ಅನ್ನಪೂರ್ಣ ಕಿಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನ್ನಪೂರ್ಣ ಕಿಣಿ, ಭಾರತೀಯ ಮೂಲದ ಹೆಸರಾಂತ ಆಮೆರಿಕನ್ ವೈದ್ಯೆ. ಅಮೆರಿಕದ ನ್ಯೂಯಾರ್ಕ್ ನಲ್ಲಿ 'ಮೌಂಟ್ ಸಿನಾಯ್ ಸ್ಕೂಲ್ ಆಫ್ ಮೆಡಿಸಿನ್, ನ್ಯುಯಾರ್ಕ್' ಸಂಸ್ಥೆಯಲ್ಲಿ 'ಹೃದಯರೋಗ ತಜ್ಞೆ'ಯಾಗಿರುವ ಅನ್ನಪೂರ್ಣ, ಸುಮಾರು ೨ ದಶಕಗಳಿಂದ ಸೇವೆಸಲ್ಲಿಸುತ್ತಿದ್ದಾರೆ. ನ್ಯೂಯಾರ್ಕ್‌ನ ೩೫೦ ಅತ್ಯಂತ ಸುರಕ್ಷಿತ ಹೃದಯದ ಶಸ್ತ್ರಚಿಕಿತ್ಸೆಗಳ ಪೈಕಿ ಒಬ್ಬರಾಗಿ ಗುರುತಿಸಿಕೊಂಡ ಡಾ.ಕಿಣಿಯವರು, ಅತ್ಯಂತ ಕಡಿಮೆ ಅಪಾಯದಲ್ಲಿ ಸರ್ಜರಿ ಮಾಡಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರೆಂದು ಮಾನ್ಯತೆ ಪಡೆದಿದ್ದಾರೆ. ಒಂದು ವರ್ಷದಲ್ಲಿ ನ್ಯೂಯಾರ್ಕ್ ನ ಮೌಂಟ್ ಸಿನಾಯ್ ಸ್ಕೂಲ್ ಆಫ್ ಮೆಡಿಸಿನ್ ಆಸ್ಪತ್ರೆಯಲ್ಲಿ, ಸಾವಿರಕ್ಕಿಂತ ಹೆಚ್ಚು 'ಇಂಟರ್ವೆನ್ಶನ್ ಕರೊನರಿ ಸರ್ಜರಿ' ಮಾಡಿ ಹೆಸರುಗಳಿಸಿದ್ದಾರೆ.

ಜನನ, ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ಅನ್ನಪೂರ್ಣ, ಬೋಳುವಾರು ಗ್ರಾಮವಾಸಿ ನಾಮದೇವ ಪ್ರಭು, ಹಾಗೂ ಪುಷ್ಪಲತಾ ದಂಪತಿಗಳ ೩ ಮಕ್ಕಳಲ್ಲಿ ಎರಡನೆಯವರು. ಅನ್ನಪೂರ್ಣರ ಅಣ್ಣ, ಡಾ.ಅಶೋಕ್ ಪ್ರಭು. ಮಂಗಳೂರಿನ ಎ.ಇನ್.ಕೆ.ಎಮ್.ಸಿ.ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದಾರೆ. ಅವರ ತಮ್ಮ ರಾಧೇಶ್ ವಿ.ಪ್ರಭು, ಒಬ್ಬ ಕುಶಲ ಕೃಷಿಕ. ಮನೆಯ ಕೃಷಿ ಸಂಬಂಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದಾರೆ. ಅನ್ನಪೂರ್ಣ, ಪ್ರಾರಂಭಿಕ ವಿಧ್ಯಾಭ್ಯಾಸವನ್ನು 'ಸೇಂಟ್ ವಿಕ್ಟರ್ಸ್ ಗರ್ಲ್ಸ್ ಸ್ಕೂಲ್' ನಲ್ಲಿ ಮಾಡಿದರು.

  • ೧೯೮೪ ರಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವಿವೇಕಾನಂದ ಕಾಲೇಜಿನಿಂದ ಪಿ.ಯು. ಹಾಗೂ ಪದವಿಗಳಿಸಿದರು.
  • ೧೯೯೧ ರಲ್ಲಿ ಎಮ್.ಬಿ.ಬಿ.ಎಸ್.ಪದವಿಯನ್ನು ಕಸ್ತುರ್ಬಾ ಮೆಡಿಕಲ್ ಕಾಲೇಜಿನಲ್ಲಿ ಪಡೆದರು. ಚಿನ್ನದ ಪದಕ, ಹಾಗೂ ೩ ಪ್ರಶಸ್ತಿಗಳ ವಿಜೇತೆಯಾದರು.
  • ೧೯೯೬ ರಲ್ಲಿ ಯೂನಿವರ್ಸಿಟಿ ಆಫ್ ವೇಲ್ಸ್ ಕಾಲೇಜ್ ಆಫ್ ಮೆಡಿಸಿನ್ ನಲ್ಲಿ ರೆಸಿಡೆನ್ಸಿ ಮುಗಿಸಿದರು.
  • ಲಂಡನ್ ನಲ್ಲಿ ಎಮ್ ಆರ್.ಸಿ.ಪಿ.ಪದವಿ ಗಳಿಸಿದರು. ಇಂಗ್ಲೆಂಡಿನಲ್ಲಿ ಪ್ರಶಿಕ್ಷಣ ಗಳಿಸಿದ ಬಳಿಕ ಲಂಡನ್ ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ನ ಸದಸ್ಯೆಯಾದರು.
  • ನಂತರ ಮೌಂಟ್ ಸಿನಾಯ್ ಮೆಡಿಕಲ್ ಸೆಂಟರ್ ನಲ್ಲಿ ಮೂರು ಫೆಲೊಶಿಪ್ ಗಳಿಸಿದರು : ೧೯೯೭, ೨೦೦೧,ಹಾಗೂ ೨೦೦೨ ರಲ್ಲಿ.

ವೈಯಕ್ತಿಕ ಜೀವನ[ಬದಲಾಯಿಸಿ]

ಡಾ.ಅನ್ನಪೂರ್ಣ ಕಿಣಿಯವರು, ಈಗ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿದ್ದಾರೆ. ಡಾ.ಯು.ಸುಭಾಶ್ ಕಿಣಿಯವರನ್ನು ವಿವಾಹವಾಗಿದ್ದಾರೆ. ಇಬ್ಬರು ಮಕ್ಕಳು ಅಕ್ಷಯ್ ಮತ್ತು ಸಮೀರ್. ಒಬ್ಬ ಹುಡುಗ, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸೀನಿಯರ್ ಓದುತ್ತಿದ್ದಾನೆ. 'ಮಾಸ್ಟರ್ ಇನ್ವೆಸ್ಟ್ ಮೆಂಟ್ ಬ್ಯಾಂಕರ್' ಆಗುವ ಆಶೆಯಿದೆ. ಡಾ.ಕಿಣಿಯವರಿಗೆ ಯೊಗ, ಧ್ಯಾನ, ಮತ್ತು ಓಡುವುದರಲ್ಲಿ ತೀವ್ರವಾದ ಆಸಕ್ತಿಯಿದೆ. ಓಡುವುದರ ಅನುಕೂಲಗಳ ಬಗ್ಗೆ ವಿಚಾರಗಳನ್ನು ಅವರ ಸಹೊದ್ಯೊಗಿಗಳ ಜೊತೆ ಹಂಚಿಕೊಳ್ಳುತ್ತಾರೆ. ಅವರ ರೋಗಿಗಳೂ ಓಡುವ ಅಭಿಯಾನದಲ್ಲಿ ಭಾಗವಹಿಸುತ್ತಾರೆ. ಮೌಂಟ್ ಸಿನಾಯ್ ಕಾಲೇಜು, ಯೋಗಕಮ್ಮಟಗಳನ್ನು ಆಯೋಜಿಸುತ್ತಾ ಬಂದಿದೆ. ಪ್ರತಿವರ್ಷವೂ 'ಫನ್ ಫೇರ್' ಕಾರ್ಯಮವನ್ನು ಹಮ್ಮಿಕೊಳ್ಳಲಾಗುತ್ತಿದೆ.ಆ ಸಮಯದಲ್ಲಿ 'ಹೆಲ್ತ್ ಕೇರ್' ನಲ್ಲಿ ತರಪೇತಿಹೊಂದಿ ನಿಷ್ಣಾತರಾದ ತಜ್ಞರನ್ನು ಆಹ್ವಾನಿಸಿ, ಅವರ ಅನುಭವದ ನೆರವುಗಳನ್ನು ಆಸ್ಪತ್ರೆಯ ರೋಗಿಗಳಿಗೆ ತಿಳಿಯಲು ಅವಕಾಶಮಾಡಿಕೊಡುತ್ತಾರೆ.

ಇಲ್ಲಿಸ್ ಐಲೆಂಡ್ ಮೆಡಲ್ಸ್ ಆಫ್ ಆನರ್ ಪ್ರಶಸ್ತಿ[ಬದಲಾಯಿಸಿ]

ನ್ಯಾಷನಲ್ ಎಥ್ನಿಕ್ ಕೊಯಲಿಶನ್ ಆಫ್ ಆರ್ಗನೈಸೇಷನ್ಸ್, ಸ್ಥಾಪಿಸಿದ, ಈ ವರ್ಷದ 'ಇಲ್ಲಿಸ್ ಐಲೆಂಡ್ ಮೆಡಲ್ಸ್ ಆಫ್ ಆನರ್ಪ ಪ್ರಶಸ್ತಿ' [೧] ಪಡೆಯಲು, ೬ ಭಾರತೀಯ ಅಮೆರಿಕನ್ನರು ಸ್ಪರ್ಧೆಯಲ್ಲಿದ್ದರು. ಅಮೆರಿಕದಲ್ಲಿ ಅತಿ ಶ್ರೇಷ್ಟವಾದ ಪ್ರಶಸ್ತಿಎಂದು ಪರಿಗಣಿಸಲ್ಪಟ್ಟಿದೆ. ಪ್ರಶಸ್ತಿಯನ್ನು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಪಾರಸೇವೆಮಾಡಿದ ಸಾಧಕರಿಗೆ ಇಲ್ಲವೇ ದೇಶಕ್ಕೆ ಪ್ರದಾನಮಾಡಲಾಗುತ್ತಿದೆ. ಈ ವರ್ಷದ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಚೇರ್ಪರ್ಸನ್ ಮತ್ತು ಚೀಫ್ ಎಕ್ಸೆಕ್ಯುಟೀವ್ ಆಫೀಸರ್ ಆಫ್ ಪೆಪ್ಸಿಕೊ ದ ಇಂದ್ರಾ ನೂಯಿರವರೂ ಒಬ್ಬರು. ಈ ವರ್ಷದ ವಿಜೇತರ ಪಟ್ಟಿಯನ್ನು ಅಮೆರಿಕನ್ ಕಾಂಗ್ರೆಸ್ ಸಮಕ್ಷಮದಲ್ಲಿ ಮಂಡಿಸಿ, ಅನುಮತಿ ದೊರೆತಮೇಲೆ ಘೋಷಿಸಲಾಯಿತು. ೨೦೧೭ ರ, ಮೇ ೧೩ ರಂದು ಪ್ರಶಸ್ತಿಯನ್ನು ವಿತರಿಸಲಾಗುವುದು.

ಪ್ರಶಸ್ತಿಗಳು[ಬದಲಾಯಿಸಿ]

  • ಡಾ.ಅನ್ನಪೂರ್ಣ ಕಿಣಿಯವರಿಗೆ, [೨]ವರ್ಷದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಪ್ರದಾನಮಾಡಲಾಯಿತು.[೩]
  • ಅಮೆರಿಕದ ನ್ಯೂಯಾರ್ಕ್ ರಾಜ್ಯ ಸರಕಾರದ ಅತ್ಯುನ್ನತ ಗೌರವ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಪುತ್ತೂರು ಮೂಲದ ಅಮೆರಿಕದ ಡಾ.ಅನ್ನಪೂರ್ಣ ಎಸ್.ಕಿಣಿಯವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ, ವಾರ್ತಾ ಭಾರತಿ, ೦೫, ಏಪ್ರಿಲ್, ೨೦೧೭
  2. "Annapoorna Kini, MD, Physician of the Year at The Mount Sinai Hospital Director of the Cardiac Catheterization Laboratory at Mount Sinai Heart honored with "Physician of the Year" Attending Award. – November 3, 2014". Archived from the original on ಏಪ್ರಿಲ್ 4, 2016. Retrieved ಏಪ್ರಿಲ್ 5, 2017.
  3. ಪುತ್ತೂರು ಮೂಲದ ವೈದ್ಯೆ ಅನ್ನಪೂರ್ಣ ಕಿಣಿಗೆ ಅಮೆರಿಕದ ಪರಮೋಚ್ಚ ಪ್ರಶಸ್ತಿ, ಒನ್ ಇಂಡಿಯ ಇ-ಪತ್ರಿಕೆ, April 4, 2017