ಅಭಿನಯ ತರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಅಭಿನಯ ತರಂಗ ರಂಗಶಾಲೆಯನ್ನು ಪ್ರಸಿದ್ಧ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ, ಆಕಾಶವಾಣಿ ಈರಣ್ಣನೆಂದೇ ಪ್ರಸಿದ್ಧರಾಗಿದ್ದ ಎ. ಎಸ್. ಮೂರ್ತಿ ಅವರು ಬೆಂಗಳೂರಿನ ಹನುಮಂತನಗರದಲ್ಲಿ ೧೯೬೪ರಲ್ಲಿ ಸ್ಥಾಪಿಸಿದರು. ಸಾಹಿತ್ಯ, ಸಂಸ್ಕೃತಿ ಅಧ್ಯಯನಕ್ಕಾಗಿ ಈ ರಂಗಶಾಲೆಯನ್ನು ಪ್ರಾರಂಭಿಸಲಾಯಿತು. ಈ ಸಂಸ್ಥೆಯಿಂದ ನಾಟಕರಂಗ, ಟಿ.ವಿ.ಗೆ ಹಲವಾರು ಕಲಾವಿದರ ಕೊಡುಗೆ ದೊರೆತಿದೆ.