ಅಮಿರ್ ಸಿಂಗ್
ಅಮಿರ್ ಸಿಂಗ್ ೨೦೦೧ರ ಅರ್ಜುನ ಪ್ರಶಸ್ತಿ ಪಡೆದ ಭಾರತದ ವಾಲಿಬಾಲ್ ಆಟಗಾರ. [೧] ಹರ್ಯಾಣದ ರೋಹ್ಟಕ್ ಎಂಬ ಕುಗ್ರಾಮದಿಂದ ಅಂತರ್ ರಾಷ್ಟ್ರೀಯ ಮಟ್ಟದವರೆಗೆ ಬೆಳೆದ ಕ್ರೀಡಾಪಟು.
ಜನನ
[ಬದಲಾಯಿಸಿ]ಹರ್ಯಾಣದ ರೋಹ್ಟಕ್ ಗ್ರಾಮದಲ್ಲಿ ಹವ್ವಸಿಂಗ್ ರಿಗೆ ಜನಿಸಿದ ಅಮಿರ್ ಸಿಂಗ್ ಬಾಲ್ಯದಲ್ಲಿ ಬಣ್ಣ ಕುರುಡು ರೋಗಕ್ಕೆ ತುತ್ತಾದರು.[೨] ವಿಜೇಂದ್ರ ಸಿಂಗ್ ಮತ್ತು ಮೋಹನ್ ಸಿಂಗ್ ನಾಗ್ರೇತ್ ರ ಒಡನಾಟದಿಂದ ಕ್ರೀಡಾ ಹಾಸ್ಟೆಲ್ ಸೇರಲು ಅನುವಾಯಿತು.
ಕ್ರೀಡಾ ಬದುಕು
[ಬದಲಾಯಿಸಿ]೧೯೯೬ರಲ್ಲಿ ಮೊದಲ ಬಾರಿ ಭಾರತ ವಾಲಿಬಾಲ್ ತಂಡಕ್ಕೆ ಸೇರ್ಪಡೆಯಾದ ಅಮೀರ್,ತಂಡದ ಜೊತೆ ಪಾಕಿಸ್ತಾನ ಪ್ರವಾಸ ಕೈಗೊಂಡರು. ಬಲತೋಳಿನ ನೋವಿನ ನಡುವೆಯೂ ಆಡಿದ ಅಮೀರ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕುಟುಂಬ
[ಬದಲಾಯಿಸಿ]ಮದುವೆಯಾಗಿ ೧೨ ವರ್ಷಗಳು ಕಳೆದ ನಂತರ ತಮ್ಮ ಹೆಂಡತಿಯನ್ನು ಕಳೆದುಕೊಂಡರು. ತಾಯಿ ಇಲ್ಲದ ಎರಡು ಮಕ್ಕಳನ್ನು ಹೇಗೆ ಸಾಕುವುದು ಎಂದು ಚಿಂತನೆಯಲ್ಲಿದ್ದರು. ತಾನು ತನ್ನ ಮಕ್ಕಳ ಜೊತೆ ಆಸ್ಟ್ರೇಲಿಯಾ ಹೋಗಲು ಸಿದ್ಧವಾಗಿದ್ದರು. ಒಮ್ಮೆ ಅವರ ಉದ್ಯಮ ಪಾಲುದಾರ ಅವರೊಂದಿಗೆ ಬುದ್ಧಿ ಮಾತುಗಳಾನ್ನು ಹೇಳಿದರು, ಒಂದು ದಿನ ಚಂಡೀಘರ್ ಪಂಚಕುಲ ಮತ್ತು ಜಿರಾಕ್ಪುರ್ ಹೈವೇಯಲ್ಲಿ ಹೋಟೆಲ್ ಮ್ಯಾಂಡರಿನ್ ಸ್ಥಾಪಿಸಿದರು. ೨೦೧೪ರಲ್ಲಿ ದೀಪಿಕಾ ಸಿಂಗ್‌ರವರನ್ನು ಕಂಡು ತನ್ನ ಮಕ್ಕಳಿಗೆ ಒಂದು ತಾಯಿಯಾಗಿ ತನ್ನ ಮಡದಿಯನ್ನು ಕಂಡುಹಿಡಿದರು.[೩]
ಸಾಧನೆಗಳು
[ಬದಲಾಯಿಸಿ]೧೯೯೮ರಲ್ಲಿ ಕಟಾರ್‌ನಲ್ಲಿ ನಡೆದ ಏಷ್ಯಾ ಚಾಂಪಿಯನ್‌ಷಿಪ್‌ನ ಕ್ವಾಟರ್ ಫ಼ೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಆಡಿದಾಗ, ಅಮಿರ್‌ರವರು ಉತ್ತಮವಾದ ಪ್ರದರ್ಶನವನ್ನು ತೋರಿಸಿದರು, ಆದರೂ ಭಾರತ ಸೆಮಿ ಫ಼ೈನಲ್ ತಲುಪಲಿಲ್ಲ. ಅಮಿರವರು ಮೊದಲ ಬಾರಿಗೆ ಆರು ತಿಂಗಳ ಕಾಲಕ್ಕೆ ಅಲ್ ಸದ್ ಎಂಬ ಕಟಾರ್‌ನ ಕ್ಲಬ್‌ನೊಂದಿಗೆ, ತಿಂಗಳಿಗೆ ೧.೨೫ ಲಕ್ಷ ರೂಪಾಯಿಗಳಂತೆ ಕಾಂಟ್ರಾಕ್ಟ್ ಸಹಿ ಮಾಡಿದರು. ಕೆಲವು ಕಾರಣಗಳಿಂದ ಇವರು ಆಡುತ್ತಿದ್ದ ಎಚ್.ಎಸ್.ಐ.ಡಿ.ಸೀ. (ಹರಿಯಾಣ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೋರೇಶನ್) ತಂಡವನ್ನು ಬಿಟ್ಟು ಬಂದರು. ತನ್ನ ಇಡೀ ಜೀವನ ಸಂಪಾದನೆಯಲ್ಲಿ ಜಮೀನು ಖರೀದಿ ಮಾಡಿ ಹೋಟೆಲ್ ಉದ್ಯಮ ಆರಂಭಿಸಿದರು. ತಾವು ಆರಂಭಿಸಿದ ಹೋಟೆಲ್ ವ್ಯಾಪಾರದಲ್ಲಿ ಹಲವಾರು ಕಷ್ಟಗಳನ್ನು ನೋಡಿದರು. ೨೦೦೧ರಲ್ಲಿ ಭಾರತ ಸರ್ಕಾರ ಅಮೀರ್ ಸಿಂಗ್ ರಿಗೆ ಅರ್ಜುನ ಪ್ರಶಸ್ತಿ ಕೊಟ್ಟು ಗೌರವಿಸಿತು. [೪]
ಉಲ್ಲೇಖಗಳು
[ಬದಲಾಯಿಸಿ]- ↑ http://www.mindmapcharts.com/index.php/gk/sports/564-arjun-awardees-in-volleyball
- ↑ http://mysportshero.blogspot.com/2014/12/amir-singh-inspirational-sportsman-turn.html
- ↑ https://www.hindustantimes.com/chandigarh/chandigarh-cheers-as-india-decimates-south-africa/story-WmfggQrr0FbiiJDArJS0mM.html
- ↑ http://awardsandwinners.com/winner/?name=amir-singh&mid=/m/0z3zmdd