ಅನಿರ್ದಿಷ್ಟತೆಯ ತತ್ತ್ವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನೊಬೆಲ್ ಪ್ರಶಸ್ತಿ ವಿಜೇತ ಜರ್ಮನ್ ವಿಜ್ಞಾನಿ ವರ್ನರ್ ಹೈಸನ್‍ಬರ್ಗ್ ಅವರು ೧೯೨೭ರಲ್ಲಿ ಮಂಡಿಸಿದ ತತ್ತ್ವ. ಆಂಗ್ಲ ಭಾಷೆಯಲ್ಲಿ ಇದು Uncertainty Principle ಎಂದು ಕರೆಯಲ್ಪಡುತ್ತದೆ. ಈ ತತ್ತ್ವದ ಪ್ರಕಾರ: ಮೂಲಕಣವೊಂದರ ಸ್ಥಿತಿ ಮತ್ತು ಗತಿ (position ಮತ್ತು momemtum)ಇವೆರಡನ್ನೂ ಏಕಕಾಲಕ್ಕೆ ನಿರ್ದಿಷ್ಟವಾಗಿ ತಿಳಿಯಲು ಸಾಧ್ಯವಿಲ್ಲ. ಸ್ಥಿತಿಯನ್ನು ಹೆಚ್ಚು ನಿರ್ದಿಷ್ಟವಾಗಿ ತಿಳಿಯಲು ಮಾಡುವ ಪ್ರಯತ್ನ ಗತಿಯ ತಿಳಿವನ್ನು ಅನಿರ್ದಿಷ್ಟಗೊಳಿಸುತ್ತದೆ. ಅಂತೆಯೇ ಗತಿಯನ್ನು ನಿರ್ದಿಷ್ಟವಾಗಿ ತಿಳಿಯಲು ಮಾಡುವ ಪ್ರಯತ್ನ ಸ್ಥಿತಿಯ ತಿಳಿವನ್ನು ಅನಿರ್ದಿಷ್ಟಗೊಳಿಸುತ್ತದೆ. ಸ್ಥಿತಿಯಲ್ಲಿ ಕಾಣಬರುವ 'ಅನಿರ್ದಿಷ್ಟತೆಯ ಅಂಶ'ವನ್ನು ಗತಿಯಲ್ಲಿ ಕಾಣಬರುವ 'ಅನಿರ್ದಿಷ್ಟತೆಯ ಅಂಶ'ದೊಡನೆ ಗುಣಿಸಿದಾಗ ಗುಣಲಬ್ಧವು, ಕನಿಷ್ಠ, ಪ್ಲಾಂಕ್‌ನ ಸಂಖ್ಯೆಯಾದ hನನ್ನು, 2 \pi ನಿಂದ ಭಾಗಿಸಿದಷ್ಟಾದರೂ ಇರುತ್ತದೆ.

\Delta x  : ಸ್ಥಿತಿಯಲ್ಲಿ ಕಾಣಬರುವ ಅನಿರ್ದಿಷ್ಟತೆಯ ಅಂಶ

 \Delta p  : ಗತಿಯಲ್ಲಿ ಕಾಣಬರುವ ಅನಿರ್ದಿಷ್ಟತೆಯ ಅಂಶ

 h  : ಪ್ಲಾಂಕ್‌ನ ಸಂಖ್ಯೆ = 6.626068*10^{-34}*m^2 ...kg/s

\pi : ಪೈ = (ಸುಮಾರು) 3.14159265

 \Delta x * \Delta p \frac {h}{2 \pi}

\Delta x ಅನ್ನು ಕಡಿಮೆ ಮಾಡಿದಷ್ಟೂ,  \Delta p ಹೆಚ್ಚು ಆಗುತ್ತದೆ. ಹಾಗೆ,  \Delta p ಅನ್ನು ಕಡಿಮೆ ಮಾಡಿದಷ್ಟೂ, \Delta x ಹೆಚ್ಚು ಆಗುತ್ತದೆ. \Delta x ಮತ್ತು  \Delta p ಇವೆರಡನ್ನೂ ಏಕಕಾಲಕ್ಕೆ ಬೇಕೆನಿಸಿದಷ್ಟು ಕಡಿಮೆ ಮಾಡಲಾಗದು. ಈ ಅನಿರ್ದಿಷ್ಟತೆ ಪ್ರಾಕೃತಿಕವಾದದ್ದು. ಅದಕ್ಕೆ ತಿಳಿಯಲು ಯತ್ನಿಸುವವರ ಇತಿಮಿತಿಗಳು ಕಾರಣವಲ್ಲ.