ಅಮೆರಿಕಗಳು

ವಿಕಿಪೀಡಿಯ ಇಂದ
Jump to navigation Jump to search

ಅಮೆರಿಕಗಳು : ಪಶ್ಚಿಮಗೋಳಾರ್ಧದಲ್ಲಿರುವ ಉತ್ತರ ಅಮೆರಿಕ, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ ಪ್ರದೇಶಗಳನ್ನು ಒಟ್ಟಾಗಿ ಈ ಹೆಸರಿನಿಂದ ಕರೆಯಲಾಗಿದೆ. ಉತ್ತರದಲ್ಲಿ ಕೆನಡದ ಬೂಥಿಯ ಪರ್ಯಾಯಪ್ರಸ್ಥಭೂಮಿಯಿಂದ ದಕ್ಷಿಣದಲ್ಲಿ ಚಿಲಿಯ ಫ್ರೋವಾರ್ಡ್ ಭೂಶಿರದವರೆಗೆ ಉತ್ತರ-ದಕ್ಷಿಣವಾಗಿ ೧೪,೦೦೦ ಕಿಮೀ ಉದ್ದವಾಗಿದೆ. ಈ ಭೂರಾಶಿಯ ವಿಶೇಷವಾದ ಆಕಾರವೆಂದರೆ ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣಕ್ಕೆ ಹೋದಂತೆಲ್ಲಾ ಕಿರಿದಾಗುವುದು. ಅಮೆರಿಗೊ ವೆಸ್ಪೂಚಿಯಿಂದ ಅಮೆರಿಕ ಎಂಬ ಹೆಸರು ಬಂದಿದೆ. ಅಮೆರಿಕ ಮತ್ತು ಅಮೆರಿಕನ್ ಎಂಬ ಶಬ್ದಗಳನ್ನು ಕೇವಲ ಅಮೆರಿಕದ ಸಂಯುಕ್ತ್ತ ಸಂಸ್ಥಾನಗಳನ್ನು ಉದ್ದೇಶಿಸಿ ಪ್ರಯೋಗಿಸುವುದೂ ಉಂಟು. ಮಾರ್ಟನ್ ವಾಲ್ಡ್ ನೀ ಮುಲ್ಲರ್ ಈ ಶಬ್ದªನ್ನು ಮೊದಲ ಬಾರಿಗೆ ಉಪಯೋಗಿಸಿದ. ಕ್ರಿಸ್ಟೋಫರ್ ಕೊಲಂಬಸ್ ೧೪೯೨ರಲ್ಲಿ ಸಮುದ್ರಯಾನ ಮಾಡಿ ಭಾರತ ದೇಶಕ್ಕೆ ಹೊಸ ಹಾದಿ ಕಂಡುಹಿಡಿದನೆಂದು ತಪ್ಪಾಗಿ ತಿಳಿದ ದೇಶವೇ ಈಗಿನ ಅಮೆರಿಕ ಖಂಡಗಳು. ದಕ್ಷಿಣ ಅಮೆರಿಕದ ಉತ್ತರ ಭಾಗದ ಮೇಲೆ ಸಮಭಾಜಕವೃ ತ್ತ ಹಾದು ಹೋಗುತ್ತದೆ. ಅದರ ದಕ್ಷಿಣದ ಚೂಪಾದ ತುದಿ ಕೇಪ್ ಹಾರನ್ನ ನ್ನು ಮುಟ್ಟುತ್ತವೆ. ಆ ಪ್ರದೇಶ ಹೆಚ್ಚು ಶೈತ್ಯಭರಿತವಾಗಿ ಹಿಮಗಡ್ಡೆಯಿಂದ ಕೂಡಿದೆ. ಸಂಸ್ಕೃತಿ, ಭಾಷೆ, ಆಚಾರವಿಚಾರಗಳಲ್ಲಿ ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೆರಿಕಗಳಿಗೆ ಹೆಚ್ಚಿನ ವ್ಯತ್ಯಾಸವಿದೆ. ಅಮೆರಿಕ ಖಂಡಗಳನ್ನು ಎರಡು ವಿಭಾಗಗಳಾಗಿಮಾಡಿ ಒಂದನ್ನು ಲ್ಯಾಟಿನ್ ಅಮೆರಿಕ ಎನ್ನುತ್ತಾರೆ. ಇದಕ್ಕೆ ಮೆಕ್ಸಿಕೊ, ಮಧ್ಯ ಅಮೆರಿಕ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಅಮೆರಿಕಗಳು ಸೇರುತ್ತವೆ. ಇನ್ನೊಂದನ್ನು ಆಂಗ್ಲೋ ಅಮೆರಿಕ ಎನ್ನುತ್ತಾರೆ. ಅದಕ್ಕೆ ಕೆನಡ, ಸಂಯುಕ್ತ್ತ ಸಂಸ್ಥಾನಗಳು ಸೇರುತ್ತವೆ. ಅಮೆರಿಕಕ್ಕೆ ಸಂಬಂಧಪಟ್ಟ್ಟ ಲೇಖನಗಳ ಹಂಚಿಕೆ ಈ ರೀತಿಯಿದೆ: ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಎಂಬ ಲೇಖನಗಳಲ್ಲಿ ಒಟ್ಟಾರೆ ಸಮೀಕ್ಷೆ ಇದೆ. ಪ್ರತ್ಯೇಕವಾಗಿಯೆ ಮೇಲ್ಮೈಲಕ್ಷಣ, ಖನಿಜ ಸಂಪತ್ತು, ಭೌಗೋಳಿಕ ವೈಶಿಷ್ಟ್ಯಗಳು ಅದೇ ಲೇಖನದಲ್ಲಿವೆ. ಪ್ರಾಂತೀಯವಾದ ಇನ್ನೂ ಹೆಚ್ಚಿನ ವಿವರಗಳು ಅಲಾಸ್ಕ, ಕೆನಡ, ಸಂಯುಕ್ತ್ತ ಸಂಸ್ಥಾನಗಳು ಇತ್ಯಾದಿ ಶೀರ್ಷಿಕೆಗಳಲ್ಲಿವೆ. ಅಮೆರಿಕದ ಎಂಬ ಶಿರೋನಾಮೆಗೆ ಅಂಟಿದಂತೆ ಅಲ್ಲಿನ ಇತಿಹಾಸ, ಸ್ವಾತಂತ್ರ್ಯ ಸಾಹಿತ್ಯ ಮೊದಲಾದ ವಿಷಯಗಳು ಬಂದಿವೆ. ಮಾಯ, ಆಜ್ಬೆಕ್, ಇಂಕ ಇತ್ಯಾದಿ ಸಂಸ್ಕೃತಿಗಳಿಗೆ ಸಂಬಂಧಪಟ್ಟ್ಟ ಲೇಖನಗಳು ಆಯಾ ಶೀರ್ಷಿಕೆಗಳಲ್ಲಿವೆ.