ಅಮ್ಮ ರಾಮಚಂದ್ರ

ವಿಕಿಪೀಡಿಯ ಇಂದ
Jump to navigation Jump to search


ಅಮ್ಮ ರಾಮಚಂದ್ರ ಇವರು ಮೂಲತಃ ಹೆಚ್ ಡಿ ಕೋಟೆಯ ಸರಗೂರಿನ ದೇವಲಾಪುರ ಗ್ರಾಮದವರು ತಂದೆ ಗೋಪಾಲಯ್ಯ ತಾಯಿ ದೇವಮ್ಮ ತಾಯಿಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡ ಇವರು ತಾಯಿಯ ಆಸೆಯಂತೆ ಅಪಾರವಾಗಿ ಜಾನಪದ ಲೋಕದಲ್ಲಿ ಹೆಸರನ್ನು ಮಾಡಿ ತಮ್ಮ ಹೆಸರಲ್ಲಿ ಅಮ್ಮ ರಾಮಚಂದ್ರ ಎಂದು ಸೇರಿಸಿಕೊಂಡಿದ್ದಾರೆ' ಇವರಿಗೆ ಮೂವರು ಸೋದರಿಯರು ಒಬ್ಬ ಸೋದರ ಇದ್ದು ಇವರ ಸಾಧನೆಗೆ ಮೆಟ್ಟಿಲಾಗಿನಿಂತು ಇಂದು ಇವರು ತಮ್ಮ ಜಾನಪದ ಹಾಡನ್ನು ಅಮೇರಿಕಾದ ಅಕ್ಕಾ ಸಮ್ಮೇಳನದಲ್ಲೂ ಹಾಡಿ ಸೈ ಎನಿಸಿಕೊಂಡುಬಂದದಲ್ಲದೇ ಇವರು ಜಾನಪದ ಲೋಕದಲ್ಲಿ ಅಜರಾಮರ ವ್ಯಕ್ತಿಯಾಗಿ ಹೊರಹೊಮ್ಮಿದ್ದು ಕರ್ನಾಟಕ ಸರ್ಕಾರದಿಂದ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಇದರೊಂದಿಗೆ ಇಂದು ಪಿರಿಯಾಪಟ್ಟಣದಲ್ಲಿ ಅಮ್ಮ ವಸುಂದರೆ ಎಂಬ ಜಾನಪದ ಸಂಸ್ಥೆಯನ್ನು ಸ್ನೇಹಿತರು ಹಾಗೂ ಹಿತೈಸಿಗಳ ಸಹಾಯದಿಂದ ಸ್ಥಾಪಿಸಿ ಪ್ರತಿವಾರಕ್ಕೆ ಒಮ್ಮೆ ಜಾನಪದದ ಮಹತ್ವವನ್ನು ವಿದ್ಯಾರ್ಥಿಗಳೀಗೆ ತಿಳಿಸುತ್ತಿದ್ದಾರೆ.ಇದರೊಂದಿಗೆ ಮೈಸೂರಿನಲ್ಲೂ ಕೂಡ ವಾರಕ್ಕೆ ಒಮ್ಮೆ ಪ್ರತಿ ಕಾಲೇಜಿಗೂ ತೆರಳಿ ಜಾನಪದ ಹಾಡುಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಜಾನಪದ ಮಹತ್ವವನ್ನು ತಿಳಿಸುತ್ತಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ನಡೆದ ಸ್ಠಾರ್ ಸಿಂಗರ್ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ಐದನೇ ಸ್ಥಾನದಲ್ಲಿ ವಾಪಾಸ್ಸಾಗಿದ್ದಾರೆ.ಪ್ರಸ್ತುತ ಜಾನಪದ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಉದ್ದೇಶದಿಂದ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಕನ್ನಡ ವಿಭಾಗದಲ್ಲಿ ಜಾನಪದ ವಿಷಯವನ್ನು ಅದ್ಯಾಯನ ಮಾಡುತ್ತಿದ್ದಾರೆ.

ಜಾನಪದ ಸಾಧನೆಗಳು[ಬದಲಾಯಿಸಿ]

ಪ್ರಮುಖ ಪ್ರಶಸ್ತಿಗಳು[ಬದಲಾಯಿಸಿ]