ಅಬ್ಬೆ ಚಾರ್ಲ್ಸ್ ಮೈಕೆಲ್ ಎಪೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಬ್ಬೆ ಚಾರ್ಲ್ಸ್ ಮೈಕೆಲ್ ಎಪೀ

ಜೀವನ[ಬದಲಾಯಿಸಿ]

ಅಬ್ಬೆ ಚಾರ್ಲ್ಸ್ ಮೈಕೆಲ್ ಎಪೀ, ಸಾಂಕೇತಿಕ ಭಾಷೆಯ ಜನಕ. ಸಾಂಕೇತಿಕ ಭಾಷೆಯ ಮೂಲ ಸ್ವರೂಪವನ್ನು ಕಂಡುಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಂಕೇತಿಕ ಭಾಷೆ ಕಿವುಡರು ಮತ್ತು ಮೂಗರಿಗೆ ವರದಾನವಾಗಿ ಪರಿಣಮಿಸಿದೆ. ಅಬ್ಬೆ ಚಾರ್ಲ್ಸ್ ಮೈಕೆಲ್ ಎಪೀ ರವರು, ಕ್ರಿ.ಶ ೧೭೧೨ ರಲ್ಲಿ ಜನಿಸಿದರು. [೧]

ಸಾಧನೆ[ಬದಲಾಯಿಸಿ]

ಚಿಕ್ಕಂದಿನಿಂದಲೇ ಇವರು ಕಿವುಡರು ಹಾಗು ಮೂಗರ ಸಂಪರ್ಕ ಭಾಷೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದರು. ಸಾವಿರಾರು ವರ್ಷಗಳಿಂದ ಬೆಳೆದು ಬಂದಿದ್ದ ಸಂಕೇತ ಭಾಷೆಯನ್ನ ಕಲಿತ ಅಬ್ಬೆ, ಶಿಕ್ಷಣ ಹಾಗು ಸಂಪರ್ಕ ರಂಗದಲ್ಲಿ ಒಂದು ಹೊಸ ರೂಪ ನೀಡಿದರು. ಕಿವುಡರು ಮತ್ತು ಮೂಗರ ಭಾಷೆಯ ವಿಧಾನವನ್ನ ಅಬ್ಬೆ ಸಿಕಾರ್ಡ್ ಎಂಬ ವಿಜ್ಞಾನಿ ಮತ್ತಷ್ಟು ಅಭಿವೃದ್ಧಿ ಪಡಿಸಿದರು. ಅದರ ಫಲವಾಗಿ ಅಕ್ಷರ ಹಾಗು ಇಡೀ ಶಬ್ಧದ ಸಂಕೇತ ತಿಳಿಸುವಂತ ಸಂಹಿತೆ ರಚಿಸಲಾಯಿತು. [೨] ಅಬ್ಬೆ ಚಾರ್ಲ್ಸ್ ಮೈಕೆಲ್ ಎಪೀ ರವರು ೧೭೮೯ ರಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]