ಅರಳೇಪೇಟೆಯ ಈಶ್ವರ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಬೆಂಗಳೂರಿನ ಅರಳೆಪೇಟೆ ಅಥವಾ ಕಾಟನ್‌ ಪೇಟೆ ಬಹು ವಿಶಿಷ್ಟತೆಯಿಂದ ಕೂಡಿದೆ. ಇದು ಹಳೆಯ ಬೆಂಗಳೂರು ನಗರದ ಪಶ್ಚಿಮಕ್ಕೆ ಇದ್ದ ಮುಖ್ಯ ಪೇಟೆಯಾಗಿದ್ದು ಕೆಂಗೇರಿ, ಮಾಗಡಿ ಅಥವಾ ತಾವರೆಕೆರೆಯಂತಹ ಪಶ್ಚಿಮ ದಿಕ್ಕಿನ ನಗರಗಳಿಂದ ಬೆಂಗಳೂರಿಗೆ ಪ್ರವೇಶಿಸಲು ಆರಳೆಪೇಟೆಯ ಕೆಂಗೇರಿದ್ವಾರವನ್ನು ಬಳಸುತ್ತಿದ್ದರು. ಈ ಹಿಂದೆ ಅರಳೆಪೇಟೆಯು ಹಲವಾರು ದೇವಸ್ಥಾನಗಳ ತಾಣವಾಗಿತ್ತು. ಅಲ್ಲದೆ ಇದು ಒಂದು ವಿಶಾಲ ಪೇಟೆಯೆನಿಸಿಕೊಂಡಿತ್ತು. ಅರಳೆಪೇಟೆ ಪ್ರದೇಶ ಇಳಿಜಾರಿನಂತ ಕಣಿವೆ ಪ್ರದೇಶವಾಗಿತ್ತು, ತೋಟ ಅಥವಾ ಚಿಕ್ಕಚಿಕ್ಕ ಉದ್ಯಾನಗಳಿಂದ ಕೂಡಿದ ಪೇಟೆ ಇದಾಗಿತ್ತು. ಆ ಕಾರಣಕ್ಕಾಗಿ ಇಂದಿಗೂ 'ಚಿಕ್ಕ ಲಾಲ್‌ಬಾಗ್' ಮತ್ತು ತೋಟದ-ವೀರಭದ್ರ ಇತ್ಯಾದಿ ಸ್ಮಾರಕಗಳನ್ನು ಅರಳೆಪೇಟೆಯಲ್ಲಿ ಕಾಣುತ್ತೇವೆ. ಅರಳೆಪೇಟೆಯ ಮತ್ತೊಂದು ವಿಶೇಷವೆಂದರೆ ಶೈವ ದೇವಾಲಯಗಳ ನಿರ್ಮಾಣ, ಮಂಜಿ-ಸೋಮೇಶ್ವರ, ಅರಳೆಪೇಟೆ-ಈಶ್ವರ ದೇವಾಲಯ.

aralepete eshwara temple
Native name
ಕನ್ನಡ:ಬೆಂಗಳೂರಿನ ಅರಳೆಪೇಟೆ
ಅರಳೇಪೇಟೆಯ ಈಶ್ವರ ದೇವಾಲಯ
ಸ್ಥಳಹಳೇ ಬೆಂಗಳೂರು ನಗರದ ಪಶ್ಚಿಮಕ್ಕೆ‌ ಮುಖ್ಯ ಪೇಟೆ

ಅರಳೇಪೇಟೆಯ ಈಶ್ವರ ದೇವಾಲಯ[ಬದಲಾಯಿಸಿ]

ಬೆಂಗಳೂರಿನ ಅರಳೆಪೇಟೆ ಅಥವಾ ಕಾಟನ್‌ ಪೇಟೆ ಬಹು ವಿಶಿಷ್ಟತೆಯಿಂದ ಕೂಡಿದೆ. ಇದು ಹಳೆಯ ಬೆಂಗಳೂರು ನಗರದ ಪಶ್ಚಿಮಕ್ಕೆ ಇದ್ದ ಮುಖ್ಯ ಪೇಟೆಯಾಗಿದ್ದು ಕೆಂಗೇರಿ, ಮಾಗಡಿ ಅಥವಾ ತಾವರೆಕೆರೆಯಂತಹ ಪಶ್ಚಿಮ ದಿಕ್ಕಿನ ನಗರಗಳಿಂದ ಬೆಂಗಳೂರಿಗೆ ಪ್ರವೇಶಿಸಲು ಆರಳೆಪೇಟೆಯ ಕೆಂಗೇರಿದ್ವಾರವನ್ನು ಬಳಸುತ್ತಿದ್ದರು. ಈ ಹಿಂದೆ ಅರಳೆಪೇಟೆಯು ಹಲವಾರು ದೇವಸ್ಥಾನಗಳ ತಾಣವಾಗಿತ್ತು. ಅಲ್ಲದೆ ಇದು ಒಂದು ವಿಶಾಲ ಪೇಟೆಯೆನಿಸಿಕೊಂಡಿತ್ತು. ಅರಳೆಪೇಟೆ ಪ್ರದೇಶ ಇಳಿಜಾರಿನಂತ ಕಣಿವೆ ಪ್ರದೇಶವಾಗಿತ್ತು, ತೋಟ ಅಥವಾ ಚಿಕ್ಕಚಿಕ್ಕ ಉದ್ಯಾನಗಳಿಂದ ಕೂಡಿದ ಪೇಟೆ ಇದಾಗಿತ್ತು. ಆ ಕಾರಣಕ್ಕಾಗಿ ಇಂದಿಗೂ 'ಚಿಕ್ಕ ಲಾಲ್‌ಬಾಗ್' ಮತ್ತು ತೋಟದ-ವೀರಭದ್ರ ಇತ್ಯಾದಿ ಸ್ಮಾರಕಗಳನ್ನು ಅರಳೆಪೇಟೆಯಲ್ಲಿ ಕಾಣುತ್ತೇವೆ. ಅರಳೆಪೇಟೆಯ ಮತ್ತೊಂದು ವಿಶೇಷವೆಂದರೆ ಶೈವ ದೇವಾಲಯಗಳ ನಿರ್ಮಾಣ, ಮಂಜಿ-ಸೋಮೇಶ್ವರ, ಅರಳೆಪೇಟೆ-ಈಶ್ವರ ದೇವಾಲಯ, ತೋಟದ ವೀರಭದ್ರ ಇತ್ಯಾದಿಗಳು ಅವುಗಳ ಜೊತೆಗೆ ತವಕಲ್-ದರ್ಗಾ ಕೂಡ ಇಲ್ಲಿ ಕಾಣುತ್ತೇವೆ. ಪ್ರಸ್ತುತ ಲೇಖನದಲ್ಲಿ ಅರಳೆಪೇಟೆಯ ಈಶ್ವರ ದೇವಾಲಯದ ಚರಿತ್ರೆ, ರಚನೆಯ ಶೈಲಿ ಹಾಗೂ ಶಿಲ್ಪಗಳನ್ನು ಗಮನಿಸುವುದಾಗಿದೆ. ನಾಡಪ್ರಭುಗಳು ನಿರ್ಮಿಸಿದ ಬೆಂಗಳೂರು ಕೋಟೆಯ ಆವರಣದಲ್ಲಿ ಇದು ನಿರ್ಮಾಣವಾಗಿದ್ದು ಇದರ ರಚನೆಯ ಕಾಲವನ್ನು ನಾಡಪ್ರಭುಗಳ ಅಥವಾ ಅವರ ನಂತರದ ಕಾಲವೆಂದು ಗುರುತಿಸಬಹುದು.

ರಚನೆ[ಬದಲಾಯಿಸಿ]

ಪೂರ್ವಾಭಿಮುಖವಾಗಿ ನಿರ್ಮಿಸಲಾದ ಈ ದೇವಾಲಯ ಮೂರು ಗರ್ಭಗೃಹಗಳಿಂದ ಕೂಡಿದ ದೇವಾಲಯವಾಗಿದೆ. ಈ ಮೂರು ಗರ್ಭಗೃಹಗಳನ್ನು ಸಾಲಾಗಿ ನಿರ್ಮಿಸಲಾಗಿದೆ. ಮಧ್ಯದ ಗರ್ಭಗೃಹದಲ್ಲಿ ಶಿವಲಿಂಗ ರೂಪದ ಈಶ್ವರನ ಪ್ರತಿಷ್ಠಾಪನೆ ಮಾಡಲಾಗಿದೆ. ಉಳಿದ ಎರಡು ಗರ್ಭಗೃಹಗಳಲ್ಲಿ ಅಮ್ಮನವರು ಎಂದು ಕರೆಯುವ ಪಾರ್ವತಿ ಮತ್ತು ಇನ್ನೊಂದರಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಿವನ ಮುಖ್ಯಗರ್ಭಗೃಹದ ದ್ವಾರವು ವಿವಿಧ ಶಿಲಾಪಟ್ಟಿಕೆಗಳ ಅಲಂಕಾರಗಳಿಂದ ಕೂಡಿದೆ. ಇವುಗಳ ಮುಂಭಾಗದಲ್ಲಿ ಹಲವು ಕಂಬಗಳಿಂದ ಕೂಡಿದ ಆಯತಾಕಾರದ ವಿಶಾಲ ಮಂಟಪವಿದೆ. ಇದು ನವರಂಗದಂತೆ ಕಟ್ಟಲಾಗಿದೆ. ಇಲ್ಲಿಯ ಕಂಬಗಳು ಎರಡೂವರೆ ಮೀಟರ್ ಎತ್ತರ ಹಾಗೂ ಅರ್ಧಮೀಟರ್ ದಪ್ಪವಾಗಿದ್ದು ಇವು ಮೂರು ಶೈಲಿಯಲ್ಲಿ ರಚಿತವಾಗಿವೆ. ಇವು ಗಾತ್ರದಲ್ಲಿ ದಪ್ಪವಾಗಿದ್ದು ತನ್ನ ನಾಲ್ಕು ದಿಕ್ಕಿನ ಮೇಲೆಯಲ್ಲಿ ಉಬ್ಬುಶಿಲ್ಪಗಳಿಂದ ಕೂಡಿವೆ. ಎರಡನೆಯ ಶೈಲಿಯ ಕಂಬಗಳು ಅವುಗಳ ಕೆಳಭಾಗದಲ್ಲಿ ಚೌಕಾಕಾರದಲ್ಲಿದ್ದು ಮೇಲ್ಬಾಗದಲ್ಲಿ ಅಷ್ಟಕೋನಾಕಾರದಲ್ಲಿ ವಿನ್ಯಾಸ ಗೊಳಿಸಲಾಗಿದೆ. ಮೂರನೆಯ ಶೈಲಿಯ ಕಂಬಗಳು ಸರಳ ಶೈಲಿಯಲ್ಲಿವೆ. ಈ ಮಂಟಪದಲ್ಲಿ ಹದಿನೆಂಟು ಕಂಬಗಳಿದ್ದವು, ಆದರೆ, ಸುತ್ತಲೂ ಗೋಡೆಯನ್ನು ನಿರ್ಮಿಸಿ ಹತ್ತು ಕಂಬಗಳನ್ನು ಗೋಡೆಯಲ್ಲಿ ಸೇರಿಕೊಂಡಿವೆ. ಈ ಕಂಬಗಳ ಮೇಲಿನ ಶಿಲ್ಪಗಳು ಹಂಸ, ಶಿವಲಿಂಗ, ಕಮಲ, ನಂದಿ, ಭಾರವಾಹಕ, ಗಜ, ವಿಷ್ಣು, ಇತ್ಯಾದಿಗಳೆಂದು ಗುರುತಿಸ ಬಹುದು. ಇನ್ನೂ ಕೆಲವು ಕಂಬಗಳ ಮೇಲೂ ಶಿಲ್ಪಗಳಿವೆ ಆದರೆ ಸುಣ್ಣ ಬಳಿದಿದ್ದರಿಂದ ಶಿಲ್ಪಗಳ ಮೂಲ ಸ್ವರೂಪವನ್ನು ಗುರುತಿಸಲು ಸಾಧ್ಯವಾಗದಂತಾಗಿದೆ.

ಶಿಖರ[ಬದಲಾಯಿಸಿ]

ಈ ದೇವಾಲಯದ ವಿಶೇಷತೆಯೆಂದರೆ ಇಲ್ಲಿಯ ಮೂಲ ಶಿಖರ, ಇದು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ, ಇಟ್ಟಿಗೆ ಮತ್ತು ಗಾರೆಯಿಂದ ನಿದ ಈ ಶಿಖರ ಬೆಂಗಳೂರಿನ ಹಳೆಯ ಶಿಖರಗಳಲ್ಲಿ ಒಂದು ಎಂದು ಹೇಳಬಹುದು, `ಏಕತಲ ವಿನ್ಯಾಸದಲ್ಲಿ ನಿರ್ಮಿಸಲಾದ ಈ ಶಿಖರವು ಕಮಾನಿನಾಕಾರದ ರೂಪಗಳಿಂದ `ಕೂಡಿದೆ. ಇಲ್ಲಿಯ ಚೌಕಾಕಾರದ ವೇದಿ ಅದರ ಮೇಲೆ ನಂದಿ ವಿಗ್ರಹಗಳು ಮತ್ತು `ವೃತ್ತಾಕಾರದ ಸ್ಕೊಪಿ ವಿಜಯನಗರದ ಶೈಲಿಯ ದ್ರಾವಿಡ ಶಿಖರವನ್ನು ನೆನಪಿಸುತ್ತದೆ. ಶಿಖರದ ತಳಭಾಗದ ಚೌಕಾಕಾರದ ಪೀಠದ ನಾಲ್ಕು ದಿಕ್ಕಿನಲ್ಲಿ ದೇವಕೋಷಗಳನ್ನು ಮಾಡಲಾಗಿದ್ದು, ಇವುಗಳ ರಚನೆಯಲ್ಲಿ ಕಮಾನುಗಳ ವಿನ್ಯಾಸವನ್ನು ಬಳಸಲಾಗಿದೆ. ಕೀರ್ತಿಮುಖಗಳನ್ನು ಹೊಂದಿರುವ ಈ ದೇವಕೋಷ್ಠಗಳಲ್ಲಿ ಗಾರೆಯಲ್ಲಿ ರಚಿಸಿದ ಶಿವನ ಲೀಲೆಗಳ ಶಿಲ್ಪಗಳನ್ನು ಇರಿಸಲಾಗಿದೆ. ಆದರೆ ಇವು ಹಳೆಯದಾಗಿದ್ದರಿಂದ ನಾಶವಾಗಿವೆ. ಕೋಷ್ಠಗಳ ಪಕ್ಕದಲ್ಲಿ ಅರ್ಧಗಂಬ ಹಾಗೂ ಅವುಗಳ ಮೇಲೆ ಆಯತಾಕಾರದ ಕೂಟಗಳ ವಿನ್ಯಾಸಗಳನ್ನು ಗಾರೆಯಲ್ಲಿ ರಚಿಸಲಾಗಿದೆ. ಪೀಠದ ಮೇಲ್ಬಾಗದ ಒಂದು ಅಡಿಯಷ್ಟು 'ಗ್ರೀವ' ಭಾಗವನ್ನು ನಿರ್ಮಿಸಲಾಗಿದೆ. ಗ್ರೀವದ ಮೇಲ್ಬಾಗದ ನಾಲ್ಕೂ ಮೂಲೆಗಳಲ್ಲಿ ಗಾರೆಯಲ್ಲಿ ನಂದಿಯ ವಿಗ್ರಹಗಳನ್ನು ಜೋಡಿಸಲಾಗಿದೆ. ಶಿಖರದ

ಏಕಶಿಲಾ ನಂದಿಸ್ತಂಭ[ಬದಲಾಯಿಸಿ]

ಕೊನೆಯ ಹಂತವಾಗಿ ವೃತ್ತಾಕಾರದ ಸ್ಫೂಷಿಯನ್ನು ಕಾಡುತ್ತದೆ. ಇದರ ಮೇಲೈಯಲ್ಲಿ ಕಮಲದ ದಳಗಳಂತೆ ವಿನ್ಯಾಸವನ್ನು ಗಾರೆಯಲ್ಲಿ ಮಾಡಲಾಗಿದೆ. ಅಲ್ಲದೆ ಸ್ಫೂಮಿಯ ನಾಲ್ಕು ದಿಕ್ಕುಗಳಲ್ಲಿ ಗಾರೆಯಲ್ಲಿ ರಚಿಸಿದ ಕೀರ್ತಿಮುಖಗಳ ವಿನ್ಯಾಸಗಳಿವೆ. ಪ್ರಾಕಾರ ಮತ್ತು ಪ್ರವೇಶದ್ವಾರ: ಈ ದೇವಾಲಯಕ್ಕೆ ಮುಖ್ಯರಸ್ತೆಯಿಂದ ಪ್ರವೇಶಕ್ಕಾಗಿ ಪೂರ್ವ ದಿಕ್ಕಿನಲ್ಲಿ ದ್ವಾರವನ್ನು ನಿರ್ಮಿಸಲಾಗಿದೆ. ಇದು ಇಂದು ಪಾಳುಬಿದ್ದಿದೆ. ಈ ದ್ವಾರವನ್ನು ದಾಟಿ ಪ್ರವೇಶಿಸಿದರೆ ವಿಶಾಲವಾದ ಅಂಗಳವಿದೆ, ಈ ಅಂಗಳವನ್ನು ಪ್ರಾಕಾರವೆಂದು ದೇವಾಲಯದ ವಾಸ್ತುಕಲೆಯಲ್ಲಿ ಕರೆಯುತ್ತಾರೆ. ಈ ಪ್ರಾಕಾರವು ಸುತ್ತಲು ಎತ್ತರದ ಗೋಡೆಯಿಂದ ನಿರ್ಮಾಣವಾಗಿತ್ತು. ಈ ಪ್ರಾಕಾರದ ಅಥವಾ ಅಂಗಳದಲ್ಲಿ ನಂದಿಸ್ತಂಭ ಇದೆ

ನಂದಿಸ್ತಂಭ[ಬದಲಾಯಿಸಿ]

ದೇವಾಲಯದ ಮುಂಭಾಗದ ಅಂಗಳ ಸುಮಾರು ಹತ್ತು ಮೀಟರ್ ಎತ್ತರದ ಏಕಶಿಲೆಯಲ್ಲಿ ರ ನಂದಿಸ್ತಂಭವಿದೆ. ಇದನ್ನು ನಿರ್ಮಿಸುವಲ್ಲಿ ಬಹಳಷ್ಟು ವಹಿಸಿದ೦ತೆ ಕಾಣುತ್ತದೆ. ಸ್ತಂಭದ ಪೀಠವನ್ನು ಉಪಾನ ಜಗತಿ, ಕುಮುದ, ಕಪೋತಗಳೆಂಬ ವಿವಿಧ ವಿನ್ಯಾಸಗಳಿಂದ ರಚಿಸಲಾಗಿದೆ. ಪೀಠದ ಮೇಲೆ ಇರುವ ಏಕಶಿಲೆಯ ಸ್ತಂಭವು ಕೂಡ ಆಕರ್ಷಕವಾಗಿರಿಸಲು ಅಷ್ಟಕೋನಾಕೃತಿಯಾಗಿ ರಚಿಸಲಾಗಿದೆ. ಸ್ತಂಭದ ತಳಭಾಗದಲ್ಲಿ ನಾಲ್ಕು ದಿಕ್ಕುಗಳಲ್ಲಿ ಉಬ್ಬುಶಿಲ್ಪಗಳನ್ನು ಮಾಡಲಾಗಿದೆ. - ಸಂವಿ, ಡಮರು, ತಿಶೂಲ ಹಾಗೂ ನಮಸ್ಕರಿಸುತ್ತಿರುವ ಭಕ್ತನ ಶಿಲ್ಪಗಳಿವೆ. ದಲ್ಲಿಯ ಭಕ್ತ ಶಿಲ್ಲವು ಒಂದು ವಿಶೇಷವಾಗಿದೆ. ಕಾರಣ ಈ ಭಕ್ತನೇ ಈ ದೇವಸ್ಥಾನದ ದಾನಿಯಾಗಿರಬಹುದಾದ ಸಾಧ್ಯತೆ ಇದೆ, ಸಾಮಾನ್ಯವಾಗಿ ಪಾಳೆಗಾರರ ಅಥವಾ ನಾಯಕರ ಕಾಲದಲ್ಲಿ ದೇವಸ್ಥಾನವನ್ನು ನಿರ್ಮಿಸಿದವರ ಉಚ್ಚುಶಿಲ್ಪವನ್ನು ಭಕ್ತರ ರೂಪದಲ್ಲಿ ದೇವಸ್ಥಾನದ ಗರ್ಭಗುಡಿಯ ನೇರಕ್ಕೆ ಅಥವಾ ದ್ವಾರದ ಚೌಕಟ್ಟಿನಲ್ಲಿ ರಚಿಸುವ ಸಂಪ್ರದಾಯ ದಕ್ಷಿಣ ಭಾರತದ ದೇವಾಲಯಗಳ ನಿರ್ಮಾro ಚರಿತ್ರೆಯಲ್ಲಿ ಕಣುತ್ತೇವೆ. ಶಿವಗಂಗೆಯು ಗಂಗಾಧರೇಶ್ವರ ದೇವಾಲಯದ ಗರ್ಭಗುಡಿಯ ನೇರಕ್ಕೆ ಕಂಚು ಲೋಪದಲ್ಲಿ ರಚಿಸಿದ ಕೆಂಪೇಗೌಡರ ಶಿಲ್ಪಗಳನ್ನು ಇಲ್ಲಿ ಸ್ಮರಿಸಬಹುದು[೧]

ಉಲ್ಲೇಖ[ಬದಲಾಯಿಸಿ]

  1. ಅರುಣಿ, ಎಸ್‌.ಕೆ. ಬೆಂಗಳೂರು ಪರಂಪರೆ (2019 ed.). ISBN 978-81-930814-3-3.