ಅರಿಪ್ಪು

ವಿಕಿಪೀಡಿಯ ಇಂದ
Jump to navigation Jump to search

ಅರಿಪ್ಪು : ಕೇರಳದ ಕೊಲ್ಲಮ್ ಜಿಲ್ಲೆಯಲ್ಲಿರುವ ಒಂದು ಬೃಹತ್ ಶಿಲಾಗೋರಿ ನೆಲೆ. 1991ರ ಉತ್ಖನನದಲ್ಲಿ ನೆಲದಡಿಯ ಆಯತಾಕಾರದ ಕಂಡಿಗಳಿಲ್ಲದ ಕೋಣೆ ಗೋರಿಗಳನ್ನು ಬೆಳಕಿಗೆ ತರಲಾಯಿತು. ಕೋಣೆಯೊಳಗಿನ ನೆಲದ ಮೇಲೆ ಮರಳನ್ನು ತುಂಬಲಾಗಿತ್ತು. ಈ ಮರಳಿನ ಕೆಳ ಹಂತದಲ್ಲಿ ಮಡಕೆ, ಲೋಟ, ಮುಚ್ಚಳ ಮೊದಲಾದ ಮಣ್ಪಾತ್ರೆಗಳು ಮತ್ತು ಅವುಗಳ ಕೆಳಗೆ ಕಬ್ಬಿಣದ ಸಲಕರಣೆಗಳಿದ್ದವು. ಪೂರ್ಣ ಕೆಂಪು, ಕಪ್ಪು ಲೇಪನದ ಮತ್ತು ಕೆಂಪು-ಕಪ್ಪು ದ್ವಿವರ್ಣ ಪ್ರಕಾರಗಳ ಪಾತ್ರೆಗಳು, ಚೂರಿ, ಕತ್ತಿ, ಚಾಕು ಮೊದಲಾದ ಕಬ್ಬಿಣದ ಉಪಕರಣಗಳೂ ಇದ್ದವು. (ಎ.ಎಸ್.)

"https://kn.wikipedia.org/w/index.php?title=ಅರಿಪ್ಪು&oldid=614153" ಇಂದ ಪಡೆಯಲ್ಪಟ್ಟಿದೆ