ಅರಿಸಿನ ಗುರುಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಅರಿಸಿನ ಗುರುಗಿ
Garcinia morella - Köhler–s Medizinal-Pflanzen-063.jpg
Egg fossil classification
Kingdom:
plantae
(unranked):
(unranked):
Eudicots
(unranked):
Order:
Family:
Subfamily:
Tribe:
Genus:
Species:
G. morella
Binomial nomenclature
Garcinia morella
Synonym (taxonomy)

Garcinia gaudichaudii , Mangostana morella Gaertn. , Garcinia elliptica Wall. , Garcinia guttaWt.[೧]

ಅರಿಸಿನ ಗುರುಗಿ : ಗಟ್ಟಿಫೆರೀ (ಕ್ಲೂಸಿಯೇಸೀ) ಕುಟುಂಬದ ಗಾರ್ಸಿನಿಯ ಮೊರೆಲ ಎಂಬ ವೃಕ್ಷ. ಇದಕ್ಕೆ ಅರದಾಳ, ಕಣ್‍ಕುಟಿಗ, ದೇವನಹುಳಿ ಎಂಬ ಹೆಸರುಗಳೂ ಇವೆ. ಇದು ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಚಿಕ್ಕ ಗಾತ್ರದ ಮರ, ಇದರ ಅಂಟು ಔಷದಿಗೂ ಬಣ್ಣಕ್ಕೂ ಉಪಯುಕ್ತವಾಗಿದೆ; ಕ್ರಿಮಿನಾಶಕವೂ ಹೌದು. ಇದರ ವಿಶೇಷ ವ್ಯವಸಾಯ ಥೈಲೆಂಡ್ ಪ್ರದೇಶಗಳಲ್ಲಿದೆ. ಮಳೆಗಾಲದಲ್ಲಿ ಕಾಂಡದಲ್ಲಿ ಗೀರಿ ಅಂಟನ್ನು ಶೇಖರಿಸುತ್ತಾರೆ. ಒಣಗಿದ ಅಂಟನ್ನು ನೀರಿಗೆ ಹಾಕಿದರೆ ಹಳದಿ ಬಣ್ಣದ ಜಿಡ್ಡುದ್ರವ ಬರುತ್ತದೆ. ಅಮೋನಿಯ ದ್ರಾವಣ ಹಾಕಿದಾಗ ಕರಗಿ ಬರುವ ಹಳದಿ ದ್ರವ ಜಿಂಕ್ ಅಲ್ಯೂಮಿನಿಯಮ್, ಸುಣ್ಣ ಇತ್ಯಾದಿ ಬಣ್ಣಗಚ್ಚುಗಳಿಂದ ಹಳದಿ ಅಥವಾ ಕೆಂಪು ಬಣ್ಣಕೊಡುತ್ತದೆ. ಬೀಜದ ಎಣ್ಣೆ ದೀಪ ಉರಿಸಲು ಬರುತ್ತದೆ. ಕೊಬ್ಬನ್ನು ತುಪ್ಪದಂತೆ ಬಳಸುತ್ತಾರೆ. (ಎ.ಕೆ.ಎಸ್.)

  1. Garcinia morella on www.globinmed.com