ಅರಬೆಲ್ಲಾ ಕಥೆರಿನ್ ಹ್ಯಾಂಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಬೆಲ್ಲಾ ಕಥೆರಿನ್ ಹ್ಯಾಂಕಿ ಯವರು ಒಬ್ಬ ಆಂಗ್ಲ ಮಿಷನರಿ ಮತ್ತು ದಾಯಾದಿಯಾಗಿದ್ಧರು. ಇವರು ಅತಿ ಪ್ರಸಿಧ್ಧವಾದ ಲೇಖಕಿ. ಅರಬೆಲ್ಲಾ ಕಥೆರಿನ್ ಹ್ಯಾಂಕಿ,ಇವರ ಅತಿ ಪ್ರಸಿಧ್ಧವಾದ ಲೇಖನಗಳು ದಿ ಓಲ್ಡ್, ಓಲ್ಡ್ ಸ್ಟೋರಿ. ಈ ಲೇಖನಗಲ್ಲಿಂದ ಟೆಲ್ ಮೀ ದಿ ಓಲ್ಡ್, ಓಲ್ಡ್ ಸ್ಟೋರಿ ಮತ್ತು ಐ ಲವ್ ಟು ಟೆಲ್ ದಿ ಸ್ಟೋರಿ ಪಡೆಯಲಾಗಿದೆ. ಹ್ಯಾಂಕಿಯವರು ಹುಟ್ಟಿದ್ದು ೧೮೩೪ರಲ್ಲಾಗಿದ್ಧು, ಇವರ ತಂದೆ ಲಂಡನ್ ನ ಶ್ರೀಮಂತ ಸಾಹುಕಾರರಾಗಿದ್ಧರು. ಇವರ ಕುಟುಂಬ ಅಂಗಾಲಿಕಾನ್ಸ್ ರ ಭಕ್ತರು ಮತ್ತು ವಿಲಿಯಂ ವಿಲ್ಬರ್ಫೋರ್ಸ್ ನೇತೃತ್ವದ ಕ್ಲಾಫಾಮ್ ಪಂಥದ ಸದಸ್ಯರಾಗಿದ್ಧರು.ಈ ಗುಂಪು ತನ್ನ ಜೀತ ಮುಕ್ತ ಮತ್ತು ಪ್ರೊ ಮಿಷನರಿ ನೆಲವುಗಳಿಂದ ಪ್ರಸಿದ್ಧತೆಯನ್ನು ಪಡೆಯಿತು.ಜಾನ್ ವೆಸ್ಲೆಯ ಮೆಥೋಡಿಸ್ಟ್ ಪುನರುಜ್ಜೀವನದಿಂದ ಅವರು ಸ್ಫೂರ್ತಿ ಪಡೆದು ಮತ್ತು ಸಂಘಟಿಸಿ ಮತ್ತು ಲಂಡನ್ ನ ಸಂಡೆ ಸ್ಕೂಲ್ ಗಳಲ್ಲಿ ಪಾಠ ಮಾಡುತ್ತಿದ್ಧರು.ನಂತರ ಅವರು ದಕ್ಷಿಣ ಆಫ್ರಿಕಾದಲ್ಲಿ ನರ್ಸ್ ಆಗಿ ಮಿಷನರಿ ಕೆಲಸ ಮಾಡುತ್ತಾ ಸಹೋಧರನಿಗೆ ಸಹಾಯ ಮಾಡಿದ್ಧರು.೧೮೬೬ರಲ್ಲಿ, ಅವರು ಗಂಭೀರವಾದ ಅನಾರೋಗ್ಯವನ್ನು ಹೊಂದಿದ್ಧಳು ಮತ್ತು ಸುದೀರ್ಘ ಚೇತರಿಕೆಯಿಂದಾಗಿ ಮಲಗಿದ್ದಳು.ಈ ಸಮಯದಲ್ಲಿ ಅವರು ದಿ ಓಲ್ಡ್, ಓಲ್ಡ್ ಸ್ಟೋರಿಯಂಬ ತಮ್ಮ ಉದ್ಧವಾದ ಕವಿತೆಯನ್ನು ಎರಡು ಭಾಗಗಳಲ್ಲಿ ೧೦೦ ಪದ್ಯಗಳೊಂದಿಗೆ: ದಿ ಸ್ಟೋರಿ ವಾಂಟೆಡ್ ಅಂಡ್ ದಿ ಸ್ಟೋರಿ ಟೋಲ್ಡ್.[೧] ಇವರು ತಮ್ಮ ಅನಾರೋಗ್ಯದಿಂದ ಚೇತರಿಸಿಕೊಂಡು, ೭೭ನೇ ವಯಸ್ಸಿನಲ್ಲಿ, ೧೯೧೧ರಲ್ಲಿ ಹುತಾತ್ಮರಾದರು.ಹ್ಯಾಂಕಿ ಅವರು ಯಾವಾಗ ಕ್ರಿಸ್ತರಾದರು ಎಂಬುದು ಯಾರಿಗೂ ತಿಳಿದಿಲ್ಲ ಆದರೆ ಅವರು ತಮ್ಮ ಪ್ರಾರಂಬಿಕ ಜೀವನದಲ್ಲೆ ಅವರು ಉತ್ಸಾಹಿ ಇವಾಂಜೆಲಿಸ್ಟಿಕ್ ಉತ್ಸಾಹವನ್ನು ಬೆಳೆಸಿಕೊಂಡರು ಮತ್ತು ಆಕೆಯ ನೆರೆಹೊರೆಯ ಹುಡುಗಿಯರಿಗೆ ಬೈಬಲ್ ತರಗತಿಯನ್ನು ಪ್ರಾರಂಭಿಸಿದರು.ಅವರು ತಮ್ಮ ತರಗತಿಗಳ್ಲಲಿ ಕವಿತೆಗಳನ್ನು,ಗಾಸ್ಪೆಲ್ ಹಾಡುಗಳ್ಳನು ಬರೆದು, ಪ್ರಕಟಿಸಿದರು.ಅವರು ವಿದೇಶಿ ಕಾರ್ಯಾಚರಣೆಗಳಿಗೂ ಕೂಡ ಬೆಂಬಲ ನೀಡಿದರು. "ದಿ ಓಲ್ಡ್, ಓಲ್ಡ್ ಸ್ಟೋರಿ" ಜೀಸಸ್ ದೇವರ ಬಗ್ಗೆಯಾಗಿತ್ತು.ಈ ಕವಿತೆಯ ಮೇಲೆ ವಿಲಿಯಮ್ ಹೆಚ್ ಡೋಯ್ನ್ ಸಂಗೀತ ಸಂಯೋಜಿಸಿದರು ಮತ್ತು ಅದನ್ನು ತಮ್ಮ ಸಾಂಗ್ಸ್ ಆಫ್ ಡಿವೋಷನ್ ಸಂಖ್ಯೆ ೨೪೦ ಎಂದು ಮೊದಲು ಪ್ರಕಟಿಸಿದರು.[೨]ಡೋನೆ ಈ ಲೇಖಕರನ್ನು ಅನಾಮಧೇಯ ಎಂದು ಸೂಚಿಸುತ್ತಾರೆ. [೩]೧೮೭೦ರಲ್ಲಿ ಹ್ಯಾಂಕಿರವರ ಕವಿತೆ ಸಂಪಾದನೆಗಳ್ಳಲೊಂದಾದ "ಟೆಲ್ ಮೀ ದಿ ಓಲ್ಡ್, ಓಲ್ಡ್ ಸ್ಟೋರಿ""ಹಾರ್ಟ್ ಟು ಹಾರ್ಟ್" ಶೀರ್ಷಿಕೆಯೊಂದಿಗೆ ಪ್ರಕಟವಾದರೂ ಅದರಲ್ಲಿ ಹ್ಯಾಂಕಿಯನ್ನು ಲೇಖಕಿಯಂದು ಗುರುತಿಸಲಿಲ್ಲ.[೪]೧೮೮೦ರಲ್ಲಿ ಹ್ಯಾಂಕಿ ತನ್ನ ಅವಿವಾಹಿತ ಸೋದರ ರೆಜಿನಾಲ್ಡ್ ಜೊತೆ ವಾಸಿಸುತಿದ್ದಳು.

ಉಲ್ಲೇಖಗಳು[ಬದಲಾಯಿಸಿ]

  1. https://www.wholesomewords.org/biography/bhankey.html
  2. "ಆರ್ಕೈವ್ ನಕಲು". Archived from the original on 2013-03-22. Retrieved 2017-10-19.
  3. "ಆರ್ಕೈವ್ ನಕಲು". Archived from the original on 2017-11-30. Retrieved 2017-10-19.
  4. https://www.umcdiscipleship.org/resources/history-of-hymns-i-love-to-tell-the-story