ಅನೆಮೊನಿ
ಅನೆಮೊನಿ | |
---|---|
Anemone coronaria (type species) | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
ಗಣ: | |
ಕುಟುಂಬ: | |
ಕುಲ: | Anemone |
Type species | |
Anemone coronaria L. | |
Species | |
See text. | |
Synonyms | |
Anemoclema (Franch.) W. T. Wang |
ಅನೆಮೊನಿ ರಾನುನ್ಕುಲೇಸಿ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ.
ಲಕ್ಷಣಗಳು
[ಬದಲಾಯಿಸಿ]ಈ ಸಸ್ಯ ಸ್ಪಲ್ಪಮಟ್ಟಿಗೆ ಪೊಪಿ (ಗಸಗಸೆ ಜಾತಿ) ಮತ್ತು ಸೇವಂತಿಗೆಗಳಂತೆ, ಸುಂದರವಾಗಿ ಹೂಬಿಡುತ್ತದೆ. ಕುಳ್ಳಾಗಿ ಬೆಳೆದು ಅವ್ಯವಸ್ಥಿತವಾಗಿ ಬಾಗಿದ ಎಲೆಗಳ ಮಧ್ಯೆ ಬಿಡುವ ಇದರ ಬಿಳುಪು, ನಸುಗೆಂಪು, ಕಂದು, ಕೇಸರಿ ಮತ್ತು ನೀಲಿ ಬಣ್ಣಗಳ ಹೂಗಳು ಜನರಿಗೆ ಅಚ್ಚುಮೆಚ್ಚು. ಒಂದು ಅಥವಾ ಎರಡು ಸುತ್ತು ದಳಗಳಿರುವ ಇದರ ಹೂಗಳ ಬಣ್ಣ, ಆಕಾರ, ಗಾತ್ರ ವಿಧವಿಧವಾಗಿರುವುದರಿಂದ ಆಕರ್ಷಕವಾಗಿ ಕಾಣುತ್ತವೆ. ಈ ಸಸ್ಯಗಳ ಎಲೆಗಳು ಹಲವಾರು ಹಾಲೆಗಳಾಗಿ ವಿಭಾಗಗೊಂಡಿರುವುವು. ಅಥವಾ ಪ್ರತ್ಯೇಕಿಸಿದ ಸಂಯುಕ್ತ ಎಲೆಯಾಗಿರುತ್ತವೆ. ಹೂಗಳು ಒಂಟೊಂಟಿ ದ್ವಿಲಿಂಗಿಗಳಾದ ಇವುಗಳಲ್ಲಿ ಬಹುಸಂಖ್ಯೆಯ ಕೇಸರ ಸಮೂಹವೂ ಬಹುಭಾಗದ ಅಂಡಾಶಯವೂ ಇವೆ. ಅಂಡಾಶಯ ಉತ್ತಮ ಸ್ಥಿತಿಯದಾಗಿದ್ದು ಒಂದೊಂದು ಅಂಡವನ್ನು ಹೊಂದಿರುತ್ತದೆ. ಫಲ ಒಂದು ಬೀಜದ ಅಕೀನ್ ಮಾದರಿಯದು.
ಅನಿಮೊನಿ ಕೊರೊನೇರಿಯ
[ಬದಲಾಯಿಸಿ]ಈ ಪ್ರಭೇದ 30 ಸೆಂಮೀ. ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ಬಹು ಕುಳ್ಳು; ಇದರ ಮೇಲೆ ತೊಟ್ಟಿರುವ ಅಥವಾ ತೊಟ್ಟಿಲ್ಲದ ನಯವಾದ ಎಲೆಗಳಿರುತ್ತವೆ. ಕಾಂಡದ ಕೆಳತುದಿಯಲ್ಲಿ ಗೆಡ್ಡೆಬೇರುಗಳಿವೆ. ತುದಿಯಲ್ಲಿರುವ ಒಂಟಿ ಹೂ ಬಿಳುಪು, ನೀಲಿ, ಕೆಂಪು ಅಥವಾ ಇವುಗಳ ಮಿಶ್ರಣದ ಬಣ್ಣಗಳಲ್ಲಿರುತ್ತದೆ. ಕೇಸರಗಳು ಅಧಿಕ ಸಂಖ್ಯೆಯಲ್ಲಿರುತ್ತವೆ. ಅನಿಮೊನಿ ಜಪಾನಿಕಾ ಎಂಬುದು ಸುಮಾರು 1 ಮೀ. ಎತ್ತರ ಬೆಳೆಯುವ ಬಹು ವಾರ್ಷಿಕ ಪ್ರಭೇದ. ಇದರ ತವರು ಜಪಾನ್. ಬುಡದ ಎಲೆಗಳು ಉದ್ದವಾಗಿವೆ. ಮೂರರಿಂದ ಐದು ಭಾಗಗಳುಳ್ಳ ಎಲೆಯ ಅಂಚು ಗರಗಸದಂತಿದೆ. ತುದಿ ಲಂಬಾಗ್ರವಾಗಿರುತ್ತದೆ. ಹೂವಿಗೆ ಉದ್ದವಾದ ತೊಟ್ಟು ಇರುತ್ತದೆ. ಪುಷ್ಪಪತ್ರಗಳು 1-3 ವೃತ್ತಗಳಲ್ಲಿರುತ್ತದೆ. ಉದ್ದವಾದ ಒಂಟಿಹೂ ತೊಟ್ಟಿನ ತುದಿಯಲ್ಲಿರುತ್ತದೆ. ಕೇಸರಗಳು ಹಳದಿ ಬಣ್ಣ, ಫಲ ಅಕೀನ್ ಮಾದರಿಯದು; ರೇಷ್ಮೆದಾರದಂಥ ಶಿಖೆಗಳಿಂದ ಕೂಡಿರುತ್ತದೆ. ಈ ಪ್ರಭೇದವನ್ನು ಸಂಕರಣ ಕಾರ್ಯಕ್ಕಾಗಿ ಅಧಿಕವಾಗಿ ಬಳಸುತ್ತಾರೆ.
ತಳಿಗಳು
[ಬದಲಾಯಿಸಿ]ಮೇಲೆ ಕಾಣಿಸಿರುವ ಜಾತಿಗಳು ಸಸ್ಯಶಾಸ್ತ್ರದ ಶಾಸ್ತ್ರೀಯ ವಿಂಗಡಣೆಯ ಮೂಲ ಪ್ರಭೇಧಗಳು. ಬೇಸಾಯದಲ್ಲಿ ಕೆಲವು ವಿವಿಧ ಹೆಸರುಗಳುಳ್ಳ ಸ್ಥಳೀಯವಾದ ಅನೇಕ ತಳಿಗಳಿವೆ. ಅವುಗಳಲ್ಲಿ ಹಾಲೆಂಡಿಯಾ ಎಂಬುದು ಅನೇಕ ಬಣ್ಣದ, ಪೋಕರ್ ಎಂಬುದು ನೀಲಿ ಬಣ್ಣದ, ಸೈಲ್ ಪೈಡ್ ಎಂಬುದು ಕೆಂಪು ಬಣ್ಣದ, ಅಡ್‍ಮಿರಲ್ ಎಂಬುದು ನಸುಗೆಂಪು ಬಣ್ಣದ, ಗವರ್ನರ್ ಎಂಬುದು ಕೇಸರಿ ಬಣ್ಣದ ಹೂಗಳನ್ನು ಬಿಡುತ್ತವೆ.
ಬೇಸಾಯ
[ಬದಲಾಯಿಸಿ]ಅನಿಮೊನಿ ಸಸ್ಯಗಳನ್ನು ಬೀಜ ಮತ್ತು ಗೆಡ್ಡೆಗಳಿಂದ ವೃದ್ಧಿ ಮಾಡಬಹುದು. ಬೀಜಗಳಿಂದ ವೃದ್ಧಿ ಮಾಡುವಾಗ ಬೀಜಗಳನ್ನು 2 ದಿವಸ ನೀರಿನಲ್ಲಿ ನೆನೆಸಿ ಅನಂತರ ಬಿತ್ತನೆ ಮಾಡಿದರೆ ಬೇಗ ಮೊಳೆಯುತ್ತವೆ. ಹೂಬಿಟ್ಟ ಸಸ್ಯಗಳ ಗಡ್ಡೆಗಳನ್ನು ತೆಗೆದು ಪೊಟ್ಯಾಸಿಯಮ್ ಪರ್‍ಮಾಂಗನೇಟ್ ದ್ರಾವಣದಲ್ಲಿ ಸ್ವಲ್ಪಕಾಲ ಹಾಕಿ, ಒಣ ಮರಳಿನಲ್ಲಿ ಮುಂದಿನ ಸಾರಿ ನೆಡುವ ತನಕ, ಶೇಖರಿಸಬೇಕು.ಈ ಸಸ್ಯಗಳು ಮೈದಾನ ಪ್ರದೇಶಗಳಲ್ಲಿ ಬೆಳೆಯಬಹುದಾದರೂ ಹೆಚ್ಚು ಎತ್ತರದಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತವೆ. ಅಕ್ಟೋಬರ್ ತಿಂಗಳು ಈ ಸಸ್ಯಗಳನ್ನು ನೆಡಲು ಯೋಗ್ಯವಾದ ಕಾಲ. ಗಡ್ಡೆಗಳನ್ನು 50-60 ಸೆಂ.ಮೀ. ಆಳದಲ್ಲಿ 10 ಸೆಂ.ಮೀ. ಇರುವಂತೆ ಅಂತರ ಕೊಟ್ಟು 15 ಸೆಂ.ಮೀ. ಸಾಲುಗಳಲ್ಲಿ ನೆಡಬೇಕು. ಜೌಗಿಲ್ಲದ ಮರಳುಗೋಡು ಮಣ್ಣಿನಲ್ಲಿ ಇವು ಸೊಗಸಾಗಿ ಬೆಳೆಯುತ್ತವೆ. ನೆಟ್ಟಮೇಲೆ ಸಸಿಗಳು ಬೆಳೆಯುವ ಸ್ಥಿತಿಯಲ್ಲಿರುವಾಗ ದ್ರಾವಣದ ಗೊಬ್ಬರ ಕೊಟ್ಟರೆ ಉತ್ತಮ. ಸಸಿ ನೆಟ್ಟ ಆರು ತಿಂಗಳಿಗೆ ಹೂ ಕಾಣುತ್ತದೆ. ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಇವು ಹೂ ಬಿಡುತ್ತವೆ.
ಉಪಯೋಗಗಳು
[ಬದಲಾಯಿಸಿ]ಈ ಸಸ್ಯಗಳನ್ನು ಉದ್ಯಾನವನದ ಅಂಚು ಸಸ್ಯಗಳಾಗಿ, ಕಲ್ಲೇರಿ ಸಸ್ಯಗಳಾಗಿ ಮತ್ತು ಕುಂಡ ಸಸ್ಯಗಳಾಗಿ ಬೆಳೆಸುವುದುಂಟು. ಅನಿಮೊನಿ ಜಾತಿಯಲ್ಲಿ ಸುಮಾರು 100 ಪ್ರಭೇದಗಳಿವೆ. ಹೂವು ಬಿಡುವ ಬಹುವಾರ್ಷಿಕ ಸಸ್ಯಗಳಾದ ಇವುಗಳಲ್ಲಿ ಕೆಲವು ಮಾತ್ರ ಉದ್ಯಾನಗಾರಿಕೆಯಲ್ಲಿ ಪ್ರಾಮುಖ್ಯತೆ ಪಡೆದಿವೆ.
ಛಾಯಾಂಕಣ
[ಬದಲಾಯಿಸಿ]-
Greek anemone (Anemone blanda)
-
Snowdrop anemone (Anemone sylvestris), native to meadows in Europe
-
European wood anemone (Anemone nemorosa)
-
Japanese anemone (Anemone hupehensis var. japonica)
ಉಲ್ಲೇಖಗಳು
[ಬದಲಾಯಿಸಿ]- ↑ Germplasm Resources Information Network (GRIN) (2007-05-10). "Genus: Anemone L." Taxonomy for Plants. USDA, ARS, National Genetic Resources Program, National Germplasm Resources Laboratory, Beltsville, Maryland. Retrieved 2008-05-15.
- ↑ International Organization for Plant Information (IOPI). "Plant Name Search Results". International Plant Names Index. Retrieved 2008-04-18.
- ↑ "5. Anemone Linnaeus". Flora of North America. 3. Archived from the original on 4 May 2008. Retrieved 2008-05-16.
{{cite journal}}
: Unknown parameter|deadurl=
ignored (help)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- "Anemone L." Integrated Taxonomic Information System. Retrieved 15 May 2008.
- Natural Resources Conservation Service (NRCS). "PLANTS Profile, Anemone L." The PLANTS Database. United States Department of Agriculture. Retrieved 2008-05-16.
- Pages using the JsonConfig extension
- CS1 errors: unsupported parameter
- Orphaned articles from ಮಾರ್ಚ್ ೨೦೧೯
- Articles with invalid date parameter in template
- All orphaned articles
- Articles with 'species' microformats
- Taxobox articles missing a taxonbar
- Commons category link is on Wikidata
- ಹೂವುಗಳು
- ಸಸ್ಯಗಳು
- ಅಲಂಕಾರಿಕ ಸಸ್ಯಗಳು