ಅಮೆರಿಕದ ಸಾಹಿತ್ಯ ರೂಪರೇಖೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

1607ರಲ್ಲಿ ವರ್ಜಿನಿಯದ ಜೇಮ್ಸ್ ಟೌನಿನಲ್ಲಿ ಮೊದಲ ಇಂಗ್ಲಿಷ್ ನೆಲಸುನಾಡು ಸ್ಥಾಪನೆಯಾದ ಅನಂತರ ಸ್ವಲ್ಪಕಾಲದಲ್ಲಿಯೆ ಅಮೆರಿಕದ ಸಾಹಿತ್ಯ ಪ್ರಾರಂಭವಾಯಿತು.

ಇತಿಹಾಸ[ಬದಲಾಯಿಸಿ]

19ನೆಯ ಶತಮಾನದ ಉತ್ತರಾರ್ಧದವರೆಗೆ ದೇಶದ ಮೂಲನಿವಾಸಿಗಳಾಗಿದ್ದ ರೆಡ್ ಇಂಡಿಯನರ ಸಂಸ್ಕಂತಿಯನ್ನು ಉಳಿಸುವ ವ್ಯವಸ್ಥಿತ ಪ್ರಯತ್ನ ನಡೆಯಲಿಲ್ಲ. ಆದುದರಿಂದ ಅವರ ಸಾಹಿತ್ಯದ ದಾಖಲೆ ಯಾವುದೂ ಬರೆಹದಲ್ಲಿ ಉಳಿದಿಲ್ಲ. ಜೆ.ಎಫ್.ಕೂಪರ್, ಲಾಂಗ್‍ಫೆಲೊ ಮತ್ತು ಮೇರಿ ಆಸ್ಟಿನರ ಕೃತಿಗಳಲ್ಲಿ ಮಾತ್ರ ಆ ಜನರ ರೂಢಿ, ಸಂಪ್ರದಾಯಗಳ ಗುರುತು ಕಾಣುತ್ತದೆ. ಪ್ರಾರಂಭದ ವಸಾಹತುಗಳ ದಿನಗಳಲ್ಲಿ ಪರಿಸ್ಥಿತಿ ಸಾಹಿತ್ಯದ ಬೆಳೆವಣಿಗೆಗೆ ನೆರವಾಗುವಂತಿರಲಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಚೆದರಿಹೋಗಿ ಸ್ವತಂತ್ರವಾಗಿ ವಸಾಹತುಗಳು ಬೆಳೆಯುತ್ತಿದ್ದಾಗ ರಾಷ್ಟ್ರೀಯ ವ್ಯಕ್ತಿತ್ವದ ಅರಿವು ಸ್ಪಷ್ಟವಾಗಿ ಮೂಡಲು ಕಾಲಾವಕಾಶ ಅಗತ್ಯವಾಯಿತು. ರೆಡ್ ಇಂಡಿಯನರ ರೂಢಿ, ಸಂಪ್ರದಾಯಗಳನ್ನು ಅಲಕ್ಷ್ಯ ಮಾಡಿದುದರಿಂದ ಜಾನಪದ ಸಾಹಿತ್ಯವಾಗಲಿ ವಿಶ್ವಾಸಾರ್ಹವಾದ ಮಹಾಕಾವ್ಯವಾಗಲಿ ಇರಲಿಲ್ಲ. ಗಣನೀಯ ಪ್ರಮಾಣದ ವಾಚಕವೃಂದ, ಅಗತ್ಯವಾದ ಅಚ್ಚಿನ ಮತ್ತು ಪ್ರಕಟಣೆಯ ಸೌಲಭ್ಯಗಳು-ಇವುಗಳ ಅಭಾವ ಹೊಸ ಅಡ್ಡಿಯಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಅದು ಬಿಳಿಯರು ಹೊಸದಾಗಿ ತಮ್ಮದೇ ಆದೊಂದು ರಾಜ್ಯವನ್ನು ಕಟ್ಟತೊಡಗಿದ ಕಾಲ, ಎಲ್ಲೆಲ್ಲೂ ಅನಿಶ್ಚಿತ ಪರಿಸ್ಥಿತಿ, ಉಳಿವಿಗಾಗಿ ಹೋರಾಡಬೇಕಾಗಿದ್ದ ವಿಷಮಸನ್ನಿವೇಶ-ಇವುಗಳಿಂದಾಗಿ ಸಾಹಿತ್ಯದ ಬೆಳವಣಿಗೆಗೆ ಅಡ್ಡಿಯುಂಟಾಯಿತು. ಈ ಎಲ್ಲ ಅಂಶಗಳ ಪರಿಣಾಮವಾಗಿ ಅಮೆರಿಕದ ಸಾಹಿತ್ಯ ತನ್ನದೇ ಆದ ರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿ ಬೆಳೆಯಲು ಎರಡು ಶತಮಾನಗಳಿಗಿಂತ ಹೆಚ್ಚು ಕಾಲಾವಧಿ ಅಗತ್ಯವಾಯಿತು. ಈ ಧೀರ್ಘ ಅವಧಿಯಲ್ಲಿ ಅದು ಬಹುಮಟ್ಟಿಗೆ ಬ್ರಿಟಿಷ್ ಮಾದರಿಗಳ ಅನುಕರಣೆಯಾಗಿಯೆ ಉಳಿಯಿತು.

ವಸಾಹತು ಯುಗದ[ಬದಲಾಯಿಸಿ]

(1607-1765) ಸಾಹಿತ್ಯ, ಬ್ರಿಟಿಷ್ ಜಾಕೊಬಿಯನ್, ಪ್ಯೂರಿಟನ್ ರಾಜತ್ವದ ಪುನರುದಯ ಮತ್ತು ನಿಯೊಕ್ಲಾಸಿಕಲ್ ಪ್ರಭಾವಗಳಿಂದ ಬಹುಮಟ್ಟಿಗೆ ರೂಪತಾಳಿತು. ಸಮೀಕ್ಷೆಗಳು, ಪ್ರವಾಸಸಾಹಿತ್ಯ, ವೃತ್ತಾಂಶಗಳು, ಧಾರ್ಮಿಕ ಮತ್ತು ಮತಶಾಸ್ತ್ರ (ಥಿಯೊಲಾಜಿಕಲ್) ಬರಹಗಳು, ದಿನಚರಿಗಳು ಮತ್ತು ಪ್ಯೂರಿಟನ್ ಪದ್ಯಗಳು ಬಹುಪಾಲು ಇವನ್ನೇ ಅದು ಒಳಗೊಂಡಿತ್ತು. ಸಮೀಕ್ಷೆಗಳು (ಸರ್ವೇಸ್) ಮತ್ತು ಪ್ರವಾಸ ವೃತ್ತಾಂಶಗಳ ಬರೆಹಗಾರರಲ್ಲಿ ಮುಖ್ಯರಾದವರು ಕ್ಯಾಪ್ಟನ್ ಜಾನ್‍ಸ್ಮಿತ್ ಮತ್ತು ವಿಲಿಯ ಬರ್‍ಟ್ರಂ. ಕಾಟನ್ ಮ್ಯಾಥರ್ ಮತ್ತು ವಿಲಿಯಂ ಬ್ರಾಡ್‍ಫರ್ಡ್‍ರು ಪ್ಯೂರಿಟನ್ ದೃಷ್ಟಿಕೋನದಿಂದ ವೃತ್ತಾಂಶಗಳನ್ನು ರಚಿಸಿದರು. ಅತಿ ಪರಿಣಾಮಕಾರಿಯಾದ ಉಪದೇಶ ಭಾಷಣಗಳನ್ನು ಮಾಡುತ್ತಿದ್ದ ಜೋನಥ್ನ್ ಎಡ್‍ವಡ್ರ್ಸ್ ಈ ಕಾಲದ ಅತಿ ಪ್ರಮುಖನಾದ ಧರ್ಮಶಾಸ್ತ್ರ ಕರ್ತೃ. ಆ್ಯನ್ ಬ್ರಾಡ್‍ಸ್ಟ್ರೀಟ್ ಮತ್ತು ಎಡ್‍ವರ್ಡ್ ಮತ್ತು ಎಡ್‍ವರ್ಡ್ ಟೈಲರ್ ಮುಖ್ಯ ಪ್ಯೂರಿಟನ್ ಕವಿಗಳು.

ಪತ್ರಿಕೋದ್ಯಮ ಮತ್ತು ಸಾಹಿತ್ಯಗಳು[ಬದಲಾಯಿಸಿ]

ಕ್ರಾಂತಿಯ (1765-1783) ಮತ್ತು ಅದರ ಮುಂದಿನ ಕಾಲದಲ್ಲಿ ಪತ್ರಿಕೋದ್ಯಮ ಮತ್ತು ಸಾಹಿತ್ಯಗಳು ಒಂದೇ ಸಮನೆ ಬೆಳೆದುವು; ಪತ್ರಿಕಾಪ್ರಬಂಧ, ಕಾಲ್ಪನಿಕ ಸಾಹಿತ್ಯ ಮತ್ತು ನಾಟಕಗಳಂಥ ಸಾಹಿತ್ಯ ರೂಪಗಳು ಅವತರಿಸಿದುವು. ಪತ್ರಿಕೋದ್ಯಮ ಮತ್ತು ಪ್ರಬಂಧಸೃಷ್ಟಿಯಲ್ಲಿ ಬೆಂಜಮಿನ್ ಫ್ರಾಂಕಲಿನ್ ಹೊಸ ಹಾದಿ ತುಳಿದ. ಅವನ ಆತ್ಮವೃತ್ತ ಅಮೆರಿಕ ಸಾಹಿತ್ಯದ ಶ್ರೇಷ್ಟಕೃತಿಗಳಲ್ಲೊಂದು. ಕ್ರಾಂತಿಯುಗದ ವಿವಾದಾತ್ಮಕ ಬರೆವಣಿಗೆಯ ಮಹಾರಾಶಿಯಲ್ಲಿ ಥಾಮಸ್ ಪೇನ್, ಜೆಫರ್‍ಸನ್ ಮತ್ತು ಹ್ಯಾಮಿಲ್ಟನ್‍ರ ಕೃತಿಗಳು ಉಳಿದುಬಂದಿವೆ. ಕ್ರೆವ್‍ಕರ್ ಮತ್ತು ಜಾನ್ ವುಲಮನ್ ಈ ಕಾಲದ ಗಣನೀಯ ಗದ್ಯ ರಚನಾಕಾರರು. ಕಾವ್ಯರಂಗದಲ್ಲಿ, ಫಿಲಿಫ್‍ಫ್ರೆನು ಮತ್ತು ಕನೆಕ್‍ಟಿಕಟ್ ಅಥವಾ ಹರ್ಟ್‍ಫಡ್ ವಾಕ್‍ಚತುರರ ಸಾಹಿತ್ಯ ಸೃಷ್ಟಿ ನಿಯೊ ಕ್ಲಾಸಿಸಿಸಮ್ ವಿಧಾನದ ಮತ್ತು ಬಲಗೊಳ್ಳುತ್ತಿದ್ದ ರೊಮ್ಯಾಂಟಿಕ್ ವಿಧಾನದ ಪ್ರಭಾವವನ್ನು ತೋರಿಸುತ್ತವೆ. ಸಾಹಿತ್ಯವನ್ನೆ ವೃತ್ತಿಯಾಗಿ ಸ್ವೀಕರಿಸಿದ ಅಮೆರಿಕದ ಮೊದಲ ಬರೆಹಗಾರ ಚಾರಲ್ಸ್ ಬ್ರಾಕಡನ್ ಬ್ರೌನ್, ಅಮೆರಿಕದ ಮೊದಲನೆಯ ಪ್ರಮುಖ ಕಾದಂಬರಿಕಾರ. ಷೆಲ್ಲಿ ಮತ್ತು ಗಾಡ್‍ವಿನರು ಇವನ ಗಾಥಿಕ್ ಕಾದಂಬರಿಗಳನ್ನು ಮೆಚ್ಚಿದ್ದರು. ಇವನು ಪೋ ಮತ್ತು ಹಾತಾರ್ನರ ಮೇಲೆ ಪ್ರಭಾವ ಬೀರಿದ. ಮುಖ್ಯ ಸಾಹಿತ್ಯರೂಪಗಳಲ್ಲಿ ಕಡೆಯಲ್ಲಿ ಅವತರಿಸಿದುದು ಮತ್ತು ನಿಧಾನವಾಗಿ ಬೆಳೆದುದು ನಾಟಕವೇ. ಅಮೆರಿಕದ ನಾಟಕ ಚರಿತ್ರೆಯ ಪ್ರಾರಂಭದ ಅತಿ ಮುಖ್ಯ ಹೆಸರೆಂದರೆ ವಿಲಿಯಂ ಡನ್‍ಲಾಪ್‍ನದು. ಇವ ನಾಟಕಕಾರನೂ ನಾಟಕವನ್ನು ಸಜ್ಜುಗೊಳಿಸುವವನೂ (ಪ್ರೊಡ್ಯೂಸರ್) ನಾಟಕಮಂದಿರದ ವ್ಯವಸ್ಥಾಪಕನೂ ಆಗಿದ್ದ. ಆದರೆ (20)ನೆಯ ಶತಮಾನದ ಆದಿಭಾಗದವರೆಗೆ ದೇಶದಲ್ಲಿ ಮೊದಲವರ್ಗದ ನಾಟಕ ಕಾಣಿಸಿಕೊಳ್ಳಲಿಲ್ಲ.[೧]

ಅಮೆರಿಕದ ಸಾಹಿತ್ಯ[ಬದಲಾಯಿಸಿ]

(19)ನೆಯ ಶತಮಾನದ ಆದಿಭಾಗದಲ್ಲಿ ಅಮೆರಿಕದ ಸಾಹಿತ್ಯ ಇನ್ನೂ ಇಂಗ್ಲಿಷ್ ಸಾಹಿತ್ಯವನ್ನೆ ಮಾದರಿಯನ್ನಾಗಿಟ್ಟುಕೊಂಡು ಮುಂದುವರಿದರೂ ಕ್ರಮೇಣ ಅದು ಇಂಗ್ಲೆಂಡಿನಲ್ಲಿ ಮನ್ನಣೆ ಪಡೆಯುವಂತಾಯಿತು. ಪ್ರಾಯಶಃ ಇಂಗ್ಲೆಂಡಿನಲ್ಲೂ ಜನರ ಮನ್ನಣೆ ಗಳಿಸಿದ ಅಮೆರಿಕದ ಮೊದಲ ಬರೆಹಗಾರ ವಾಷಿಂಗ್‍ಟನ್ ಅರ್‍ವಿಂಗ್. ಬಹುಮುಖ್ಯ ಶಕ್ತಿ ಪಡೆದ ಆತ ಸಣ್ಣ ಕಥೆಗಳನ್ನೂ ಚರಿತ್ರೆಯನ್ನೂ ಮತ್ತು ಜೀವನ ಚರಿತ್ರೆಗಳನ್ನೂ ರಚಿಸಿದ. ಜೇಮ್ಸ್ ಪೆನಿಮೋರ್ ಕೂಪರ್ ಸ್ಥಳೀಯ ಹಿನ್ನಲೆ ಹೊಂದಿದ ಚಾರಿತ್ರಿಕ ಕಾದಂಬರಿಯನ್ನು ರಚಿಸಿದ.

ಸಂಯುಕ್ತ ಸಂಸ್ಥಾನದ ಚಟುವಟಿಕೆಗಳು[ಬದಲಾಯಿಸಿ]

(19)ನೆಯ ಶತಮಾನದ ಮಧ್ಯಭಾಗದಲ್ಲಿ ಹೊಸ ಇಂಗ್ಲೆಂಡು ಸಂಯುಕ್ತ ಸಂಸ್ಥಾನದ ಚಟುವಟಿಕೆಗಳ ಕೇಂದ್ರವಾಯಿತು. ಅಂದಿನ ಬರೆಹಗಾರರಲ್ಲಿ ಇನ್ನೂ ಬ್ರಿಟಿಷ್ ಮಾದರಿಯನ್ನೇ ಅನುಸರಿಸುತ್ತಿದ್ದ ಸಂಪ್ರದಾಯವಂತರದು ಮತ್ತು ಅಮೆರಿಕದ ನವೋದಯದವರದು ಎಂದು ಎರಡು ಮುಖ್ಯ ಪಂಥಗಳನ್ನು ಕಾಣಬಹುದು. ಸಂಪ್ರದಾಯವಂತರ ಗುಂಪಿನಲ್ಲಿ ಎಚ್. ಡಬ್ಲ್ಯು. ಲಾಂಗ್‍ಫೆಲೊ, ಡಬ್ಲ್ಯು. ಸಿ. ಬ್ರಯಂಟ, ಜೆ. ಜಿ. ವಿಟ್ಟಿಯರ್ ಮೊದಲಾದ ಕವಿಗಳೂ ಒ. ಡಬ್ಲ್ಯು. ಹೋಮ್ಸ್ ಮತ್ತು ಜೆ. ಆರ್. ಲೊವೆಲ್ ಮೊದಲಾದ ಪ್ರಬಂಧಕಾರರೂ ಸೇರಿದರು. ಒಟ್ಟಿನಲ್ಲಿ ಇವರ ಸೃಷ್ಟಿಯಲ್ಲಿ ಕಾಣುವುದು ಕಳೆಗೂಡಿದ ಭಾವನಾಪ್ರಧಾನರೀತಿ (ರೊಮ್ಯಾಂಟಿಸಿಸóಮ್). ಆದುದರಿಂದ ಇದರಲ್ಲಿ ಸತ್ತ್ವವಾಗಲಿ ತನ್ನತನವಾಗಲಿ ಕಾಣಬಹುದು. ಅಮೆರಿಕದ ವಿಶ್ವಾಸಾರ್ಹ ಸಾಹಿತ್ಯವಾಣಿ ಮೊದಲು ಕೇಳಿಬಂದುದು ನವೋದಯ ಗುಂಪಿನಿಂದ. ಈ ಗುಂಪಿನಲ್ಲಿ ನ್ಯೂ ಇಂಗ್ಲೆಂಡಿನವರೆನಿಸಿದ ಎಮರ್‍ಸನ್ ಥೊರೊ (ಖಿhoಡಿeಚಿu) ಹಾರ್ತಾನ್ ಮತ್ತು ಅಂಥದೇ ಮನೋವೃತ್ತಿಯುಳ್ಳ ಕೃತಿಗಳನ್ನು ರಚಿಸಿದ ಮೆಲ್‍ವಿಲ್, ವ್ಹಿಟ್‍ಮನ್ ಮತ್ತು ಪೋ-ಇವರು ಸೇರಿದ್ದರು.

ಅಮೆರಿಕದ ನವೋದಯ ಬರೆಹಗಾರರೂ ರೊಮ್ಯಾಂಟಿಕ್ ಬರೆಹಗಾರರೇ; ಆದರೆ ಇವರದ್ದು ಕಳೆಗುಂದಿದ, ಬೇರೆಡೆಯಿಂದ ತಂದ ರೊಮ್ಯಾಂಟಿಸಿಸóಂ ಆಗಿರಲಿಲ್ಲ. ಇಂಗ್ಲಿಷ್ ರೊಮ್ಯಾಂಟಿಕ್ ಬರಹಗಾರರನ್ನು ಅನುಕರಿಸದೆ ಆ ಬರಹಗಾರರಿಗೆ ಚೇತನವಿತ್ತ ಪ್ಲೆಟಾನಿಸಮ್, ಜರ್ಮನ್ ಅನುಭವದರ್ಶನ, ಪಾಶ್ಚಾತ್ಯ ಅನುಭವ ಮತ್ತು ಹಿಂದೂ ವೇದಾಂತ ಮೊದಲಾದ ಮೂಲವಾಹಿನಿಗಳತ್ತ ನಡೆದರು. ಮುಖ್ಯವಾಗಿ ಎಮರ್‍ಸನ್, ಥೊರೋ ಮತ್ತು ವ್ಹಿಟ್‍ಮನ್-ಇವರು ಉಪನಿಷತ್ತುಗಳು ಮತ್ತು ಗೀತೆಯ ವಿಚಾರಗಳಿಂದ ವಿಶೇಷವಾಗಿ ಪ್ರಭಾವಿತರಾದರು.

ಆತ್ಮಶೋಧನೆ[ಬದಲಾಯಿಸಿ]

ಯೂರೋಪಿನವರನ್ನು ಗೊತ್ತು ಗುರಿಯಿಲ್ಲದೆ ಅನುಕರಿಸುವುದನ್ನು ಬಿಟ್ಟು ಆತ್ಮಶೋಧನೆಯಿಂದ ತಮ್ಮ ವೈಯಕ್ತಿಕ ಸಾಮಥ್ರ್ಯ, ಗುರಿಗಳನ್ನು ಅರಿತುಕೊಳ್ಳುವಂತೆ ಎಮರ್‍ಸನ್ ತನ್ನ ದೇಶದವರನ್ನು ತನ್ನ ಪ್ರಬಂಧಗಳಲ್ಲಿ ಪ್ರೇರೇಪಿಸಿದ. ಅಮೆರಿಕನರಲ್ಲಿ ಬೆಳೆಯುತ್ತಿದ್ದ ಐಹಿಕಭೋಗಪ್ರವೃತ್ತಿಯ ವಿರುದ್ಧ ಪ್ರಬಲವಾದ ಪ್ರತಿಭಟನೆಯನ್ನು ಥೊರೋ ತೋರಿದ. ಅವನ ಜೀವನವೇ ಅದಕ್ಕೆ ಮೇಲ್ಪಂಕ್ತಿಯಾಯಿತು. ತನ್ನ ಕಾದಂಬರಿಗಳು ಮತ್ತು ಸಣ್ಣ ಕಥೆಗಳ ಮಾಲೆಯಲ್ಲಿ ಹಾತಾರ್ನ್ ಪ್ಯೂರಿಟನ್ನರ ಮನಸ್ಸಿನಲ್ಲೆದ್ದಿದ್ದ ಅಶಾಂತಿ, ಹೋರಾಟಗಳಿಗೆ ಜೀವಂತರೂಪಕೊಟ್ಟ. ಮೆಲ್‍ವಿಲ್ ಸಮುದ್ರದ ಮೇಲಿನ ಜೀವನವನ್ನು ನಿಷ್ಠುರ ವಾಸ್ತವಿಕತೆಯೊಡನೆಯೂ ರಂಜಕವಾದ ಮತ್ತು ಸಾಂಕೇತಿಕ ಅನುಸ್ವರದೊಡನೆಯೂ (ಓವರ್‍ಟೋನ್) ನಿರೂಪಿಸಿದ. ಎಮರ್‍ಸನ್ನನ ಸಾಹಿತ್ಯದೃಷ್ಟಿಕೋನಕ್ಕೆ ಸ್ವಲ್ಪಮಟ್ಟಿಗೆ ವಿರೋಧವಾಗಿತ್ತು. ಪೋನ ದೃಷ್ಟಿಕೋನ; ಆದರೂ ತನ್ನ ಅವನ ಮತ್ತು ಅವನ ಪಂಥದೊಡನೆ ನಿಕಟಸಂಬಂಧ ಹೊಂದಿದ್ದಾನೆ. ಅವನ ಕಥೆಗಳಲ್ಲಿ ಕಂಡುಬರುವುದು ಭೀಕರತೆ ಮತ್ತು ವಿಚಿತ್ರಕಲ್ಪನೆಗಳ ಚಿತ್ರಣ. ಅವನ ಕಾವ್ಯ ವಿಚಾರಸರಣಿ ಮತ್ತು ಪದ್ಧತಿಗಳು ಫ್ರೆಂಚ್ ಪ್ರತೀಕಪಂಥದವರ ಮೇಲೆ ಪ್ರಬಲವಾದ ಪರಿಣಾಮವನ್ನುಂಟುಮಾಡಿದುವು. ಅಮೆರಿಕದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ಕವಿ ವ್ಹಿಟ್‍ಮನ್ ವಿಷಯದ ಆಯ್ಕೆಯಲ್ಲೂ ಶೈಲಿಯಲ್ಲೂ ಹೊಸ ಮಾರ್ಗವನ್ನೇ ತುಳಿದು, ನಾಡಿನ ಅತ್ಯಂತ ಶ್ರೇಷ್ಠ ಕವಿ ಎಂಬ ಖ್ಯಾತಿಗಳಿಸಿದ.

ಸಂಯುಕ್ತ ಸಂಸ್ಥಾನಗಳು[ಬದಲಾಯಿಸಿ]

ರಾಜಕೀಯ ಮತ್ತು ಸಾಮಾಜಿಕ ಚರಿತ್ರೆಯಲ್ಲಿ ಒಳಯುದ್ಧ (1861-65) ಎಂಥ ಪರಿಣಾಮಕಾರಿ ಘಟನೆಯೋ ಆಗಿನ ಸಾಹಿತ್ಯದಲ್ಲಾದ ಬದಲಾವಣೆಯೂ ಅಷ್ಟೇ ಪರಿಣಾಮಕಾರಿಯಾಗಿತ್ತು. ಒಳಯುದ್ಧದ ಮುಂದಿನ ವರ್ಷಗಳಲ್ಲಿ-ಮಾರ್ಕ್‍ಟ್ವೇನನ ಪ್ರಸಿದ್ದ ವರ್ಣನೆಯಂತೆ ಹೊರಹೊಳಪಿನ ಯುಗದಲ್ಲಿ (ದಿ ಗಿಲ್ಡೆಡ್ ಏಜ್) ರಾಜಕೀಯದಲ್ಲಿ ನೀತಿಭ್ರಷ್ಟ ಜೀವನ, ನಗರ ಜೀವನಕ್ಕೆ ಮತ್ತು ಯಾಂತ್ರಿಕ ಸಾಧನಗಳ ವೃದ್ದಿಗೆ ದಾರಿಮಾಡಿಕೊಟ್ಟ ವೈಜ್ಞಾನಿಕ ಮತ್ತು ಕೈಗಾರಿಕ ಮುನ್ನಡೆ ವಲಸೆ ಬಂದವರ ಸಂಖ್ಯೆ ಹೆಚ್ಚಿದಂತೆ ಜನರು ಪಶ್ಚಿಮದ ಪ್ರಾಂತ್ಯಗಳನ್ನು ಆಕ್ರಮಿಸಿದುದು, ಅದರ ಪರಿಣಾಮವಾಗಿ ಎಲ್ಲೆಗಳು ಮಾಯವಾದದ್ದು ಮತ್ತು ಇಂಥ ಇತರ ಘಟನೆಗಳು, ಆ ಕಾಲದ ಮುಖ್ಯ ಮನೋವೃತ್ತಿಯಲ್ಲಿ ಪರಿಣಾಮಕಾರಿ ಪರಿವರ್ತನೆಯನ್ನುಂಟು ಮಾಡಿದವು ಮತ್ತು ಆ ಪರಿವರ್ತನೆ ಸಾಹಿತ್ಯಕ್ಷೇತ್ರಕ್ಕೂ ಹರಡಿತು. ಭಾವನಾಪ್ರಧಾನ್ಯ ಕುಗ್ಗುತ್ತ ಬಂದಂತೆ ವ್ಯಾವಹಾರಿಕ ರೀತಿನೀತಿಗಳು ಬೆಳೆಯುತ್ತ ಹೋದವು. ಕಾದಂಬರಿಕ್ಷೇತ್ರ ವಿಸ್ತಾರಗೊಂಡಿತು. ಡಬ್ಲ್ಯು. ಡಿ. ಹವೆಲ್ಸನ್ ಕಾದಂಬರಿಗಳಿಗೆ ಸಮಾಜಸ್ಥಿತಿ ವಸ್ತುವಾಯಿತು. ಹೆನ್ರಿ ಜೇಮ್ಸ್ ವಾಸ್ತವಿಕ ಮನೋವಿಶ್ಲೇಷಣ ಕಾದಂಬರಿಗಳನ್ನು ಬರೆದು ಆಧುನಿಕ ಬ್ರಿಟಿಷ್ ಮತ್ತು ಅಮೆರಿಕನ್ ಕಾದಂಬರಿಕಾರರ ಮೇಲೆ ತುಂಬಾ ಪ್ರಭಾವ ಬೀರಿದ. ಸ್ಟಿಫನ್ ಕ್ರೇನ್, ಜ್ಯಾಕ್ ಲಂಡನ್ ಮತ್ತು ಫ್ರ್ಯಾಂಕ್ ನಾರಿಸ್‍ರ ಕೈಯಲ್ಲಿ ವಾಸ್ತವಿಕತೆ ಸ್ವಾಭಾವಿಕತಾವಾದವಾಗಿ ಬೆಳೆಯಿತು. ಮಾರ್ಕ್‍ಟ್ವೇನ್, ಹ್ಯಾಮಲಿನ್ ಗಾರ್‍ಲಂಡ್, ಜೆ. ಡಬ್ಲ್ಯು. ಕೇಬಲ್, ಸಾರ ಓರ್ನ ಜೆವೆಟ್, ಎಡ್‍ವರ್ಡ್ ಎಗ್ಲಸ್ಟನ್, ಡಬ್ಲ್ಯು. ಜಿ. ಸಿಮ್ಸ, ಜೆ.ಸಿ. ಹ್ಯಾರಿಸ್, ಆರ್‍ಟೆಮಸ್ ವಾರ್ಡ್ ಮತ್ತು ಬ್ರೆಟ್‍ಹಾರ್ಟ್ ಇವರು ವಾಸ್ತವಿಕತೆಯ ಇನ್ನೊಂದು ಫಲವಾಗಿ, ಅನೇಕ ಕಡೆ ಹಾಸ್ಯಭರಿತವಾಗಿದ್ದ ಪ್ರಾದೇಶಿಕ ಕಥೆ ಕಾದಂಬರಿಗಳನ್ನು ಬೆಳೆಸಿದರು. ಈ ಕಾಲದ ಅತಿ ಗಣ್ಯಚರಿತ್ರಾಕಾರ ಮತ್ತು ಆತ್ಮವೃತ್ತರಚನಾಕಾರ ಹೆನ್ರಿ ಆ್ಯಡಮ್ಸ್, ಅತಿ ಮುಖ್ಯ ಕವಿ ಎಮಿಲಿ ಡಿಕಿನ್‍ಸನ್.

20ನೇ ಶತಮಾನ ಅಮೆರಿಕದ ಸಾಹಿತ್ಯ[ಬದಲಾಯಿಸಿ]

ಅಮೆರಿಕದ ಸಾಹಿತ್ಯ ಚರಿತ್ರೆಯಲ್ಲಿ (20)ನೆಯ ಶತಮಾನ ಅಸಾಧಾರಣ ಬೆಳೆವಣಿಗೆ ಮತ್ತು ವೈವಿಧ್ಯದ ಕಾಲ. ಅಮೆರಿಕನ್ ಸಾಹಿತ್ಯ ಜಾಗತಿಕ ಮನ್ನಣೆಯನ್ನು ಪಡೆದುದೂ ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನ ಗಳಿಸಿದ ಆರು ಮಂದಿಯನ್ನು ನೀಡಿದುದೂ ಈ ಅವಧಿಯಲ್ಲಿಯೇ. ಈ ಶತಮಾನದ ಪ್ರಥಮ ದಶಕ ಕಾವ್ಯದ ಗಮನಾರ್ಹ ವಿಕಸನವನ್ನು ಕಂಡಿತು ; ಹಾರ್ನೆಟ್ ಮನ್ರೊ ಸಂಪಾದಿಸುತ್ತಿದ್ದ ಎ ಮ್ಯಾಗಜೀನ್ ಆಫ್ ವರ್ಸ್‍ನಂತೆ ಕೆಲವೊಮ್ಮೆ ಕಾವ್ಯಕ್ಕೇ ಮುಡಿಪಾದ ಹೊಸ ಪತ್ರಿಕೆಗಳ ಬೆಳವಣಿಗೆಯೂ ಇದಕ್ಕೆ ಇತ್ತ ನೆರವೂ ಅಲ್ಪವಲ್ಲ. ಷಿಕಾಗೊ ಕವಿಗಳಾದ ಕಾರ್ಲ್ ಸ್ಯಾಂಡ್‍ಬರ್ಗ್, ವೇಚಲ್‍ಲಿನ್‍ಡ್ಸೆ ಮತ್ತು ಎಡ್ಗರ್ ಲೀ ಮಾಸ್ಟರ್ಸ್-ಇವರ ಯಶಸ್ಸು ಅಮೆರಿಕದ ಸಾಹಿತ್ಯ ರಾಷ್ಟ್ರೀಯ ತಳಹದಿಯೊಂದನ್ನು ಬೆಳೆಸಿಕೊಳ್ಳುತ್ತಲಿತ್ತೆಂಬುದನ್ನು ತೋರಿಸಿಕೊಟ್ಟಿತು. ಆದರೆ ಹಳೆಯ ನ್ಯೂ ಇಂಗ್ಲೆಂಡ್ ಸಂಪ್ರದಾಯ ಇನ್ನೂ ಪ್ರಬಲವೂ ಸತ್ತ್ವಯುತವೂ ಆಗಿದ್ದಿತೆಂಬುದನ್ನು ರಾಬರ್ಟ್ ಫ್ರಾಸ್ಟ್ ಮತ್ತು ಇ.ಎ. ರಾಬಿನ್‍ಸನ್‍ರ ಕೃತಿಗಳು ಸೂಚಿಸಿದುವು.

ಕೋಲಾಹಲದ (20) ನೆಯ ದಶಕದಲ್ಲಿ ಸುಲಭದ ಹಣ, ಕಳ್ಳಬಟ್ಟಿ ಮತ್ತು ಜಾeóï ಸಂಗೀತದ ಯುಗದಲ್ಲಿ-ಜನತೆಯ ಅಂತಸ್ಸಾಕ್ಷಿಯಾದ ಸಾಹಿತಿ ಅಮೆರಿಕದಲ್ಲಿನ ಆ ಯುಗದ ಐಹಿಕ ಭೋಗಪ್ರವೃತ್ತಿಯನ್ನು ಹೆಚ್ಚುಹೆಚ್ಚಾಗಿ ಟೀಕಿಸಲಾರಂಭಿಸಿದ. ಸಿಂಕ್ಲೇರ್ ಲೆವಿಸ್‍ನ ಕಾದಂಬರಿಗಳು ಇದಕ್ಕೆ ಒಳ್ಳೆಯ ನಿದರ್ಶನ. ಗರ್‍ಟ್ರೂಡ್ ಸ್ಟೀನ್, ಟಿ.ಎಸ್. ಎಲಿಯೆಟ್, ಎಜû್ರ ಪೌಂಡ್ ಮತ್ತು ಹೆಮಿಂಗ್‍ವೆಯಂಥ ಅಮೆರಿಕನ್ ಬರೆಹಗಾರರು ತಮ್ಮ ಯುಗದ ಈ ಅನೈತಿಕ ಮನೋಧರ್ಮವನ್ನು ವಿರೋಧಿಸಿ ಸ್ವಇಚ್ಛೆಯಿಂದ ತಮ್ಮ ಅಮೆರಿಕದ ಪೌರತ್ವವನ್ನು ತ್ಯಜಿಸಿದರು. ಈ ಪರಿತ್ಯಾಗ ಎಲಿಯಟ್ ನ್, ಪೌಂಡ್, ಕಮಿಂಗ್ಸ್, ಮೇರಿಅಮೂರ್ ಮತ್ತು ವಾಲೆಸ್ ಸ್ಟೀವನ್ಸ್‍ರ ಕೃತಿಗಳಲ್ಲಿನ ಕಾವ್ಯ ಜಟಿಲತೆಗೆ ಅಸ್ಪಷ್ಟತೆಗೆ ಕಾರಣವಾಯಿತು. ನಾಟಕದಲ್ಲಿ ನವೋದಯವಾಯಿತು; ಪರಿಣಾಮಕಾರಿಯಾಗಿ ಪ್ಯೂರಿಟ್‍ನ ಧರ್ಮಜ್ಞಾನದ ಆಳವನ್ನು ಯಶಸ್ವಿಯಾಗಿ ಶೋಧಿಸಿ ನೋಡಿದ ಮತ್ತು ನಾಟಕತಂತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಪ್ರಥಮ ಅಮೆರಿಕನ್ ನಾಟಕಕಾರ ಯೂಜೀನ್ ಒನೀಲ್.

ವಾಲ್‍ಸ್ಟ್ರೀಟ್ ಕುಸಿತದ ತರುವಾಯ ಬಂದ ಮುಗ್ಗಟ್ಟಿನ ಅವಧಿಯಲ್ಲಿ (1929-1941) ಬೆಳೆಯುತ್ತಿದ್ದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯ ವಿಶಿಷ್ಟಧ್ವನಿ ಆರ್ಚಿಬಾಲ್ಡ್ ಮೆಕ್‍ಲೀಷನ ಕಾವ್ಯದಲ್ಲಿ ಮತ್ತು ಸ್ಟೀನ್‍ಬೆಕ್‍ನ ಕೆಲವು ಕಾದಂಬರಿಗಳಲ್ಲಿ ಕೇಳಿಬಂತು ; ಸ್ಟೀನ್‍ಬೆಕ್ ಸಹಾನುಭೂತಿಯುತವೂ ಹಾಸ್ಯಮಿಶ್ರಣವೂ ಆದ ತನ್ನ ನಿರೂಪಣೆಯಲ್ಲಿ ಕ್ಯಾಲಿಫೋರ್ನಿಯದ ಗ್ರಾಮೀಣ ಜೀವನದ ಪ್ರಾದೇಶಿಕ ಕಥೆಯ ಸಂಪ್ರದಾಯವನ್ನು ಮುಂದುವರಿಸಿದ. ಅಜ್ಞಾತ ದಕ್ಷಿಣದ ಮನೋಧರ್ಮವನ್ನೂ ಶೋಧಿಸಲೆಳೆಸಿದ ವಿಲಿಯಮ್ ಫಾಕ್‍ನರ್. ಪ್ರಾದೇಶಿಕ ಸಂಪ್ರದಾಯದ ಇನ್ನೊಬ್ಬ ಖ್ಯಾತ ಲೇಖಕ ; ವಿಲ್ಲ ಕ್ಯಾಥರ್, ಎಲೆನ್ ಗ್ಲ್ಯಾಸ್‍ಗೊ, ಓಲ್ ರೋಲ್‍ವಾಗ್, ವಿಲಿಯಮ್ ಸರಾಯನ್, ಎರ್‍ಸ್ಕೀನ್ ಕಾಲ್ಡ್‍ವೆಲ್, ಯುಡೋರ ವೆಲ್‍ಟಿ ಮತ್ತು ಆರ್. ಪಿ. ವಾರೆನ್‍ರಂಥ ಬರೆಹಗಾರರು ಈ ಸಂಪ್ರದಾಯಕ್ಕೆ ವೈವಿಧ್ಯವನ್ನು ತಂದರು. ವಾಸ್ತವಿಕ ಮತ್ತು ಸ್ವಾಭಾವಿಕ ಪಂಥಗಳನ್ನು ಎಡಿತ್ ವ್ಹಾರ್‍ಟನ್ ಹೆಮಿಂಗ್‍ವೇ ಬೆಳೆಸಿದರು. ಹೆಮಿಂಗ್‍ವೇ ತನ್ನ ನಿರಲಂಕೃತ ಅಡಕವಾದ, ಬಲಿಷ್ಠ ಗದ್ಯಶೈಲಿಯಿಂದ ಕಥನ ತಂತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ. ಟಾಮಸ್ ವುಲ್ಫ್ ಮನಃಪ್ರವೃತ್ತಿಗಳನ್ನು ಸಮರ್ಥತೆಯಿಂದ ತನ್ನ ಕಾದಂಬರಿಗಳಲ್ಲಿ ನಿರೂಪಿಸಿದ.

(20)ನೆಯ ಶತಮಾನದ ಪೂವಾರ್ಧದಲ್ಲಿ ನಡೆಸಿದ ಪ್ರಯೋಗಗಳನ್ನು ರಕ್ತಗತ ಮಾಡಿಕೊಂಡು ಸಮನ್ವಯಗೊಳಿಸುವ ಮತ್ತು ಬಲಗೊಳಿಸುವ ಕೆಲಸ ಎರಡನೆಯ ಮಹಾಯುದ್ಧದ ಅನಂತರ ನಡೆಯಿತು. ಜಾಕ್ ಕೆರೂಅಕ್, ನಾರ್‍ಮನ್ ಮೇಲರ್ ಮತ್ತು ಅಲನ್ ಗಿನ್ಸ್‍ಬರ್ಗ್‍ರು ಮುಂದಾಳುಗಳಾಗಿದ್ದ 'ಬೀಟ್ ಪೀಳಿಗೆಯ ಲೇಖಕರು ಯುದ್ಧಾನಂತರದ ಭ್ರಾಂತಿರಹಿತಮನೋಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರೂಪಿಸಿದರುರಾಲ್ಫ್ ಎಲಿನ್‍ಸನ್ ಮತ್ತು ಜೇಮ್ಸ್‍ಬಾಲ್ಡ್‍ವಿನ್‍ರಂಥ ನೀಗ್ರೊ ಬರೆಹಗಾರರ ಉದಯ ಅಮೆರಿಕನ್ ನೀಗ್ರೊಗಳಲ್ಲಿ ಬೆಳೆಯುತ್ತಿರುವ ಸಾಂಸ್ಕøತಿಕ ಪರಿಪಕ್ವತೆಯ ಚಿಹ್ನೆಯಾಗಿದೆ.ಜಾನ್ ಒಹಾರ, ಹರ್‍ಮನ್ ವೌಕ್, ಅರ್‍ವಿನ್ ಷಾ, ಜೇಮ್ಸ್ ಜೋನ್ಸ್, ಸಾಲ್‍ಬೆಲೊ ಮತ್ತು ಜೆ. ಡಿ. ಸ್ಯಾಲಿಂಗರ್ ಇವರು ಈಚಿನ ಪ್ರಮುಖ ಕಾದಂಬರಿಕಾರರಲ್ಲಿ ಕೆಲವರು. ಟೆನೆಸಿ ವಿಲಿಯಮ್ಸ್ ಮತ್ತಿ ಆರ್ಥರ್ ಮಿಲರ್ ಪ್ರಮುಖ ನಾಟಕಕಾರರು. ಕೆನೆತ್ ಪ್ಯಾಜಿನ್, ಡೆಲಮೋರ್ ಷ್ವಾರ್ಟಜ್, ಕಾರ್ಲ್ ಷ್ಯಾಪ್ರಿಯೊ, ರ್ಯಾನ್‍ಡಾಲ್ ಜಾರೆಲ್, ಪೀಟರ್ ವೀರೆಕ್ ಮತ್ತು ರಾಬರ್ಟ್ ಲವೆಲ್ ತರುಣಕವಿಗಳಲ್ಲಿ ಕೆಲವರು. ಕಳೆದ ಹತ್ತು ವರ್ಷಗಳಲ್ಲಿ ಗಮನ ಸೆಳೆಯುವಂಥ ಕೃತಿರಚನೆ ಮಾಡಿರುವವರಲ್ಲಿ ಫಿಲಿಪ್ ಬೂತ್, ಡಬ್ಲ್ಯು. ಡಿ. ಸ್ನಾಡ್‍ಗ್ರ್ಯಾಸ್ ಮತ್ತು ಗಾಲ್‍ವೆ ಕಿನಲ್ ಸೇರಿದ್ದಾರೆ.


ಮೆರಿಕದ ಮುಖ್ಯ ವಿಮರ್ಶಾತ್ಮಕ ಪಂಥಗಳೆಂದರೆ-ಜೆ. ಜಿ. ಹುನೆಕರ್, ಜೆ. ಇ. ಸ್ಪಿನ್‍ಗಾರ್ನ್ ಮತ್ತು ಎಚ್. ಎಲ್. ಮೆನ್‍ಕಿನ್ (ಪ್ರತಿಯೊಬ್ಬರೂ ತಮ್ಮ ವಿಶಿಷ್ಟರೀತಿಯಲ್ಲಿ) ಪ್ರತಿನಿಧಿಸುವ ಸಮಷ್ಟಿ ಪರಿಣಾಮ ( Imಠಿಡಿessioಟಿisಣiಛಿ Sಛಿhooಟ) ಪಂಥ ; ಪಿ.ಇ.ಮೋರ್, ಇರ್ವಿಂಗ್ ಬ್ಯಾಬಿಟ್, ಎಸ್.ಪಿ.ಷರ್‍ಮನ್ ಮುಂತಾದವರನ್ನೊಳಗೊಂಡ ನವೀನ ಮಾನವಹಿತ ದಾರ್ಶನಿಕರು ಸಾಮಾಜಿಕ, ದಾರ್ಶನಿಕ ಮತ್ತು ಮನೋವಿಶ್ಲೇಷಣಾತ್ಮಕ ವಿಮರ್ಶೆಕಾರರು (ಉದಾಹರಣೆಗೆ, ಅನುಕ್ರಮವಾಗಿ ವಿ.ಎಲ್.ಪ್ಯಾರಿಂಗ್‍ಟನ್, ಕೆನೆತ್ ಬರ್ಕ್, ವ್ಯಾನ್‍ವಿಕ್ ಬ್ರೂಕ್ಸ್, ಮೂಲಪಾಠದ ಸಮಗ್ರ ಸೂಕ್ಷ್ಮಪರೀಕ್ಷೆಗೆ ಪ್ರಾಧಾನ್ಯ ಕೊಡಬೇಕೆನ್ನುವ ಜೆ.ಸಿ.ರ್ಯಾನ್‍ಸಂ, ಅ್ಯಲನ್‍ಟೇಟ್, ಆರ್. ಪಿ. ಬ್ಲ್ಯಾಕ್‍ಮರ್, ವೈವರ್ ವಿಂಟರ್ಸ್, ಆರ್. ಪಿ. ವಾರ್ನ್ ಮತ್ತು ಕ್ಲಿಯಾನ್ತ್ ಬ್ರೂಕ್ಸ್. ಈ ಪಂಥವು ಈಚಿನ ಬ್ರಿಟಿಷ್ ಸಾಹಿತ್ಯ ವಿಮರ್ಶೆಯ ಮೇಲೆ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದೆ. ಹೀಗೆ ಇಂಗ್ಲಿಷ್ ಸಾಹಿತ್ಯದ ಶಾಖೆಯಾಗಿ ಪ್ರಾರಂಭವಾದ ಅಮೆರಿಕನ್ ಸಾಹಿತ್ಯ ಈಗ, ಆಧುನಿಕ ಜಗತ್ತಿನ ಪ್ರಮುಖ ಸಾಹಿತ್ಯಗಳ ಪಂಕ್ತಿಯಲ್ಲಿ ತನ್ನ ಯೋಗ್ಯಸ್ಥಾನವನ್ನು ಗಳಿಸಿದ, ಪೂರ್ಣವಾಗಿ ವಿಕಸಿತವಾದ ಸ್ವತಂತ್ರ ರಾಷ್ಟ್ರೀಯ ಸಾಹಿತ್ಯವಾಗಿ ಬೆಳೆದಿದೆ.

(ಎಂ.ಕೆ.ಎನ್.)


ಉಲ್ಲೇಖಗಳು[ಬದಲಾಯಿಸಿ]