಸ್ ಅರಿಹಂತ್
ಐ.ಎನ್.ಎಸ್ ಅರಿಹಂತ್ ಅರಿಹಂತ್ | |
ವೃತ್ತಿಜೀವನ (ಭಾರತ) | |
---|---|
ವರ್ಗ ಮತ್ತು ನಮೂನೆ: | ಅರಿಹಂತ್ ವರ್ಗದ ಜಲಾಂತರ್ಗಾಮಿ ನೌಕೆ |
ಹೆಸರು: | ಐ.ಎನ್.ಎಸ್ ಅರಿಹಂತ್ |
ನಿರ್ಮಾತೃ: | ನೌಕಾ ನಿರ್ಮಾಣ ಕೇಂದ್ರ, ವಿಶಾಖಪಟ್ಟಣ, India |
ನಿರ್ಮಾಣಾರಂಭ: | ೧೯೯೮ |
ಬಿಡುಗಡೆ: | ೨೬ ಜುಲೈ ೨೦೦೯ |
ನಾಮಧೇಯ: | ಐ.ಎನ್.ಎಸ್ ಅರಿಹಂತ್ |
ಸ್ಥಿತಿ: | ಪರೀಕ್ಷಣೆ ಹಾಗೂ ಪ್ರಯೋಗ |
ಸಾಮಾನ್ಯ ವಿವರಗಳು | |
ನಮೂನೆ: | ಎಸ್.ಎಸ್.ಬಿ.ಎನ್ |
ಉದ್ದ: | 112 m |
ಬೀಮ್: | 11 m |
ಕರಡು: | 9 m (29.5 ft) (ಅಂದಾಜು) |
ನೋದನ: | 80MW |
ವೇಗ: | 30 ನಾಟ್'ಗಳು (56 ಕಿ.ಮೀ. ಪ್ರತಿಘಂಟೆ)(ಮುಳುಗಿರುವಾಗ) |
ಪರೀಕ್ಷಣಾ ಆಳ: | 300 m (984 ft) (ಅಂದಾಜು) |
ಪೂರಕ: | 100 ಮಂದಿ ಕಾರ್ಯ ಸಿಬ್ಬಂದಿಗಳು |
ಸಿಬ್ಬಂದಿ: | 95 |
ಪರಿಷ್ಕರಣ ವ್ಯವಸ್ಥೆ: | ಬಿ.ಇ.ಎಲ್ ಯು.ಎಸ್.ಹೆಚ್.ಯು.ಎಸ್ |
ಐ.ಎನ್.ಎಸ್. ಅರಿಹಂತ್ (ಐ.ಎನ್.ಎಸ್.- ಇಂಡಿಯನ್ ನೇವಲ್ ಶಿಪ್/ಇಂಡಿಯನ್ ನೇವಲ್ ಸಬ್-ಮೆರೈನ್ - ಭಾರತೀಯ ನೌಕಾ ಹಡಗು/ಭಾರತೀಯ ನೌಕಾ ಜಲಾಂತರ್ಗಾಮಿ ಹಡಗು) ಭಾರತದ ಅಣು ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ಅರಿಹಂತ್ ವರ್ಗದ ಪ್ರಮುಖ ನೌಕೆಯಾಗಿದೆ. ೬,೦೦೦ ಟನ್ನುಗಳಷ್ಟು ತೂಗುವ ಈ ನೌಕೆಯನ್ನು ಅಡ್ವಾನ್ಸ್ಡ್ ಟೆಕ್ನಾಲಜಿ ವೆಸಲ್ (ಸುಧಾರಿತ ತಂತ್ರಜ್ಞಾನ ನೌಕೆ) ಎಂಬ ಯೋಜನೆಯ ಸಮನ್ವಯ ಸುಮಾರು ೨.೯ ಬಿಲಿಯನ್ ಯು.ಎಸ್. ಡಾಲರ್'ಗಳ ವೆಚ್ಚದಲ್ಲಿ ವಿಶಾಖಪಟ್ಟಣದ ನೌಕಾ ನಿರ್ಮಾಣ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಯಿತು.
ಕಾರ್ಗಿಲ್ ಯುದ್ಧದ ವಿಜಯ ದಿವಸದ ಶುಭ ಸಂಧರ್ಭದಲ್ಲಿ ಜುಲೈ ೨೬, ೨೦೦೯ ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಘ್ ಮತ್ತು ಅವರ ಪತ್ನಿ ಗುರ್ಶರನ್ ಕೌರ್ ಅವರು ಅರಿಹಂತ್ ನೌಕೆಯನ್ನು ಬಿಡುಗಡೆಗೊಳಿಸಿದರು.[೧] ೨೦೧೧ರಲ್ಲಿ ಭಾರತೀಯ ನೌಕಾ ಸೇನೆಯನ್ನು ಸೇರುವ ಮೊದಲು ಇದು ವ್ಯಾಪಕವಾದ ಬಂದರು ಹಾಗೂ ಸಾಗರ ಪರೀಕ್ಷಣೆ/ಪ್ರಯೋಗಗಳಿಗೆ ಒಳಗಾಗಲಿದೆ.
ಇತಿಹಾಸ
[ಬದಲಾಯಿಸಿ]ಅರಿಹಂತ್ (ಸಂಸ್ಕೃತದಲ್ಲಿ ವೈರಿಗಳ ಹಂತಕ - ಅರಿ, "ವೈರಿ", ಹಂತ್, "ಹಂತಕ" ದಿಂದ) ಭಾರತ ನಿರ್ಮಿತ ಪ್ರಥಮ ಅಣು ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯಾಗಿದೆ. ಇದನ್ನು ಸಾಗರಿಕ ಎನ್ನುವ 'ಜಲಾಂತರ್ಗಾಮಿ ನೌಕೆಗಳಿಂದ ಉಡಾಯಿಸುವಂತಹ ಕ್ಷಿಪಣಿ'ಗಳನ್ನು ಕೊಂಡೊಯ್ಯಲು ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಇದನ್ನು ಕ್ಷಿಪಣಿ ಉಡ್ಡಯನ ಜಲಾಂತರ್ಗಾಮಿ ನೌಕೆ ಎಂದೂ ಪರಿಗಣಿಸಲಾಗುತ್ತದೆ.
ನೋಡಿ
[ಬದಲಾಯಿಸಿ]ಅರಿಹಂತ್ - ಪ್ರಥಮವರ್ಗದ ಜಲಾಂತರ್ಗಾಮಿ
ಉಲ್ಲೇಖಗಳು
[ಬದಲಾಯಿಸಿ]- ↑ PM's Kargil Day gift to nation: Nuclear submarine 'INS Arihant' Archived 2009-07-28 ವೇಬ್ಯಾಕ್ ಮೆಷಿನ್ ನಲ್ಲಿ.. In MSN News. July 26, 2009.