ಅಮೆರಿಕ ಸಂಯುಕ್ತ ಸಂಸ್ಥಾನದ ಸಾಹಿತ್ಯವಿಮರ್ಶೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮೆರಿಕ ಸಂಯುಕ್ತಸಂಸ್ಥಾನದ ಸಾಹಿತ್ಯಚರಿತ್ರೆಯ ಹಲವಾರು ಘಟ್ಟಗಳಲ್ಲಿ ಸಾಮಾನ್ಯವಾಗಿ ಕಾಣಬರುವ ಅನುಕರಣ ಒಂದು ಮುಖ್ಯ ಅಂಶ. ಇದರಲ್ಲಿ ಒಂದು ನಾಟಕವನ್ನು ನೋಡುವವರ ಮತ್ತು ಒಂದು ಸಾಹಿತ್ಯಕೃತಿಯನ್ನು ಓದುವವರ ಪ್ರತಿಕ್ರಿಯೆಗೆ ಹೆಚ್ಚು ಮಹತ್ವವಿದೆ. ಇದು ಕವಿಯ ಭಾವನಾಶಕ್ತಿ ಮತ್ತು ನೈತಿಕಸ್ವಭಾವಕ್ಕೆ ಹೆಚ್ಚು ಗಮನ ಕೊಡುತ್ತದೆ. ಈ ದಿಸೆಯಲ್ಲಿ ಅಮೆರಿಕದಲ್ಲಿ ಎಮರ್‍ಸನ್ನನದು ದೊಡ್ಡ ಹೆಸರು. ಕೃತಿರಚನಾಕಾರ ಮುಖ್ಯವಲ್ಲ, ಕೃತಿ ಮುಖ್ಯ.[೧]

ಆರಿಸ್ಟಾಟಲನ ಪೊಯೆಟಿಕ್ಸ್[ಬದಲಾಯಿಸಿ]

ಆ ರಾಷ್ಟ್ರದ ಸಾಹಿತ್ಯವಿಮರ್ಶೆಯಲ್ಲಿ ಅನುಕರಣತತ್ತ್ವದ ಪಾತ್ರ ತೀರ ಚಿಕ್ಕದು. ಆರಿಸ್ಟಾಟಲನ ಪೊಯೆಟಿಕ್ಸ್ ಎಂಬ ಗ್ರಂಥ ಬಹಳ ಕಾಲದಿಂದಲೂ ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕವಾಗಿದೆ. ಆರಿಸ್ಟಾಟಲ್ ಕಥಾವಸ್ತುವಿಗೆ ಕೊಟ್ಟಿರುವ ಮಹತ್ವವನ್ನು ಆಧುನಿಕ ಕಾಲದ ಅಲ್ಲಿನ ಕಾದಂಬರಿಕಾರರು ಮತ್ತು ವಿಮರ್ಶಕರು ಅರ್ಥಮಾಡಿಕೊಂಡಿದ್ದಾರೆ. ಷಿಕಾಗೊ ವಿಶ್ವವಿದ್ಯಾನಿಲಯದ ನವೀನ ಆರಿಸ್ಟೋಟಿಲಿಯನ್ನರು ಆರಿಸ್ಟಾಟಲನ ಪೊಯೆಟಿಕ್ಸನ್ನು ಆಧರಿಸಿ ವಿಮರ್ಶೆಯ ಒಂದು ಹೊಸ ತತ್ತ್ವವನ್ನು ರೂಪಿಸಿದ್ದಾರೆ. ಅದರಲ್ಲಿ ಅನುಕರಣೆಗೆ ಮಹತ್ವ ಕೊಟ್ಟಿದ್ದಾರೆ. ರೊನಾಲ್ಡ್ ಕ್ರೇನ್ ಸಂಪಾದಿಸಿರುವ ಕ್ರಿಟಿಕ್ಸ್ ಅಂಡ್ ಕ್ರಿಟಿಸಿಸಮ್ (1952) ಎಂಬ ಗ್ರಂಥದಲ್ಲಿ ಈ ತತ್ತ್ವದ ಬೆಂಬಲಿಗರ ವಿಚಾರ ಧಾರೆಯನ್ನು ಕಾಣಬಹುದು. ಸಾಹಿತ್ಯದ ಚಾರಿತ್ರಿಕ ಮತ್ತು ಪೌರಾಣಿಕ ಅಭ್ಯಾಸದ ಮೂಲಕವೂ ಅನುಕರಣತತ್ತ್ವ ಅಮೆರಿಕದ ಸಾಹಿತ್ಯವನ್ನು ಪ್ರವೇಶಿಸಿದೆ. ವಿಮರ್ಶಕ ವರ್‍ನನ್ ಪ್ಯಾರಿಂಗ್‍ಟನ್ನನದು ಚಾರಿತ್ರಿಕ ವಿಧಾನ; ತನ್ನ ಮೇನ್ ಕರೆಂಟ್ಸ್ ಇನ್ ಅಮೆರಿಕನ್ ಥಾಟ್ (3 ಸಂಪುಟಗಳು) ಎಂಬ ಕೃತಿಯಲ್ಲಿ ಸಾಹಿತ್ಯಕೃತಿಯನ್ನು ಅದರ ಹಿನ್ನಲೆಗೆ ಸಂಬಂಧಿಸುತ್ತಾನೆ.

ವಿಲಿಯಮ್ ಕುಲೆನ್ ಬ್ರಯಂಟ್[ಬದಲಾಯಿಸಿ]

ವಿಲಿಯಮ್ ಕುಲೆನ್ ಬ್ರಯಂಟ್ ತನ್ನ ಆನ್ ದಿ ನೇಚರ್ ಆಫ್ ಪೊಯಟ್ರಿಯಲ್ಲಿ (1826) ಕವಿಯ ಭಾವನಾಶಕ್ತಿ ಮತ್ತು ಸಂಕೇತಗಳಿಂದ ಶಕ್ತಿಯುತ ಭಾವಗಳನ್ನು ಸೃಷ್ಟಿಸುವ ಮತ್ತು ಉದ್ದೀಪಿಸುವ ಸಾಮಥ್ರ್ಯವನ್ನು ಒತ್ತಿ ಹೇಳುತ್ತಾನೆ. ಅಂತೆಯೇ ಓದುಗರ ನೀತಿಯನ್ನು ಉತ್ತಮಗೊಳಿಸುವ ಪಾತ್ರವನ್ನು ಕಾವ್ಯಕ್ಕೆ ಆರೋಪಿಸುತ್ತಾನೆ. ಎಮರ್¸ನ್ನನ ಬರೆವಣಿಗೆಗಳಲ್ಲಿನ - ದಿ ಪೊಯಟ್ (1844) ವಾದಗಳು ಬಹುಮಟ್ಟಿಗೆ ಬ್ರಯಂಟ್ನ ವಾದವನ್ನು ಹೋಲುತ್ತದೆ.[೨]

ಜೇಮ್ಸ್ ರಸಲ್ ಲೊವೆಲ್[ಬದಲಾಯಿಸಿ]

ಜೇಮ್ಸ್ ರಸಲ್ ಲೊವೆಲ್ ತನ್ನ ದಿ ಫಂಕ್ಷನ್ ಆಫ್ ದಿ ಪೊಯಟ್‍ನಲ್ಲಿ (1855) ಮತ್ತು ವಾಲ್ಟ್ ವಿಟ್ಮನ್ ತನ್ನ ಲೀವ್ಸ್ ಆಫ್ ಗ್ರಾಸ್‍ನ (1855) ಪೀಠಿಕೆಯಲ್ಲಿ ಕವಿ ಒಬ್ಬ ವೀಕ್ಷಕ. ಆತ ಅಮೂಲ್ಯವಾದ ನೈತಿಕ ಸತ್ಯಗಳನ್ನು ಎತ್ತಿ ತೋರಿಸುತ್ತಾನೆ ಎಂದು ಹೇಳುತ್ತಾರೆ.ಒಟ್ಟಿನಲ್ಲಿ 19ನೆಯ ಶತಮಾನದ ಅಮೆರಿಕ ಸಂಯುಕ್ತ ಸಂಸ್ಥಾನದ ಸಾಹಿತ್ಯ ವಿಮರ್ಶೆ ಬಹುಮಟ್ಟಿಗೂ ಕೋಲ್‍ರಿಜ್‍ನ ಅಭಿವ್ಯಕ್ತಿವಾದವನ್ನು ಅನುಸರಿಸುತ್ತದೆ.

ಎಡ್‍ಗರ್ ಅಲೆನ್ ಪೊ[ಬದಲಾಯಿಸಿ]

ವಾಸ್ತವಿಕ ಮತ್ತು ವ್ಯಕ್ತಿಪರ ತತ್ತ್ವಗಳಲ್ಲಿ ಕೆಲವು ಸಾದೃಶ್ಯಗಳಿವೆ. ಎಡ್‍ಗರ್ ಅಲೆನ್ ಪೊ ಒಬ್ಬ ವಾಸ್ತವಿಕ ಮತ್ತು ಪ್ರತಿಭಾವಂತ ವಿಮರ್ಶಕ. ಕಾವ್ಯದ ಸೌಂದರ್ಯಕ್ಕೆ, ಅದು ಎಷ್ಟರಮಟ್ಟಿಗೆ ಕಲಾಕೃತಿ ಎಂಬುದಕ್ಕೆ, ಪೊ ಮಹತ್ವ ಪ್ರಿನ್ಸಿಪಲ್ (1850) ಎಂಬುದರಲ್ಲಿ ನೀಳ್‍ಗವಿತೆ ಎಂಬುದು ಒಂದು ಅರ್ಥಸಾಮಂಜಸ್ಯವಿಲ್ಲದ ಪದ ಎಂದು ಹೇಳುತ್ತಾನೆ. ಅವನು ಕೋಲ್‍ರಿಜ್‍ನ ಬಯೊಗ್ರಾಫಿಯ ಲಿಟರೇರಿಯ ಎಂಬ ಗ್ರಂಥದಿಂದ ಪ್ರಭಾವಿತನಾಗಿದ್ದ. ಅವನ ಪ್ರಕಾರ ಕಾವ್ಯಸೌಂದರ್ಯದ ಛಂದೋಬದ್ದ ಸೃಷ್ಟಿ ಸುಂದರವೂ ಬೋಧಕವೂ ಆಗಿದ್ದರೆ ಅದು ಬರಿಯ ಆಕಸ್ಮಿಕ. ವಿಮರ್ಶಕನ ಮುಖ್ಯ ಗುಣಗಳು ಯಥಾರ್ಥತೆ, ನಿಷ್ಕಪಟತೆ ಮತ್ತು ಸ್ವತಂತ್ರಮನೋಭಾವ. ಪೊ ತಾನು ಹೇಳಿದ್ದನ್ನು ಆಚರಣೆಯಲ್ಲಿ ತಂದ. ಅವನು ತೋರಿಸಿಕೊಟ್ಟ ವಿಮರ್ಶನಮಾರ್ಗ ಒಂದು ದೊಡ್ಡ ಪರಂಪರೆಯಾಗಬಹುದಾಗಿತ್ತು. ಆದರೆ ಅವನ ವಿಮರ್ಶನಮಟ್ಟಗಳು ಮತ್ತು ಅವನ ಚುಚ್ಚುವ ದನಿ ಪ್ರಾಯಶಃ ಅದಕ್ಕೆ ಅಡ್ಡಿ ತಂದುವು.

ಹೆನ್ರಿ ಜೇಮ್ಸ್‍[ಬದಲಾಯಿಸಿ]

ಹೆನ್ರಿ ಜೇಮ್ಸ್‍ನೂ ವಾಸ್ತವಿಕತತ್ತ್ವವನ್ನು ಒತ್ತಿ ಹೇಳುತ್ತಾನೆ. ತನ್ನ ದಿ ಆರ್ಟ್ ಆಫ್ ಫಕ್ಷನ್‍ನಲ್ಲಿ (1888) ಕಾದಂಬರಿ ಒಂದು ಅನುಕರಣೀಯ ಕಲೆ, ಬರೆಹಗಾರನ ಬುದ್ದಿಮಟ್ಟ ಮತ್ತು ಅವನ ನೀತಿ, ಸ್ವಭಾವ ಅವನ ಕೃತಿಯಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಅವನು ಒಂದು ಕೃತಿಯ ರಚನಾವಿನ್ಯಾಸಕ್ಕೆ, ತಂತ್ರಕ್ಕೆ ಹೆಚ್ಚು ಮಹತ್ವ ಕೊಡುತ್ತಾನೆ.ಸಂಯುಕ್ತಸಂಸ್ಥಾನದ ಸಾಹಿತ್ಯವಿಮರ್ಶೆಯ ಆರಂಭದ (19) ನೆಯ ಶತಮಾನದ ಆದಿಭಾಗದಲ್ಲಿ, ಬ್ರಯಂಟ್ ತನ್ನ ಲೆಕ್ಚರ್ಸ್ ಆನ್ ಪೊಯಟ್ರಿಯಲ್ಲಿ ನಿಯೊ ಕ್ಲಾಸಿಸಿಸಮ್ ಬರೆಹಗಾರರನ್ನು ಅನುಕರಣೆ ಮಾಡುವುದನ್ನು ಅಲ್ಲಗೆಳೆದ. ಕಲ್ಪನೆ, ಭಾವ, ಸ್ವೋಪಜ್ಞತೆ ಮತ್ತು ಔಂದೋವಿಲಾಸವನ್ನು ಶ್ಲಾಘಿಸಿದ.ಆತೀಂದ್ರಿಯತ್ವದ ವಿಮರ್ಶೆಯ ಗುಂಪಿಗೆ ಸೇರಿದವರು, ಮುಖ್ಯವಾಗಿ ಎಮರ್‍ಸನ್, ಕೋಲ್‍ರಿಜ್‍ನ ಅನೇಕ ವಿಚಾರಗಳನ್ನು ಅಳವಡಿಸಿಕೊಂಡರು.

ವಿವಿಧ ಅಂಗಗಳು[ಬದಲಾಯಿಸಿ]

ಎಮರ್‍ಸನ್ನನ ಗುಂಪಿಗೆ ಸೇರಿದವರಲ್ಲಿ ಅತ್ಯಂತ ಕ್ರಿಯಾಶಕ್ತಿಯುಳ್ಳ ವಿಮರ್ಶಕಿ ಮಾರ್ಗರೆಟ್ ಪುಲ್ಲಿರ್ (1810-1850). (1846) ರಲ್ಲಿ ಪ್ರಕಟವಾದ ತನ್ನ ಪೇಪರ್ಸ್ ಆನ್ ಲಿಟರೇಚರ್ ಅಂಡ್ ಆರ್ಟ್ ಎಂಬ ಕೃತಿಯಲ್ಲಿ ವಿಮರ್ಶಕರನ್ನು ಮೂರು ಬಗೆಯಾಗಿ ವಿಂಗಡಿಸುತ್ತಾಳೆ : (1) ವೈಯಕ್ತಿಕ ದೃಷ್ಟಿಯ ವಿಮರ್ಶಕ ಒಂದು ಕೃತಿಗೆ ಕೇವಲ ತನ್ನ ಪ್ರತಿಕ್ರಿಯೆಯನ್ನು ತೋರಿಸುತ್ತಾನೆ. (2) ಗ್ರಾಹಕವಿಮರ್ಶಕ ಕಲ್ಪನಾಶಕ್ತಿಯಿಂದ ಕೃತಿಯನ್ನು ನೋಡಿ ಬರೆಹಗಾರನ ಉದ್ದೇಶಗಳೊಡನೆ ತಾದಾತ್ಮ್ಯವನ್ನು ಹೊಂದುತ್ತಾನೆ. (3) ವ್ಯಾಪಕವಿಮರ್ಶಕ ಬಹುಮಟ್ಟಿಗೆ ಎರಡನೆಯ ಬಗೆಯ ವಿಮರ್ಶಕನನ್ನು ಹೋಲುತ್ತಾನೆ ; ಮತ್ತು ಕೃತಿಯ ಗುಣದೋಷಗಳ ವಿಚಾರದಲ್ಲಿ ತನ್ನ ತೀರ್ಪನ್ನು ಹೇಳುತ್ತಾನೆ.

ನ್ಯೂ ಇಂಗ್ಲೆಂಡಿನ ಮಡಿವಂತರು[ಬದಲಾಯಿಸಿ]

ನ್ಯೂ ಇಂಗ್ಲೆಂಡಿನ ಮಡಿವಂತರು, ಅದರಲ್ಲೂ ಮುಖ್ಯವಾಗಿ ಆಲಿವರ್ ವೆಂಡಲ್ ಹೊಂಸ್ (1809-94) ಮತ್ತು ಜೇಮ್ಸ್ ರಸಲ್ ಲೊವೆಲ್ (1819-91) ಸಾಹಿತ್ಯದ ಮೇಲೆ ಹೆಚ್ಚು ಪ್ರಭಾವ ಬೀರಿದರು. ಪಾತ್ರಗಳು ಮತ್ತು ಸಮರ್ಪಕ ಪರಿಣಾಮಗಳನ್ನು ಪಡೆಯಲು ಕವಿ ಮಾಡುವ ಉತ್ಸಾಹಶೂನ್ಯ, ಕಂಗೆಟ್ಟ, ಕಳವಳದ, ಪೇಚಾಟದ ಷಿಕಾರಿಯೇ ಕಾವ್ಯರಚನೋದ್ಯೋಗ-ಎಂದು ಹೊಂಸ್ ಹೇಳುತ್ತಾನೆ. ಲೊವೆಲ್ ಅಮೆರಿಕದ ಅತ್ಯಂತ ಪ್ರಖ್ಯಾತವಿಮರ್ಶಕ ಎಂಬುದು ಕೆಲವರ ಮತ. ಆದರೆ ಅದು ಅತಿ ಹೆಚ್ಚಿನ ಹೊಗಳಿಕೆ. ಅವನು ಪೋಗಿಂತ ಹೆಚ್ಚು ಯುಕ್ತಾಯುಕ್ತ ಪರಿಜ್ಞಾನವುಳ್ಳವನಾಗಿರಬಹುದು. ಆದರೆ ಪೋನ ತೀಕ್ಷ್ಣಬುದ್ದಿಯಾಗಲಿ ಕಲ್ಪನಾಶಕ್ತಿಯಾಗಲಿ ಅವನಲ್ಲಿ ಕಂಡುಬರುವುದಿಲ್ಲ.

ಇತಿಹಾಸ[ಬದಲಾಯಿಸಿ]

(19)ನೆಯ ಶತಮಾನದ ಉತ್ತರಾರ್ಧದಲ್ಲಿ ಮತ್ತು (20)ರ ಮೊದಲಿನ ಕೆಲವು ವರ್ಷಗಳಲ್ಲಿ ಆಗಿಹೋದ ವಿಮರ್ಶಕರ ಪೈಕಿ ಕೆಲವರನ್ನು ಇಲ್ಲಿ ಹೆಸರಿಸಬಹುದು. ಅರ್ನೆಸ್ಟ್ ಸ್ಟೆಡ್‍ಮನ್ (1833-1908) ಅವನ ನೇಚರ್ ಅಂಡ್ ಎಲಿಮೆಂಟ್ಸ್ ಆಫ್ ಪೊಯೆಟ್ರಿಯಲ್ಲಿ ಸೌಂದರ್ಯಕ್ಕೂ ನೀತಿಗೂ ಸಂಬಂಧವಿಲ್ಲ ಎಂಬ ತತ್ತ್ವವನ್ನು ಪ್ರತಿಪಾದಿಸುತ್ತಾನೆ. ವಿಲಿಯಮ್ ತೀನ್ ಹೊವೆಲ್ಸ್‍ನ ಪ್ರಕಾರ (1837-1920) ಕಲೆ ನಿಜವನ್ನು ಹೇಳಬೇಕು. ಆದರೆ ಹಾಗೆ ಮಾಡುವಾಗ ನೀತಿಯನ್ನು ಎತ್ತಿ ಹಿಡಿಯಬೇಕು; ಮತ್ತು ಅಮೆರಿಕನರ ಜೀವನ ಮಂದಸ್ಮಿತ ದರ್ಶನವನ್ನು ಮತ್ತು ಪ್ರಜಾಪ್ರಭುತ್ವದ ಒಳ್ಳೆಯ ಗುಣಗಳನ್ನು ತೋರಿಸಬೇಕು-ಎನ್ನುತ್ತಾನೆ. ಜೂನಿಯರ್ ಹೆನ್ರಿ ಜೇಮ್ಸ್ (1843-1916) (19) ನೆಯ ಶತಮಾನದ ಅಮೆರಿಕದ ಅತ್ಯಂತ ದೊಡ್ಡ ವಿಮರ್ಶಕ. ಅವನ ಕೃತಿ ಆರ್ಟ್ ಆಫ್ ಫಿಕ್ಷನ್ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸುತ್ತದೆ. ತನ್ನ ಕಾದಂಬರಿಗಳ ನ್ಯೂಯಾರ್ಕ್ ಮುದ್ರಣಕ್ಕೆ ಅವನು ಬರೆದ ಪೀಠಿಕೆಗಳು ಆಧುನಿಕ ಕಾದಂಬರಿಕಾರರಿಗೆ ಒಂದು ಬಗೆಯ ಕಾವ್ಯಮೀಮಾಂಸೆಯಾಗಿದೆ.(20)ನೆಯ ಶತಮಾನದ ಆದಿಭಾಗದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್‍ನಲ್ಲಿ ಆಧುನಿಕ ವಿಮರ್ಶೆ ಅಥವಾ ಹೊಸ ವಿಮರ್ಶೆ ಅಂಕುರಗೊಳ್ಳುತ್ತಿತ್ತು. ಅದರಲ್ಲಿ ಮುಖ್ಯವಾದ ಅಂಗಗಳು : ಪ್ರತಿಮೆ, ಸಂಕೇತಪದ್ದತಿ, ಕಲೆಗಾಗಿ ಕಲೆ ಎಂಬ ವಾದಗಳು. ಎಲಿಯಟ್ ಮತ್ತು ಪೌಂಡ್ ಅದರಿಂದ ಪ್ರಭಾವಿತರಾಗಿ ಅದನ್ನು ಅಮೆರಿಕದಲ್ಲಿ ಹರಡಲು ಆರಂಭಿಸಿದ್ದರು. ಈ ವಿಮರ್ಶೆ ಕಾವ್ಯದ ಮತ್ತು ರಚನಾವಿನ್ಯಾಸದ ಭಾಷೆ ಮತ್ತು ಪ್ರಾಂತೀಯತೆ, ರಾಷ್ಟ್ರೀಯತೆ, ಸಂಪ್ರದಾಯಶರಣತೆ ಮೊದಲಾದವುಗಳಿಗೆ ಸಂಬಂಧಿಸಿದೆ.ಕಾರ್ಲ್ ವಾನ್ ಡೋರೆನ್, ಜೋಸೆಫ್ó ಉಡ್‍ಕ್ರಚ್ ಮೊದಲಾದವರು ಈ ಶತಮಾನದ ದೇಶಭಾಷಾಪ್ರೇಮಿಗಳು. ಇವರು ತಮ್ಮ ಪಂಥದ ಓನೀಲ್, ಲೂಯಿಸ್ ಕ್ರೀಸರ್, ಫಿಟ್ಜರಾಲ್ಡ್, ಫಾಕ್ನರ್ ಮತ್ತಿತರ ಹೊಸಲೇಖಕರನ್ನು ಎತ್ತಿಹಿಡಿದರು.

ನವಮಾನವ ದಾರ್ಶನಿಕರು[ಬದಲಾಯಿಸಿ]

ನವಮಾನವ ದಾರ್ಶನಿಕರು ಎಂಬ ಹೆಸರಿನ ಕೆಲವು ವಿಮರ್ಶಕರು ಸಾಹಿತ್ಯದ ಮುಖ್ಯ ಆಸಕ್ತಿ ನೀತಿತತ್ತ್ವಗಳು ಎಂದು ಪ್ರತಿಪಾದಿಸಿದರು. ಇವರಿಗೂ ನ್ಯೂ ಇಂಗ್ಲೆಂಡಿನ ಮಡಿವಂತ ವಿಮರ್ಶಕರಿಗೂ ತುಂಬ ಸಾದೃಶ್ಯವಿದೆ. ಇರ್‍ವಿಂಗ್ ಬ್ಯಾಬಟ್ (1865-1933) ಮತ್ತು ಪಿ. ಇ. ಮೂರ್ (1874-1937)ರನ್ನು ಈ ದಿಸೆಯಲ್ಲಿ ಹೆಸರಿಸಬಹುದು.ಇದೇ ಕಾಲದಲ್ಲಿ ಕೆಲವರು ವೃತ್ತಿವಿಮರ್ಶಕರಾಗಿ ಕೆಲಸಮಾಡಿದರು. ಮೆಕಾಲಮ್ ಕೌಲಿ ಮತ್ತು ಎಡ್‍ಮಂಡ್ ವಿಲ್ಸನ್ ಇವರಲ್ಲಿ ಮುಖ್ಯರಾದವರು.ಲಯನಲ್ ಟ್ರೆಲಿಂಗ್ (1905) ಪಾಂಡಿತ್ಯಪೂರ್ಣ ವಿಮರ್ಶಕ. ಅವನಲ್ಲಿ ಹಲವರು ವಿಮರ್ಶನಸಂಪ್ರದಾಯಗಳ ಮಿಲನವನ್ನು ಕಾಣಬಹುದು. ಅವನ ವಿಮರ್ಶೆಯಲ್ಲಿ ಅತೀವಶ್ರದ್ದೆಯಿದೆ. ಸಾಹಿತ್ಯದ ಅಧ್ಯಯನ ಸಂಸ್ಕøತಿಯ ಅರಿವನ್ನುಂಟುಮಾಡಿಕೊಳ್ಳುವುದಕ್ಕಾಗಿ ಎಂಬುದು ಅವನ ಮತ.ಈಚಿನ (15-20) ವರ್ಷಗಳಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಸಾಹಿತ್ಯವಿಮರ್ಶೆ ವಿಪುಲವಾಗಿ ಬೆಳೆದಿದೆ. ಅಲ್ಲದೆ ಅದರಲ್ಲಿ ಹೆಚ್ಚಿನ ವೈವಿಧ್ಯವಿದೆ. ಅದು ಸಾಹಿತ್ಯರಚನೆಯ ಮೇಲೆ ಮತ್ತು ಸಾಹಿತ್ಯಾಭ್ಯಾಸಿಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. (ಎಸ್.ಎನ್.ಎಸ್.ವಿ.)

ಅಮೆರಿಕದ ಇಂಗ್ಲಿಷ್ ಭಾಷೆ[ಬದಲಾಯಿಸಿ]

ಅಮೆರಿಕದ ಇಂಗ್ಲಿಷ್ ಭಾಷೆಯ ಸಾಹಿತ್ಯವು ಪ್ರಾರಂಭವಾಗುವುದೇ ಹದಿನೇಳನೆಯ ಶತಮಾನದ ಅಂತ್ಯಭಾಗದಲ್ಲಿ ಮೊದಲನೆಯ ಸಾಹಿತ್ಯ ವಿಮರ್ಶಕ ಎಡ್ಗರ್ ಅಲನ್ ಪೊ (1809-1849). ಸಾಹಿತ್ಯದಲ್ಲಿ ಬೋಧನೆಯನ್ನು ವಿರೋಧಿಸಿ, ಕಲೆಯ ಗುರಿ ಮತ್ತು ಕೇಂದ್ರ ಸೌಂದರ್ಯ ಎಂದ. ಕಾವ್ಯಕ್ಕೆ ಬಹುವಾಗಿ ಹೊಂದುವ ಭಾವ ವಿಷಾದ ಎಂದ. `ಇಮ್ಯಾಜಿನೇಷನ್ ಅನ್ನು ಇವನು ಸೃಜನಶಕ್ತಿಯನ್ನಾಗಿ ಕಾಣುವುದಿಲ್ಲ. ಒಂದುಗೂಡಿಸಿ ಸಮರಸ ಸಾಧಿಸುವ ಶಕ್ತಿಯನ್ನಾಗಿ ಕಾಣುತ್ತಾನೆ. ಕಾಲ್ಸ್ ಸಾಲ್ಮೊ ಎಮರ್‍ಸನ್ (1803-82).ಟ್ರ್ವಾನ್‍ಸೆನ್‍ಡೆಂಟಲ್ ಪಂಥದವನು. ಇವನದು ಪ್ರಾತೀಕವಾದ. ಇವನಿಗೆ ನಿಸರ್ಗವು ಪರಮ ಚೇತನದ ಸಂಕೇತ. ಪದಗಳು ನಿಸರ್ಗದ ವಾಸ್ತವಾಂಶಗಳ ಸಂಕೇತ. ನಿಜವಾದ ಕವಿ, ಪ್ರವಾದಿ ಬೇರೆ ಬೇರೆಯಲ್ಲಿ ಎಂದು ಪ್ರತಿಪಾದಿಸಿದ. ಪ್ರತೀಕವಾದಕ್ಕೆ ಅಮೆರಿಕದ ಸಾಹಿತ್ಯದಲ್ಲಿ ಮೊದಲು ಸ್ಥಾನ ಮಾಡಿಕೊಟ್ಟವನು ಇವನು. ಇದನ್ನು ಮುಂದುವರೆಸಿದವನು ಕವಿ ವಾಲ್ಟ್ ವಿಟ್‍ಮನ್ (1819-92) ಕಾದಂಬರಿಯನ್ನು ಅದರ ತಂತ್ರವನ್ನು ಕುರಿತು ಮೌಲಿಕವಾದ ವಿಮರ್ಶೆಯನ್ನು ಕೊಟ್ಟವನು ಕಾದಂಬರಿಕಾರ ಹೆನ್ರಿ ಜೇಮ್ಸ್ (1843-1910) `ಕಾದಂಬರಿಯು ಅಸ್ತಿತ್ವಕ್ಕೆ ಒಂದೇ ಸಮರ್ಥನೆ ಅದು ಬದುಕನ್ನು ನಿರೂಪಿಸುತ್ತದೆ ಎನ್ನುವುದು ಎಂದು ಹೇಳಿ, ಕಾದಂಬರಿ ಜಗತ್ತಿನ ಒಟ್ಟು ನೋಟದ ಅಭಿವ್ಯಕ್ತಿ ಎಂದು ವಿವರಿಸಿದ. ಇವನು ವ್ಯಕ್ತಿತ್ವ ನಿರಸನ ಸಿದ್ಧಾಂತವನ್ನು ಒಪ್ಪುವುದಿಲ್ಲ.

ಸಾಹಿತ್ಯ ವಿಮರ್ಶೆಯ ಬೆಳವಣಿಗೆ[ಬದಲಾಯಿಸಿ]

ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಸಾಹಿತ್ಯ ವಿಮರ್ಶೆ ಅಗಾಧ ಬೆಳೆಯಿತು. ಮಾನವ ಪ್ರಧಾನ ದೃಷ್ಟಿ ಇದ್ದವರಿಗೂ (ಹೂಮನಿಸ್ಟರು) ಅವರ ವಾದವನ್ನು ಒಪ್ಪದವರಿಗೂ ಯುದ್ಧವೇ ನಡೆಯಿತು. ಮಾನವ ಪ್ರಧಾನ ದೃಷ್ಟಿಯವರು ಸಾಹಿತ್ಯವು ಮನುಷ್ಯನಿಗೆ ಸಹಜವಾದ ಒಳ್ಳೆಯತನ, ಸತ್ಯ-ಶಿವ-ಸುಂದರಗಳೇ ಇವುಗಳಲ್ಲಿ ಒಲವು ಇವನ್ನೆ ಮುಖ್ಯವಾಗಿ ಚಿತ್ರಿಸಬೇಕು ಎಂದು ವಾದಿಸಿದರು. ಇದನ್ನು ವಿರೋಧಿಸಿದವರು, ಎಚ್.ಎಚ್.ಮೆನ್‍ಕೆನ್(1880-1956), ಜಾರ್ಜ್ ಸಂತಾಯನ (186301952) ಮೊದಲಾದವರು ಈ ಅಭಿಪ್ರಾಯವನ್ನು ಒಪ್ಪಲಿಲ್ಲ. ಧರ್ಮ ಮತ್ತು ಕಾವ್ಯಗಳ ತಿರುಳು ಒಂದೇ, ವ್ಯವಹಾರ ಜಗತ್ತಿನಲ್ಲಿ ಅವುಗಳ ಸಂಬಂಧ ಬೇರೆ ಎಂದು ಸಂತಯಾನ ವಾದಿಸಿದ. 1930ರಲ್ಲಿ `ಐ ಎಲ್ ಟೀಕ್ ಮೈ ಸ್ಟ್ಯಾಂಡ್ ಎನ್ನುವ ಲೇಖನ ಸಂಕಲನ ಪ್ರಕಟವಾಯಿತು. ಮುಂದೆ ನವ್ಯ ವಿಮರ್ಶೆಯ ಪಂಥದಲ್ಲಿ ಪ್ರಸಿದ್ಧವಾದ ಹಲವರು-ಆಲನ್ ಟೇಟ್, ಜಾನ್ ಕ್ರೋ ರ್ಯಾನ್‍ಸಮ್, ರಾಬರ್ಟ್ ಪೆನ್ ವಾರೆನ್ ಇವರೆಲ್ಲರ ಲೇಖನಗಳನ್ನು ಇದು ಒಳಗೊಂಡಿತ್ತು. ಇದು ಮಾನವಪ್ರಧಾನ ಪಂಥವನ್ನು ವಿರೋಧಿಸಿತು.ಈ ಕಾಲದಲ್ಲಿ ಎಜ್ಜಾ ಪೌಂಡ್ (1885-1972) ಇಂಗ್ಲೆಂಡಿನಲ್ಲಿ ನವ್ಯ ವಿಮರ್ಶೆಯ ಇಬ್ಬರು ಉದ್ಘಾಟಕರಲ್ಲಿ ಒಬ್ಬನಾದ ಟಿ.ಎಸ್.ಎಲಿಯಟ್‍ನ (1885-1965; ಮತ್ತೊಬ್ಬನು ಐ.ಐ.ರಿಚಡ್ರ್ಸ್: 1893-1979)ನ ಸ್ನೇಹಿತ ಅವರ ಮೇಲೆ ಪ್ರಭಾವ ಬೀರಿದ. ನವ್ಯ ವಿಮರ್ಶೆ ಅಮೆರಿಕದಲ್ಲಿ ಇವನೊಂದಿಗೆ ಪ್ರಾರಂಭವಾಯಿತು ಎನ್ನಬಹುದು. ರೊಮ್ಹಾಂಟಿಕ್ ಮನೋಧರ್ಮವನ್ನೇ ಇವನು ವಿರೋಧಿಸಿದ. ಕಾವ್ಯವು ಸ್ಫೂರ್ತಿಯ ಸೃಷ್ಟಿ ಎನ್ನುವುದನ್ನು ಇವನು ಒಪ್ಪಲಿಲ್ಲ. ರೊಮ್ಹಾಂಟಿಕ್ ಕಾವ್ಯ, ಅಸ್ಪಷ್ಟ, ಅದರಲ್ಲಿ ನಿಷ್ಕøಷ್ಟತೆ ಇಲ್ಲ ಎಂದು ಪ್ರತಿಪಾದಿಸಿದ . `ಇಮೇಜ್‍ಗೆ ಇವನು ಎಷ್ಟು ಪ್ರಾಮುಖ್ಯತೆ ನೀಡಿದ ಎಂದರೆ, `ಬೃಹದ್ಗ್ರಂಥಗಳನ್ನು ಬರೆಯುವುದಕ್ಕಿಂತ ಒಂದು ಜೀವಮಾನದಲ್ಲಿ ಒಂದು `ಇಮೇಜ್ ಅನ್ನು ಸೃಷ್ಟಿಸುವುದು ಉತ್ತಮ ಎಂದು ಹೇಳಿ `ಒಂದು ಕ್ಷಣದಲ್ಲಿ ಬೌದ್ಧಿಕ ಮತ್ತು ಭಾವನಾತ್ಮಕ ಕಾಂಪ್ಲೆಕ್ಸ್ ಅನ್ನು ಕೊಡುತ್ತದೆ ಎಂದು ವಿವರಿಸಿದ. (ಕಾಂಪ್ಲೆಕ್ಸ್ ಪದವನ್ನು ಮನಶ್ಯಾಸ್ತ್ರದಲ್ಲಿ ಬಳಸುವ ಅರ್ಥದಲ್ಲಿ ಬಳಸಿದ್ದೇನೆ ಎಂದು ಹೇಳಿದ) `ರೂಪ ಅಥವಾ `ಫಾರಂ'ಗೆ ಪ್ರಾಧಾನ್ಯ ನೀಡಿದ.

ಎಜ್ಜಾ ಪೌಂಡ್[ಬದಲಾಯಿಸಿ]

`ನನ್ನ ವಿಮರ್ಶೆ ಎನ್ನುವ ಪದಬಂದ ಹೆಚ್ಚಾಗಿ ಬಳಕೆಗೆ ಬಂದದ್ದೇ ಜಾನ್ ಕ್ರೊ ಡ್ಯಾನ್‍ಸಮ್ ಈ ಹೆಸರಿನ ಪುಸ್ತಕವನ್ನು ಪ್ರಕಟಿಸಿದನಂತರ (1940). ಸಾಹಿತ್ಯಕೃತಿಯ `ರೂಪಕ್ಕೆ ಪ್ರಾಧಾನ್ಯ ನೀಡಿ ಸಾಹಿತ್ಯಕೃತಿಯ ಸ್ವಾಯತ್ತತೆಯನ್ನು ಈ ಪಂಥ ಒತ್ತಿ ಹೇಳಿತು. ಕೃತಿಯನ್ನು ಎಚ್ಚರದಿಂದ ಓದಿ ಕೃತಿಯ ವಿಮರ್ಶೆಗೆ ಕೃತಿಯ ಪಠ್ಯವನ್ನೆ ಆಧಾರ ಮಾಡಿಕೊಂಡಿತು. ಕ್ಲಿಯಾಂತ್ ಬುಕ್ಸ್ ಮತ್ತು ರಾಬರ್ಟ್ ಪೆನ್ ವಾರೆನರು ಬರೆದ ಪುಸ್ತಕಗಳು ವಿಶ್ವವಿದ್ಯಾನಿಲಯಗಳಲ್ಲಿ ಕಾವ್ಯವನ್ನು ಕಾದಂಬರಿ-ಸಣ್ಣಕಥೆಗಳನ್ನೂ, ಅಧ್ಯಯನ ಮಾಡುವ ವಿಧಾನವನ್ನೇ ಬದಲಾಯಿಸಿದವು. ನವ್ಯ ವಿಮರ್ಶೆಯು `ಐರನಿ `ಪಾರಡಾಕ್ಸ್, `ಟೆನ್‍ಷನ್, `ವೆಹಿಕಲ್, `ಆ್ಯಂಬ್ಯುಗಿಯಟಿ' ಮೊದಲಾದ ಶಬ್ದಗಳನ್ನು ಪಾರಿಭಾಷಿಕ ಶಬ್ದಗಳನ್ನಾಗಿ ಬಳಸಿ ಹೊಸ ಪರಿಕಲ್ಪನೆಗಳನ್ನು ಕೊಟ್ಟರು.

ಷಿಕಾಗೊ ಪಂಥ[ಬದಲಾಯಿಸಿ]

ಅಮೆರಿಕದಲ್ಲಿಯ ಪ್ರಾರಂಭವಾದ ಮೊದಲನೆಯ ವಿಮರ್ಶ ಪಂಥ ಷಿಕಾಗೊ ಪಂಥ. ಇದು ನವ್ಯ ವಿಮರ್ಶೆಗೆ ಪ್ರತಿಭಟನೆಯಾಗಿ ಮೂಡಿತು. ಆರ್.ಎಸ್.ಕ್ರೇನ್. ಕಿಲ್ಲರ್ ಆರ್ಸೆನ್ ಈ ಪಂಥವನ್ನು ಪ್ರಾರಂಭಿಸಿದರು. ಈ ಪಂಥದವರು ನವ್ಯ ವಿಮರ್ಶೆಯನ್ನು ಮೂರು ಕಾರಣಗಳಿಗಾಗಿ ಟೀಕಿಸಿದರು: (1) ನವ್ಯ ವಿಮರ್ಶೆಯು ಭಾಷೆಗೆ ಅತಿ ಪ್ರಾಧಾನವನ್ನು ನೀಡುತ್ತದೆ. (2)ಪ್ರತಿಯೊಬ್ಬ ನವ್ಯ ವಿಮರ್ಶಕನೂ ಒಂದು ಸೂತ್ರಕ್ಕೆ ಕಟ್ಟುಬೀಳುತ್ತಾನೆ. (ಬುಕ್ಸ್ : ಪ್ಯಾರಡಾನ್ಸ್, ಎಮ್‍ಸನ್: ಆ್ಯಂಬುಗಿಯಿಟಿ, ಟೇಟ್ : ಟೆನ್‍ಷನ್, ರ್ಯಾನ್‍ಸಮ್; ಟಿಕ್ಸ್‍ಷ್ಟರ್, ಬ್ಲ್ಯಕ್‍ಮರ್; ಜೆಷ್ಟರ್ ಹೀಗೆ) ಮೂರನೆಯದು: ಪ್ರತಿಯೊಬ್ಬ ವಿಮರ್ಶಕನೂ ತನಗೇ ವಿಶಿಷ್ಟವಾದ ಭಾಷೆಯನ್ನು ಬಳಸಲಿಲ್ಲ. ಷಿಕಾಗೊ ವಿಮರ್ಶಕರು (ಇವರನ್ನು `ಅರಿಸ್ಟೊಟೀಲಿನಿಯರು ಎಂದು `ಸಿಯೊ ಅರಿಸ್ಟೊಟೀಲಿನಿಯರು ಎಂದೂ ಕರೆಯುವುದುಂಟು) ನಿಲುವು ಇದು; ಕಾವ್ಯ ಪದಗಳಿಂದಾದದ್ದು, ಆದರೆ ಪದಗಳೇ ಕಾವ್ಯದಲ್ಲಿ ಪದಗಳ ಶಬ್ದ ಮತ್ತು ಲಯಗಳೂ ಪರಿಣಾಮವನ್ನುಂಟು ಮಾಡುತ್ತವೆ. ಕೃತಿಯ ಉದ್ದೇಶಿತ ಪರಿಣಾಮ, ಕೃತಿಯ ಅನುಕರಣೆಯ ವಸ್ತು, ವಿಧಾನ ಮತ್ತು ಪರಿಣಾಮಗಳನ್ನೂ ಗಮನಿಸಬೇಕು. ಇದು ಅರಿಸ್ಟಾಟಲನ ವಿಮರ್ಶೆಯ ಆಧಾರದ ಮೇಲೆ ಬೆಳೆದದ್ದು.

ಯೂರೋಪಿನ ಮತ್ತು ಅಮೆರಿಕದ ಸಾಹಿತ್ಯ ವಿಮರ್ಶೆಗಳು[ಬದಲಾಯಿಸಿ]

ಇತ್ತೀಚೆಗಿನ ವರ್ಷಗಳಲ್ಲಿ ಯೂರೋಪಿನ ಮತ್ತು ಅಮೆರಿಕದ ಸಾಹಿತ್ಯ ವಿಮರ್ಶೆಗಳು ಪರಸ್ಪರ ಪ್ರಭಾವವನ್ನು ಬೀರಿವೆ. ಭಾಷಾಶಾಸ್ತ್ರ ಮತ್ತು ಶೈಲ ಶಾಸ್ತ್ರಗಳ ಅಧ್ಯಯನವು ಬೆಳೆದಂತೆ ಕೃತಿಯ ಒಳಸ್ವರೂಪವನ್ನು ಗುರುತಿಸುವ ಪ್ರಯತ್ನವನ್ನು ಮಾಡುತ್ತಿವೆ. `ಸ್ಟ್ರಕ್ಚರಲಿಸಮ್ `ಡಿಕನ್‍ಸ್ಟ್ರಕ್‍ಷನ್ ಎರಡು ಪಂಥಗಳೂ ಭಾಷಾವಿಜ್ಞಾನದಂತೆ ಮೂಡಿಬಂದವು. ಈಚೆಗಿನ ಎರಡು ಪಂಥಗಳು ಓದುಗ ಕೇಂದ್ರಿತ ಪಂಥ ಮತ್ತು ಕೃತಿಕೇಂದ್ರಿತ ಪಂಥ ಅಥವಾ ಪಠ್ಯ ಕೇಂದ್ರಿತ ಪಂಥ. ಮೊದಲನೆಯದು ಓದಿನ ಪ್ರಕ್ರಿಯೆಯಲ್ಲಿ ಓದುಗನೇ ಮುಖ್ಯ ಎಂದು ಭಾವಿಸಿ ಸಾಹಿತ್ಯಕೃತಿಯನ್ನು ವಿಶ್ಲೇಷಿಸುತ್ತದೆ. ಎರಡನೆಯದು `ದ ಸೈಬಿಆಲಿ ಆಫ್ ದ ಟೆಕ್ಸ್ಟ್ (ಕೃತಿಯ ಪಠ್ಯ, `ಟೆಕ್ಸ್ಟ್, ಯಾವುದು? ಎನ್ನುವುದನ್ನೂ ವಿಶ್ಲೇಷಿಸುತ್ತದೆ. `ಖಿhe ಚಿuಣhoಡಿ is ಜeಚಿಜ ' ಗ್ರಂಥಕರ್ತ ತೀರಿಹೋದ) ಎನ್ನುವ ಘೋಷಣೆಯನ್ನು ಕೇಳಿದ್ದೇವೆ. ಸ್ಟಾನ್ಲಿ ಫಿಷ್‍ನ `ಈಸ್ ದೇರ್ ಎ ಟೆಕ್ಸ್ಟ್ ಇನ್ ದಿಸ್ ಕ್ಲಾಸ್? ಕುತೂಹಲಕರವಾದ ಪುಸ್ತಕ. ಈ ಎಲ್ಲ ಸಿದ್ಧಾಂತಗಳಿಗೂ ಪಂಥಗಳಿಗೂ ಅಮೆರಿಕದಲ್ಲಿ ಬೆಂಬಲಿಗರಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]