ವಿಷಯಕ್ಕೆ ಹೋಗು

ಅಬಲೂರ ಸೋಮೇಶ್ವರ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಊರಿನ ಪಮುಖ ಸಂಗತಿಯೆಂದರೆ, ಶ್ರೇಷ್ಟ ದಾರ್ಶನಿಕ, 'ಸರ್ವಜ್ಞನ-ಜನ್ಮಸ್ಥಳ'ವಾಗಿರುವುದು. ಸೋಮೇಶ್ವರ ದೇವಾಲಯಕ್ಕೂ ಪ್ರಸಿದ್ಧಿಯಾಗಿದೆ.'ಕಲ್ಯಾಣ ಚಾಲುಕ್ಯರ ಶೈಲಿ'ಯ ದೇವಸ್ಥಾನವನ್ನು ಕ್ರಿ. ಶ. ೧೧-೧೨ ನೆಯ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ,೩ 'ಗರ್ಭಗೃಹ ಅಂತರಾಳ', ಮತ್ತು ೪ 'ನವರಂಗ'ಗಳನ್ನು ಹೊಂದಿದೆ. 'ನವರಂಗ'ಕ್ಕೆ ಹೊಂದಿಕೊಂಡಂತೆ, ಕಕ್ಷಾಸನ'ವಿರುವ ಸಭಾಮಂಟಪವಿದೆ. ಇದಕ್ಕೆ ೩ ದಿಕ್ಕುಗಳಿಂದ ಪ್ರವೇಶದ್ವಾರಗಳಿವೆ.ನವರಂಗದ ಹೊರಭಾಗದ ಇಕ್ಕೆಲಗಳಲ್ಲಿ 'ಜಾಲರಂಧ್ರ'ಗಳಿವೆ.

ಅದರ ಪಟ್ಟಿಕೆಗಳಲ್ಲಿ 'ಏಕಾಂತ ರಾಮಯ್ಯನ ಪವಾಡ' ಮತ್ತು ಅವನ ಜೀವನದ ಘಟನಾವಳಿಗಳನ್ನು ತಿಳಿಸುವ 'ಉಬ್ಬು ಶಿಲ್ಪ'ಗಳನ್ನು ಕೆತ್ತಲಾಗಿದೆ. ಗರ್ಭಗೃಹದ ಬಾಗಿಲುವಾಡದ 'ಲಲಾಟ ಬಿಂಬ'ದಲ್ಲಿ 'ಹೆಗ್ಗೇರಿಕೆರೆ','ಗಜಲಕ್ಶ್ಮಿ', ಯ 'ಉಬ್ಬು ಕೆತ್ತನೆಯ ಶಿಲ್ಪ' ವೈಖರಿಯಿದೆ