ಅಬ್ರಹಾಂ ಆರ್ಡೆನ್ ಬ್ರಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಬ್ರಹಾಂ ಆರ್ಡೆನ್ ಬ್ರಿಲ್
ಅಬ್ರಹಾಂ
Born
ಅಬ್ರಹಾಂ ಆರ್ಡೆನ್ ಬ್ರಿಲ್

೧೨ ಅಕ್ಟೋಬರ್ ೧೮೭೪
ಆಸ್ಟ್ರಿಯ
Nationalityಅಮೇರಿಕ

ಆಸ್ಟ್ರಿಯಾದಲ್ಲಿ ಹುಟ್ಟಿ ಅಮೇರಿಕದಲ್ಲಿ ಮನೋವೈದ್ಯರಾಗಿದ್ದ ಅಬ್ರಹಾಂ ಆರ್ಡೆನ್ ಬ್ರಿಲ್‌ರವರು ೧೮೭೪ರ ಅಕ್ಟೋಬರ್ ೧೨ರಂದು ಆಸ್ಟ್ರಿಯಾದ ಗೆಲಿಸಿಯಾದ ಕರಿಕ್‌ಝುಗಾದಲ್ಲಿ ಜನಿಸಿದರು. ಬ್ರಿಲ್‌ರವರು ಕೇವಲ ೧೩ನೆಯ ವಯಸ್ಸಿನಲ್ಲಿಯೇ ಅಮೇರಿಕಕ್ಕೆ ಬಂದರು. ನಂತರ ಸ್ವಿಟ್ಝರ್‌ಲೆಂಡಿನ ಝೂರಿಚ್‌ನಲ್ಲಿ ಪ್ರಸಿದ್ಧ ಮನೋವಿಜ್ಞಾನಿ ಕಾರ್ಲ್.[೧] ಜಂಗ್‌ರವರ (೧೮೬೫-೧೯೬೧) ಜೊತೆ ಮನೋವಿಜ್ಞಾನದ ಬಗ್ಗೆ ಅಧ್ಯಯನ ನಡೆಸಿ ಮತ್ತೆ ೧೯೦೮ರಲ್ಲಿ ಅಮೇರಿಕಕ್ಕೆ ವಾಪಸ್ಸಾದರು. ಮನೋವಿಶ್ಲೇಷಣೆಯ ಬಗ್ಗೆ ಅತ್ಯಂತ ಪ್ರಭಾವೀ ಮಾರ್ಗದರ್ಶಕರಾಗಿದ್ದ ಆಸ್ಟ್ರಿಯಾದ ಇನ್ನೊಬ್ಬ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್‌ರವರ (೧೮೫೬-೧೯೩೯) ಮತ್ತು ಕಾರ್ಲ್ ಜಂಗ್‌ರವರುಗಳ ಉದ್ಗಂಥಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದವರಲ್ಲಿ ಬ್ರಿಲ್ ರವರು ಮೊದಲಿಗರಾಗಿದ್ದಾರೆ. ಸ್ವಾರಸ್ಯ ಸಂಗತಿಯೆಂದರೆ ಸಿಗರೇಟ್‌ಗಳು ಮಹಿಳೆಯರ ’ಸ್ವಾತಂತ್ರ ಜ್ಯೋತಿ’ ಎಂಬುದಾಗಿ ವಿವರಿಸಿದ ಬ್ರಿಲ್‌ರವರು ಅದರ ಸೇವನೆ ಪುರಷರಿಗೇ ಮೀಸಲಾದದ್ದಲ್ಲ ಎಂಬುದಾಗಿ ಪ್ರಚಾರ ಮಾಡಿದರು. ಬ್ರಿಲ್‌ರವರು ೧೯೪೮ರ ಮಾರ್ಚ್ ೨ರಂದು ನ್ಯೂಯಾರ್ಕ್ ಸಿಟಿಯಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-02-03. Retrieved 2016-04-19.