ಅಪಾಯ ಅಂಚಿನಲ್ಲಿರುವ ʼIUCN ಕೆಂಪು ಪಟ್ಟಿʼಯಲ್ಲಿ ಹೆಸರಿಸಲಾದ ಕರ್ನಾಟಕದ ಹಕ್ಕಿಗಳು
ಗೋಚರ
ಅಪಾಯ ಅಂಚಿನಲ್ಲಿರುವ ʼIUCN ಕೆಂಪು ಪಟ್ಟಿʼಯಲ್ಲಿ ಹೆಸರಿಸಲಾದ ಕರ್ನಾಟಕದ ಹಕ್ಕಿಗಳು
[ಬದಲಾಯಿಸಿ]ಅಂತರರಾಷ್ಟ್ರೀಯ ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ (IUCN) ಅಪಾಯದ ಅಂಚಿನಲ್ಲಿರುವ ಸಸ್ಯ, ಪ್ರಾಣಿ, ಹಕ್ಕಿ, ಕೀಟ ಮುಂತಾದ ಜೀವಿಗಳ ʼಕೆಂಪು ಪಟ್ಟಿʼಯನ್ನು ಕಾಲಕಾಲಕ್ಕೆ ಪುನವಿರ್ಮರ್ಶಿಸಿ ಬಿಡುಗಡೆ ಮಾಡುತ್ತಿರುತ್ತದೆ[೧]. ಇದರಲ್ಲಿ ಸೇರಿಸಲ್ಪಟ್ಟ ಜೀವಿಗಳ ಪ್ರದೇಶವಾರು ಹಂಚಿಕೆ, ಸಾಂದ್ರತೆ, ಆವಾಸ ಸ್ಥಾನ, ಸಂರಕ್ಷಣಾ ವಿಧಾನಗಳನ್ನು ವಿಸ್ತೃತವಾಗಿ ವಿವರಿಸಲ್ಪಟ್ಟಿರುತ್ತದೆ. ಇದನ್ನು ಅನುಸರಿಸಿ ಆಯಾ ದೇಶಗಳು ತಮ್ಮಲ್ಲಿರುವ ಅಪಾಯಕ್ಕೊಳಗಾದ ಜೀವಿಗಳ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದರೆ ಅವನ್ನು ಕಾರ್ಯ ರೂಪಕ್ಕೆ ಇಳಿಸುವ ಕಠಿಣ ಕ್ರಮ ಏನೇನೂ ಸಾಲದಾಗಿದೆ. 2022ರ ಅಗಸ್ಟ್ ತಿಂಗಳಲ್ಲಿ ಕಂಡಂತೆ ಕರ್ನಾಟಕದ 58 ಪ್ರಭೇದದ ಹಕ್ಕಿಗಳು ಈ ಕೆಂಪು ಪಟ್ಟಿಯಲ್ಲಿವೆIUCN 2022. [೨]. ಇವುಗಳಲ್ಲಿ ಸ್ಥಳೀಯ ಹಕ್ಕಿಗಳು 31 ಹಾಗೂ ವಲಸೆ ಹಕ್ಕಿಗಳು 27.
Sl No | English Name | Scientific Name | IUCN Category | ಹಕ್ಕಿಯ ಹೆಸರು[೩] |
---|---|---|---|---|
1 | Great Indian Bustard | Ardeotis nigriceps | Critically Endangered | ಎರ್ಲಡ್ಡು |
2 | Red-headed Vulture | Sarcogyps calvus | Critically Endangered | ಕೆಂದೆಲೆ ರಣಹದ್ದು |
3 | White-rumped Vulture | Gyps bengalensis | Critically Endangered | ಬಿಳಿಬೆನ್ನಿನ ರಣಹದ್ದು |
4 | Indian Vulture | Gyps indicus | Critically Endangered | ನೀಳಕೊಕ್ಕಿನ ರಣಹದ್ದು |
5 | Lesser Florican | Sypheotides indicus | Critically Endangered | ನವಿಲಕ್ಕಿ |
6 | Black-bellied Tern | Sterna acuticauda | Endangered | ಕಪ್ಪು ಹೊಟ್ಟೆಯ ರೀವ |
7 | Egyptian Vulture | Neophron percnopterus | Endangered | ಬಿಳಿ ರಣಹದ್ದು |
8 | Banasura Laughingthrush | Montecincla jerdoni | Endangered | ಬೂದುಎದೆಯ ನಗೆಮಲ್ಲ |
9 | Nilgiri Sholakili | Sholicola major | Endangered | ಶೋಲಾ ನೊಣಹಿಡುಕ |
10 | River Tern | Sterna aurantia | Vulnerable | ರೀವ ಹಕ್ಕಿ |
11 | Indian Spotted Eagle | Clanga hastata | Vulnerable | ಸಣ್ಣಚುಕ್ಕೆಯ ಗಿಡುಗ |
12 | Tawny Eagle | Aquila rapax | Vulnerable | ಕಂದು ಗಿಡುಗ |
13 | Green Imperial Pigeon | Ducula aenea | Vulnerable | ಹಸಿರು ಮನಿಯಾಡಲು ಹಕ್ಕಿ |
14 | Nilgiri Wood Pigeon | Columba elphinstonii | Vulnerable | ನೀಲಗಿರಿ ಪಾರಿವಾಳ |
15 | Malabar Grey Hornbill | Ocyceros griseus | Vulnerable | ಮಲೆ ಮಂಗಟ್ಟೆ |
16 | Great Hornbill | Buceros bicornis | Vulnerable | ದಾಸ ಮಂಗಟ್ಟೆ |
17 | Broad-tailed Grassbird | Schoenicola platyura | Vulnerable | ಜೊಂಡು ಉಲಿಯಕ್ಕಿ |
18 | White-naped Tit | Machlolophus nuchalis | Vulnerable | ಬಿಳಿರೆಕ್ಕೆಯ ಚೇಕಡಿ |
19 | Great Thick-knee | Esacus recurvirostris | Near Threatened | ಕಲ್ಲು ಗೊರುವ |
20 | Painted Stork | Mycteria leucocephala | Near Threatened | ಬಣ್ಣದ ಕೊಕ್ಕರೆ |
21 | Oriental Darter | Anhinga melanogaster | Near Threatened | ಹಾವಕ್ಕಿ |
22 | Spot-billed Pelican | Pelecanus philippensis | Near Threatened | ಹೆಜ್ಜಾರ್ಲೆ |
23 | Black-headed Ibis | Threskiornis melanocephalus | Near Threatened | ಬೆಳಿ ಕೆಂಬರಲು |
24 | Rufous-bellied Eagle | Lophotriorchis kienerii | Near Threatened | ಕಂದು ಹೊಟ್ಟೆಯ ಗಿಡುಗ |
25 | Lesser Fish Eagle | Haliaeetus humilis | Near Threatened | ಸಣ್ಣ ಮೀನುಗಿಡುಗ |
26 | Grey-headed Fish Eagle | aliaeetus ichthyaetus | Near Threatened | ಬೂದುತಲೆಯ ಮೀನುಗಿಡುಗ |
27 | Malabar Pied Hornbill | Anthracoceros coronatus | Near Threatened | ಮಲೆ ದಾಸ ಮಂಗಟ್ಟೆ |
28 | Red-necked Falcon | Falco chicquera | Near Threatened | ಕೆಂದಲೆ ಚಾಣ |
29 | Laggar Falcon | Falco jugger | Near Threatened | ಮೀಸೆ ಚಾಣ |
30 | Alexandrine Parakeet | Psittacula eupatria | Near Threatened | ರಾಮಗಿಳಿ |
31 | Grey-headed Bulbul | priocephalus | Near Threatened | ಬೂದುತಲೆಯ ಪಿಕಳಾರ |
SL No | English Name | Scientific Name | IUCN Category | ಹಕ್ಕಿಯ ಹೆಸರು |
---|---|---|---|---|
1 | Sociable Lapwing | Vanellus gregarius | Critically Endangered | ಬೂದು ಮೈ ಟಿಟಿಭ |
2 | Christmas Island Frigatebird | Fregata andrewsi | Critically Endangered | ಕಪ್ಪು ಬಿಳಿ ಕಡಲಗಿಡುಗ |
3 | Yellow-breasted Bunting | Emeriza aureola | Critically Endangered | ಹಳದಿ ಎದೆಯ ಕಾಳಗುಬ್ಬಿ |
4 | Great Knot | Calidris tenuirostris | Endangered | ಕಡಲ ಉಲ್ಲಂಕಿ |
5 | Steppe Eagle | Aquila nipalensis | Endangered | ಚೊಟ್ಟೆ ಗಿಡುಗ |
6 | Indian Skimmer | Rynchops albicollis | Endangered | ಜಾಲರಿ ಕೊಕ್ಕಿನ ರೀವ |
7 | Lesser Adjutant | Leptoptilos javanicus | Vulnerable | ಸಣ್ಣ ಸಿಪಾಯಿ ಕೊಕ್ಕರೆ |
8 | Common Pochard | Aythya ferina | Vulnerable | ಕಂದು ತಲೆ ಬಾತು |
9 | Greater Spotted Eagle | Clanga clanga | Vulnerable | ದೊಡ್ಡ ಚುಕ್ಕೆಯ ಗಿಡುಗ |
10 | Eastern Imperial Eagle | Aquila heliaca | Vulnerable | ಗಿಡುಗ |
11 | Black-capped Kingfisher | Halcyon pileata | Vulnerable | ಕರಿತಲೆ ಮಿಂಚುಳ್ಳಿ |
12 | Kashmir Flycatcher | Fidedula subrubra | Vulnerable | ಕಿತ್ತಲೆ ನೊಣಹಿಡುಕ |
13 | Bristled Grassbird | Schoenicola striatus | Vulnerable | ಹುಲ್ಲು ಉಲಿಯಕ್ಕಿ |
14 | Ferruginous Duck | Aythya nyroca | Near Threatened | ಬಿಳಿಗಣ್ಣಿನ ಬಾತು |
15 | Lesser Flamingo | Phoeniconaias minor | Near Threatened ¸ | ಸಣ್ಣ ರಾಜಹಂಸ |
16 | Eurasian Oystercatcher | Haematopus ostralegus | Near Threatened | ಸಿಂಪಿಬಾಕ |
17 | Eurasian Curlew | Numenius arquata | Near Threatened | ಹೆಗ್ಗೊರವ |
18 | Bar-tailed Godwit | Limosa lapponica | Near Threatened | ಪಟ್ಟೆ ಬಾಲದ ಹಿನ್ನೀರುಗೊರವ |
19 | Black-tailed Godwit | Limosa limosa | Near Threatened | ಕಪ್ಪು ಬಾಲದ ಹಿನ್ನೀರುಗೊರವ |
20 | Curlew Sandpiper | Calidris ferruginea | NearThreatened | ಹೆಗ್ಗಡಲು ಉಲ್ಲಂಕಿ |
21 | Great Snipe | Gallinago media | Near Threatened | ದೊಡ್ಡ ಉಲ್ಲಂಕಿ |
22 | Swinhoe's Storm-petrel | Oceanodroma monorhis | Near Threatened | ತಣಿಹೊಳ್ಳೆಯ ಕಡಲಹದ್ದು |
23 | Jouanin's Petrel | Bulweria fallax | Near Threatened | ಬೆಣೆಬಾಲದ ಸಾಗರದಕ್ಕಿ |
24 | Flesh-footed Shearwater | Ardenna carneipes | Near Threatened | ಕಪ್ಪು ಸಾಗರದಕ್ಕಿ |
25 | Cinereous Vulture | Aegypius monachus | Near Threatened | ಕುಂಚಿಗೆ ರಣಹದ್ದು |
26 | Himalayan Vulture | Gyps himalayensis | Near Threatened | ಹಿಮಾಲಯದ ರಣಹದ್ದು |
27 | Pallid Harrier | Circus macrourus | Near Threatened | ಸೆಳೆವ |
ಉಲ್ಲೇಖಗಳು
[ಬದಲಾಯಿಸಿ]- ↑ https://www.iucnredlist.org/
- ↑ The IUCN Red List of Threatened Species. Version 2022-1. Accessed from Praveen, J. & Jayapal, R. Threatened birds of India (v6.0). Website: http://www.indianbirds.in/india/ [Date of publication: 05 August 2022]
- ↑ ಡಾ. ಎಸ್ ವಿ ನರಸಿಂಹನ್.೨೦೦೮.ಕೊಡಗಿನ ಖಗರತ್ನಗಳು. ಪರಿಷ್ಕರಿಸಿದ ಹಕ್ಕಿಗಳ ಪರಿಶೀಲನಾ ಪಟ್ಟಿ ೨೦೨೨