ಅನುಪಮ್ ಮಿಶ್ರಾ
ಅನುಪಮ್ ಮಿಶ್ರಾ | |
---|---|
![]() | |
ಜನನ | 1948 ಮಹಾರಾಷ್ಟ್ರ, ಭಾರತ |
ಮರಣ | 19 ಡಿಸೆಂಬರ್ 2016 ನವದೆಹಲಿ |
ಉದ್ಯೋಗ | ಪರಿಸರವಾದಿ |
ಇದಕ್ಕೆ ಖ್ಯಾತರು | ನೀರಿನ ಸಂರಕ್ಷಣೆ, ಮಳೆನೀರು ಕೊಯ್ಲು |
ಅನುಪಮ್ ಮಿಶ್ರಾರವರು ಭಾರತೀಯ ಗಾಂಧಿವಾದಿಯಾಗಿದ್ದರು.[೧] ಲೇಖಕರಾಗಿ, ಪತ್ರಕರ್ತರಾಗಿ ಹಾಗೂ ಪರಿಸರವಾದಿಯಾಗಿ ಕಾರ್ಯ ನಿರ್ವಹಿಸಿದ ಇವರು ನೀರಿನ ಸಂರಕ್ಷಣೆ, ನೀರಿನ ನಿರ್ವಹಣೆ ಮತ್ತು ಸಾಂಪ್ರದಾಯಿಕ ಮಳೆನೀರು ಕೊಯ್ಲು ವ್ಯವಸ್ತೆಯನ್ನು ಉತ್ತೇಜಿಸಿದವರು.[೨] ಅವರು ಭಾರತದ ಹಲವಾರು ರಾಜ್ಯಗಳಲ್ಲಿ, ವಿಶೇಷವಾಗಿ ರಾಜಸ್ಥಾನ, ಮಧ್ಯಪ್ರದೇಶ, ಮತ್ತು ಉತ್ತರ ಪ್ರದೇಶಗಳಲ್ಲಿನ ಹಳ್ಳಿಗಳಿಗೆ ಪ್ರಯಾಣಿಸಿ, ನೀರಿನ ಕೊಯ್ಲು ವ್ಯವಸ್ಥೆಗಳ ಮೌಲ್ಯವನ್ನು ವಿವರಿಸಿದರು. 'ಆಜ್ ಭೀ ಖರೇ ಹೇಂ ತಲಾಬ್' ಮತ್ತು 'ರಾಜಸ್ತಾನ್ ಕೀ ರಜತ್ ಬೂಂದೇ'[೩] ಎಂಬ ಪುಸ್ತಕಗಳನ್ನು ಬರೆದಿದ್ದಾರೆ.
ಜೀವನ ಚರಿತ್ರೆ[ಬದಲಾಯಿಸಿ]
ಮಿಶ್ರಾ ರವರು ಮಹಾರಾಷ್ಟ್ರದ ವಾರ್ಧಾದಲ್ಲಿ 1948ರಲ್ಲಿ ಜನಿಸಿದರು. 1969ರಲ್ಲಿ ತನ್ನ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ನವದೆಹಲಿಯ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ನೀರಿನ ಸಂರಕ್ಷಣೆ, ಕೆರೆಗಳ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲು ಸಮಸ್ಯೆಯನ್ನು ಬಗೆಹರಿಸಲು ಸಾಂಪ್ರದಾಯಿಕ ತಂತ್ರವನ್ನು ಬಳಸಿದರು. ತನ್ನ ಎಂಟು ವರ್ಷಗಳ ಕಾಲ ಸಾಂಪ್ರದಾಯಿಕ ಕೆರೆ ಹಾಗೂ ನೀರಿನ ನಿರ್ವಹಣೆ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ 'ಆಜ್ ಭೀ ಖರೇ ಹೇಂ ತಲಾಬ್' ಎಂಬ ಪುಸ್ತಕವನ್ನು ೧೯೯೩ರಲ್ಲಿ ಪ್ರಕಟಿಸಿದರು.[೪] ಶ್ರೀಘದಲ್ಲೇ ಈ ಪುಸ್ತಕಗಳು ನೀರಿನ ಕೊಯ್ಲು ಯೋಜನೆಗಳಲ್ಲಿ ಕೆಲಸ ಮಾಡುವ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ಕೈಪಿಡಿಯಾಯಿತು. ಅದಲ್ಲದೆ ಈ ಪುಸ್ತಕವನ್ನು 19 ಭಾಷೆಗಳಿಗೆ ಅನುವಾದಿಸಿದ್ದಾರೆ. ಮಿಶ್ರಾ ರವರ 'ರಾಜಸ್ತಾನ್ ಕೀ ರಜತ್ ಬೂಂದೇ' ಪುಸ್ತಕವು ಪಶ್ಮಿಮ ರಾಜಸ್ಥಾನದ ಮಳೆ ನೀರು ಕೊಯ್ಲು ಹಾಗೂ ನೀರಿನ ನಿರ್ವಹಣೆ ಬಗೆಯನ್ನು ದಾಖಲಿಸಿದೆ. ಮಿಶ್ರಾ ರವರು ಗಾಂಧಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರು ಗಾಂಧಿ ಮಾರ್ಗ ಎಂಬ ನಿಯತಕಾಲಿಕದ ಸಂಪಾದಕರಾಗಿದ್ದರು.[೫] ಮಿಶ್ರಾ ರವರು 20 ಡಿಸೆಂಬರ್ 2016ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದಾಗಿ ಮೃತಪಟ್ಟರು.[೬]
ಕೃತಿಗಳು[ಬದಲಾಯಿಸಿ]
ಪ್ರಶಸ್ತಿಗಳು[ಬದಲಾಯಿಸಿ]
- 2007-08ರ ಅಮರ್ ಶಾಹೀದ್ ಚಂದ್ರಶೇಖರ ಆಜಾದ್ ನ್ಯಾಷನಲ್ ಪ್ರಶಸ್ತಿ[೧೦]
- 2011ರಲ್ಲಿ ಜಮ್ನಲಾಲ್ ಬಜಾಜ್ ಪ್ರಶಸ್ತಿ ದೊರೆತಿದೆ.[೧೧]
- ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯು ಇಂದಿರಾಗಾಂಧಿ ಪರ್ಯವರನ್ ಪುರಸ್ಕಾರವನ್ನು ನೀಡಿದ್ದಾರೆ.
ಉಲ್ಲೇಖಗಳು[ಬದಲಾಯಿಸಿ]
- ↑ https://www.sundayguardianlive.com/culture/anupam-mishra-gandhian-model-progress
- ↑ https://www.downtoearth.org.in/news/water/anupam-mishra-the-man-who-dreamt-of-water-sufficient-india-56578
- ↑ https://web.archive.org/web/20120628031806/http://www.indiawaterportal.org/node/7354
- ↑ https://www.indiawaterportal.org/author/anupam-mishra
- ↑ https://www.civilsocietyonline.com/mega-hall-of-fame/anupam-mishra/
- ↑ https://www.newindianexpress.com/nation/2016/dec/19/environmentalist-anupam-mishra-dead-at-68-1550787.html
- ↑ https://www.indiawaterportal.org/articles/aaj-bhi-khare-hain-talaab
- ↑ https://www.indiawaterportal.org/articles/rajasthan-ki-rajat-boondein-book-anupam-mishra
- ↑ "ಆರ್ಕೈವ್ ನಕಲು". Archived from the original on 2018-06-17. Retrieved 2019-12-04.
- ↑ https://www.outlookindia.com/newswire/story/anupam-mishra-to-be-bestowed-with-chandrasekhar-award/609781
- ↑ http://www.jamnalalbajajawards.org/awards/speeches/anupam-mishra
- Articles with ISNI identifiers
- Pages with authority control identifiers needing attention
- Articles with VIAF identifiers
- Articles with WorldCat identifiers
- Articles with BNF identifiers
- Articles with BNFdata identifiers
- Articles with J9U identifiers
- Articles with LCCN identifiers
- Articles with NLA identifiers
- Articles with Trove identifiers
- Articles with SUDOC identifiers
- ಲೇಖಕರು
- ಪತ್ರಕರ್ತರು