ಅರಿಕಮೇಡು
ಅರಿಕಮೇಡು | |
---|---|
ಸ್ಥಳ | Puducherry, India |
ನಮೂನೆ | Cultural |
State Party | ಭಾರತ |
ಅರಿಕಮೇಡು (Kakkayanthope) | |
---|---|
Out Growth | |
ದೇಶ | ಭಾರತ |
ರಾಜ್ಯ | ಪಾಂಡಿಚೇರಿ |
ಜಿಲ್ಲೆ | ಪಾಂಡಿಚೇರಿ |
Taluk | Puducherry |
Commune | Ariyankuppam |
Languages | |
• Official | Malayam, Tamil, |
Time zone | UTC+5:30 (IST) |
PIN | 605 007 |
Telephone code | 0413 |
Vehicle registration | PY-01 |
Sex ratio | 50% ♂/♀ |
ಅರಿಕಮೇಡು ಭಾರತ ಮತ್ತು ರೋಮ್‍ಗಳ ನಡುವೆ ವ್ಯಾಪಾರ ನಡೆಸುತ್ತಿದ್ದ ಒಂದು ಪಟ್ಟಣವಾಗಿತ್ತೆಂದು ಅಲ್ಲಿ ದೊರೆತ ಮಣ್ಣಿನ ಪಾತ್ರೆಗಳು, ಬೆಲೆಯುಳ್ಳ ಕಲ್ಲಿನ ಮುದ್ದೆಗಳು ಮುಂತಾದುವುಗಳಿಂದ ನಿರ್ಧರಿಸಬಹುದು.
ಇತಿವೃತ್ತ
[ಬದಲಾಯಿಸಿ]ಅರಿಕಮೇಡು : ಪಾಂಡಿಚೇರಿಯ ದಕ್ಷಿಣಕ್ಕೆ ಎರಡು ಮೈಲಿ ದೂರದಲ್ಲಿ ಸಮುದ್ರತೀರದಲ್ಲಿ ಪೆರಿಪಸ್ ಆಫ್ ದಿ ಎರಿಥ್ರಿಯನ್ ಸೀ (ಪ್ರ ಶ.60-100) ಎಂಬ ಗ್ರಂಥದಲ್ಲಿ ಬರುವ ಪೊಡೊಕಿ, ಬಹುಶಃ ಇದೇ ಊರು ಆಗಿರಬೇಕೆಂದು ವಿದ್ವಾಂಸರ ಊಹೆ. ಮೇಡು ಎಂದರೆ ದಿನ್ನೆ, ಅರಿಯಾನ್ಕುಪ್ಪಂ ನದಿಯ ಮೇಲಿರುವುದರಿಂದ ಇದಕ್ಕೆ ಅರಿಕಮೇಡು ಎಂಬ ಹೆಸರು ಬಂದಂತೆ ತೋರುವುದು. ಇದು ಭಾರತ ಮತ್ತು ರೋಮ್‍ಗಳ ನಡುವೆ ವ್ಯಾಪಾರ ನಡೆಸುತ್ತಿದ್ದ ಒಂದು ಪಟ್ಟಣವಾಗಿತ್ತೆಂದು ಅಲ್ಲಿ ದೊರೆತ ಮಣ್ಣಿನ ಪಾತ್ರೆಗಳು, ಬೆಲೆಯುಳ್ಳ ಕಲ್ಲಿನ ಮುದ್ದೆಗಳು ಮುಂತಾದುವುಗಳಿಂದ ನಿರ್ಧರಿಸಬಹುದು. ವೆಜಂಟಿಲ ಡಿ.ಜೆವೇವುಡಿಬ್ರಿಲ ಮತ್ತು ಪಾಂಡಿಚೇರಿಯ ಎಲ್. ಫೌಜೆಕ್ಸ್ ಮತ್ತು ಆರ್.ಸುರ್ತೀವು ಮೊದಲಾದವರು ಅರಿಕಮೇಡುವಿನಲಿಯ ಅವಶೇಷಗಳ ಪ್ರಾಚೀನತೆ ಮತ್ತು ಮಹತ್ವವನ್ನು ಬೆಳಕಿಗೆ ತಂದರು. ಆರ್. ಮಾರ್ಟಿಮರ್ ವ್ಹೀಲರ್ 1944ರಲ್ಲಿ ಪಾಂಡಿಚೇರಿಗೆ ಹೋದ ವೇಳೆಯಲ್ಲಿ ಇಟಲಿಯ ಹೊಳೆಯುವ ಕೆಂಪು ಮಡಕೆಯ ಚೂರುಗಳು ಅರಿಕಮೀಡಿನ ಅವಶೇಷಗಳಲಿದ್ದುದನ್ನು ನೋಡಿ ಅವುಗಳ ಸಹಾಯದಿಂದ ಅರಿಕಮೀಡಿನ ಪ್ರಾಚೀನತೆಯನ್ನು ನಿರ್ಧರಿಸಲು 1945-46ರಲ್ಲಿ ಆ ಸ್ಥಳದ ಉತ್ಖನನವನ್ನು ಕೈಗೊಂಡ. ಆ ಊರಿನಲ್ಲಿ ವಸಾಹತು ಯಾವ ಪ್ರಕಾರದ್ದಿತ್ತು ಮತ್ತು ಅದು ರೋಮ್ ಮತ್ತು ಇತರ ದೇಶಗಳೂಡನೆ ಯಾವ ರೀತಿಯ ಸಂಬಂಧವನ್ನಿಟ್ಟುಕೊಂಡಿತ್ತೆಂಬುದನ್ನು ಕಂಡುಹಿಡಿಯುವುದೇ ಆ ಅನ್ವೇಷಣೆಯ ಉದ್ದೇಶವಾಗಿತ್ತು.
ಅರಿಕಮೇಡು ವಿಶೇಷತೆ
[ಬದಲಾಯಿಸಿ]ಭಾರತದಿಂದ ಪಾಶ್ಚಾತ್ಯ ರಾಷ್ರಗಳಿಗೆ ಮೆಣಸು ಮತ್ತು ತೆಳುವಾದ ಬಟ್ಟೆ, ಆಮೆಯ ಚಿಪ್ಪು. ಹಸ್ತಿದಂತ ಮತ್ತು ರೇಷ್ಮೆ ಇವು ಹೋಗಿ ಆ ರಾಷ್ಟ್ರಗಳಿಂದ ಹವಳ, ಸೀಸ, ತಾಮ್ರ, ಗಾಜು ಪಾತ್ರೆಗಳು, ಮದ್ಯ ಮತ್ತು ನಾಣ್ಯ ಮೊದಲಾದವುಗಳು ಬರುತ್ತಿದ್ದುವು. ಈ ಪ್ರಕಾರ ರಫ್ತಾಗುವ ಮತ್ತು ಆಮದು ಮಾಡಿ ಕೊಳ್ಳುವ ವ್ಯವಹಾರ ಹಲವುಶತಮಾನಗಳಿಂದ ನಡೆದೇ ಇತ್ತು. ಅದು ಈ ಊರಲ್ಲಿ ಪ್ರ.ಶ.50ರ ಸುಮಾರಿಗೆ ನಡೆಯಿತೆಂದು ವ್ಹೀಲರ್ ನಿಶ್ಚಯಿಸಿದ್ದಾನೆ. ಪ್ರ ಶ. ಒಂದನೆಯ ಶತಮಾನದಲ್ಲಿ ಈ ಊರಲ್ಲಿ ತೆಳ್ಳನೆಯ ಬಟ್ಟೆಗಳಿಗೆ ಬಣ್ಣಹಾಕುವ, ಮಣಿಗಳನ್ನು ತಯಾರಿಸುವ ಉದ್ಯೋಗಗಳು ಪ್ರಚಲಿತವಿದ್ದುವೆಂದು ಅಲ್ಲಿ ದೊರೆತ ಅವಶೇಷಗಳಿಂದ ನಿರ್ಧರಿಸಲಾಗಿದೆ. ಗ್ರೀಸ್, ರೋಮ್‍ಗಳಿಂದ ಬಂದ ಮುದ್ರೆಯನ್ನೊಳ ಗೊಂಡ ಹಳಕಲ್ಲುಗಳು, ಅರಿಟೈನ್ ಮಣ್ಣಿನ ಪಾತ್ರೆಗಳು, ಗುಂಡುತಳದ ಮಣಿನ ತಟ್ಟೆಗಳು, ಮದ್ಯ ತುಂಬಿಡಲು ಉಪಯೋಗಿ ಸುತ್ತಿದ್ದ ಮಣ್ಣಿನ ಎರಡು ಹಿಡಿಯ ಜಾಡಿಗಳು (ಆಂಪೋರ), ಮೆಡಿಟರೇನಿಯನ್ ಪ್ರದೇಶದೂಡನೆ ಭಾರತಕ್ಕೆ ಇದ್ದ ವಾಣಿಜ್ಯ ಸಂಪರ್ಕವನ್ನು ಸೂಚಿಸುತ್ತವೆ. ಪರದೇಶದಿಂದ ಬಂದ ಕೆಲವು ಮಣ್ಣಿನ ಪಾತ್ರೆಗಳ ಮೇಲೆ ಬ್ರಾಹ್ಮೀ ಅಕ್ಷರಗಳೂ ಇವೆ. ಪ್ರ ಶ. 1-2ನೆಯ ಶತಮಾನಗಳಲ್ಲಿ ಅರಿಕಮೀಡಿನಲ್ಲಿ ಇದ್ದ ಗ್ರೀಕ್-ರೊಮ್ ವ್ಯಾಪಾರಿಗಳ ವಸಾಹತು, ನದಿಯ ಆಘಾತಕ್ಕೆ ಒಳಗಾಗಿ ನಾಶವಾದಂತೆ ತೋರುತ್ತದೆ. (ಎ.ಎಂ.ಎ.)
ಛಾಯಾಂಕಣ
[ಬದಲಾಯಿಸಿ]-
Roman piece of pottery from Arezzo, Latium, found at Virampatnam, Arikamedu (1st century CE). Musee Guimet.
-
Grey pottery with engravings, Virampatnam, Arikamedu, 1st century CE.
-
Entrance
-
Site of Arikemedu's ancient harbour
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Excavations at Arikamedu Archived 2006-04-24 ವೇಬ್ಯಾಕ್ ಮೆಷಿನ್ ನಲ್ಲಿ.
- Arikamedu Archived 2008-04-19 ವೇಬ್ಯಾಕ್ ಮೆಷಿನ್ ನಲ್ಲಿ. on the website of Government of Puducherry
- Exploration Off Arikamedu by Archaeological Survey of India Archived 2006-09-28 ವೇಬ್ಯಾಕ್ ಮೆಷಿನ್ ನಲ್ಲಿ.
- Arikamedu Archaeological Site in India - A Brief Note by Discover India Site Archived 2007-03-12 ವೇಬ್ಯಾಕ್ ಮೆಷಿನ್ ನಲ್ಲಿ.
- Poduke or Arikamedu the most ancient Tamil city Archived 2012-03-08 ವೇಬ್ಯಾಕ್ ಮೆಷಿನ್ ನಲ್ಲಿ.
- Official site of Arikamedu Museum Gallery