ವಿಷಯಕ್ಕೆ ಹೋಗು

ಅಮೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೇರ್ ಕೋಟೆ, ಜೈಪುರ, c. ೧೮೫೮ರ ಚಿತ್ರ

ಅಮೇರ್ ಅಥವಾ ಅಂಬೇರ್ ರಾಜಸ್ಥಾನ ರಾಜ್ಯದಲ್ಲಿರುವ ಒಂದು ನಗರವಾಗಿತ್ತು. ಈಗ ಇದು ಜೈಪುರ ನಗರದೊಂದಿಗೆ ವಿಲೀನವಾಗಿದೆ.ಸುತ್ತಲೂ ಬಂಡೆಕಲ್ಲುಗಳ ಬೆಟ್ಟ, ನಡುವಿನಲ್ಲಿ ಸರೋವರದಿಂದ ಕೂಡಿದ ಈ ಸ್ಥಳವು ಅತ್ಯಂತ ಸುಂದರವಾಗಿದೆ.ಇಲ್ಲಿರುವ ಅರಮನೆಗಳು ರಜಪೂತ ವಾಸ್ತುಶಿಲ್ಪದ ಉತ್ತಮ ಉದಾಹರಣೆಗಳಾಗಿವೆ. ಕ್ರಿ.ಶ.೯೫೪ ರ ಸುಮಾರಿನ ಶಾಸನಗಳು ಈ ನಗರದ ಅಂದಿನ ಅಸ್ತಿತ್ವವನ್ನು ಸಾಬೀತು ಪಡಿಸುತ್ತವೆ. ಹನ್ನರಡನೆಯ ಶತಮಾನದಲ್ಲಿ ಕಛ್ವಾ ರಜಪೂತರು ಈ ನಗರವನ್ನು ವಶಪಡಿಸಿಕೊಂಡು ಅದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿದರು.ಇಲ್ಲಿರುವ ಅರಮನೆಯನ್ನು ೧೬೦೦ರ ಸುಮಾರಿಗೆ ಒಂದನೆಯ ರಾಜಾ ಮಾನ್ ಸಿಂಗ್ ನಿರ್ಮಿಸಲು ಪ್ರಾರಂಭಿಸಿದನು.ಈ ಕಟ್ಟಡ ಸುಮಾರು ೨೦೦ ವರ್ಷಗಳಷ್ಟು ದೀರ್ಘಕಾಲ ಕಟ್ಟಲ್ಪಟ್ಟು ಹದಿನೆಂಟನೆಯ ಶತಮಾನದಲ್ಲಿ ಸವಾಯ್ ಜೈ ಸಿಂಗ್ ನ ಕಾಲದಲ್ಲಿ ಸಂಪೂರ್ಣವಾಯಿತು. ಪಕ್ಕದಲ್ಲಿರುವ ಸರೋವರದಲ್ಲಿ ಕಾಣುವ ಈ ಅರಮನೆಯ ಪ್ರತಿಬಿಂಬ ಮತ್ತು ದೃಶ್ಯ ವರ್ಣನಾತೀತವಾಗಿದೆ.

ಶೀಶ್ ಮಹಲ (mirror palace)
ಎಡ:ಗಣೇಶ್ ಪೋಲ್ ನ ಪರದೆಗಳು. ಬಲ: ಗಣೇಶ್ ಪೋಲ್ ನ ದೃಶ್ಯ.
ಮುಂಜಾನೆಯಲ್ಲಿ ಕಾಣುವ ಅಮೇರ್ ಕೋಟೆಯ ದೃಶ್ಯ
ಮುಸ್ಸಂಜೆಯಲ್ಲಿ ಅಂಬೇರ್ ಕೋಟೆಯ ವಿಹಂಗಮ ದೃಶ್ಯ
"https://kn.wikipedia.org/w/index.php?title=ಅಮೇರ್&oldid=1288001" ಇಂದ ಪಡೆಯಲ್ಪಟ್ಟಿದೆ